Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?

Published : Dec 02, 2025, 09:12 PM IST

ದೇವಸ್ಥಾನದಲ್ಲಿ ಭೂಮಿಕಾಳ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಆಘಾತದಿಂದ ಭಾಗ್ಯಮ್ಮನಿಗೆ ದನಿ ಮರಳಿ ಬರುತ್ತದೆ. ಮತ್ತೊಂದೆಡೆ, ಮಲ್ಲಿಯನ್ನು ಹುಡುಕುತ್ತಿರುವ ಜೈದೇವನು, ಆಕೆ ತನ್ನ ಕಣ್ಣೆದುರೇ ಹಾದು ಹೋದರೂ ಕುಡಿದ ನಶೆಯಲ್ಲಿದ್ದ ರಿಂದ ಕಾಣಿಸಿಲ್ಲ, ಆದರೆ ಭಾಗ್ಯಮ್ಮ ಕಣ್ಣಿಗೆ ಬೀಳ್ತಾಳೆ. ಮುಂದೇನು?

PREV
16
ಭಾಗ್ಯಮ್ಮನ ದನಿ ವಾಪಸ್​

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿರೋ ಭೂಮಿಕಾ, ಮಗ-ಸೊಸೆಯನ್ನು ನೋಡಲು ಮನೆ ಬಿಟ್ಟ ಭಾಗ್ಯಮ್ಮ, ಶಕುಂತಲಾಳನ್ನು ಹುಡುಕಿ ಬಂದ ಗೌತಮ್​ ಎಲ್ಲರೂ ಒಂದಾಗುವ ಸಮಯ ಬಂದೇ ಬಿಟ್ಟಿದೆ. ಭೂಮಿಕಾ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಭಾಗ್ಯಮ್ಮ ಭೂಮಿಕಾ ಎಂದು ಕೂಗಿದ್ದಾಳೆ. ಅಲ್ಲಿಗೆ ಆಕೆಗೆ ದನಿ ವಾಪಸ್​ ಬಂದಿದೆ.

26
ಎಲ್ಲರೂ ಕಾಣಿಸಿಕೊಂಡು ಬಿಟ್ಟರು!

ಇನ್ನೇನು ಅಮೃತಧಾರೆ (Amruthadhaare)ಯಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎನ್ನುವಾಗಲೇ ಜೈದೇವನಿಗೆ ಮಲ್ಲಿ, ಭೂಮಿಕಾ ಮತ್ತು ಆಕಾಶ್​ ಕಾಣಿಸಿಕೊಂಡು ಬಿಟ್ಟಿದ್ದಾರೆ!

36
ದೇವಸ್ಥಾನದಲ್ಲಿ ಜೈದೇವ

ಪೂಜೆ ಮಾಡಿಸಿಕೊಂಡು ಬಾ ಎಂದು ಶಕುಂತಲಾ ಒತ್ತಾಯಪೂರ್ವಕವಾಗಿ ಜೈದೇವನನ್ನು ದೇವಸ್ಥಾನಕ್ಕೆ ಕಳುಹಿಸಿದ್ದಾಳೆ. ಆದರೆ ಜೈದೇವ ಕಂಠಪೂರ್ತಿ ಕುಡಿದು ಹೋಗಿದ್ದಾನೆ. ಆತ ಕುಳಿತ ಕಾರಿನ ಎದುರೇ ಮಲ್ಲಿ, ಆಕಾಶ್​ ಮತ್ತು ಭೂಮಿಕಾ ಹೋಗಿದ್ದಾರೆ.

46
ಕಾರಿನ ಪಕ್ಕವೇ...

ಕಾರಿನ ಪಕ್ಕದಲ್ಲಿಯೇ ಹಾಸು ಹೋದಾಗ ಜೈದೇವ್​ ಕಣ್ಣುಮುಚ್ಚಿ ನಶೆಯಲ್ಲಿ ತೇಲಾಡುತ್ತಿದ್ದ. ಇನ್ನೇನು ಕಣ್ಣು ಬಿಡಬೇಕು ಎನ್ನುವಷ್ಟರಲ್ಲಿ ಅಯ್ಯೋ ದೇವರೇ ಎಲ್ಲಿ ಇವರೆಲ್ಲಾ ಕಾಣಿಸಿಕೊಳ್ಳುತ್ತಾರಪ್ಪೋ, ಮುಗಿಯಿತಲ್ಲ ಕಥೆ ಎನ್ನುವಷ್ಟರಲ್ಲಿಯೇ ಪಕ್ಕದಲ್ಲಿಯೇ ಎಲ್ಲರೂ ಹಾದು ಹೋಗಿದ್ದಾರೆ.

56
ನೋಡಲಿಲ್ಲ ಎನ್ನೋದೇ ಸಮಾಧಾನ

ಆದರೆ, ಜೈದೇವ ಅವರನ್ನು ನೋಡಲಿಲ್ಲ ಎನ್ನುವುದೇ ಸಮಾಧಾನ. ಮಲ್ಲಿಯ ಕೈಯಲ್ಲಿ ಪೇಪರ್​ಗೆ ಸಹಿ ಹಾಕಿಸಿಕೊಂಡು ಸಂಪೂರ್ಣ ಆಸ್ತಿಯನ್ನು ಲಪಟಾಯಿಸಲು ಆತನನ್ನು ಹುಡುಕುತ್ತಿರೋ ಜೈದೇವನಿಗೆ ಕೈಗೆ ಬಂದ ತುತ್ತು ಈಗ ಬಾಯಿಗೆ ಇಲ್ಲವಾಗಿದೆ. ಮಲ್ಲಿ ಅಲ್ಲಿಯೇ ಹೋದರೂ ಆತನ ನಶೆಯಿಂದ ಆಕೆ ಕಾಣಿಸಲಿಲ್ಲ.

66
ಮುಂದೇನಾಗತ್ತೆ?

ಇದರ ಹೊರತಾಗಿಯೂ ಅವರಿಗೆ ಅಪಾಯ ತಪ್ಪಿದ್ದಲ್ಲ. ಹೇಳಿ ಕೇಳಿ ಇಡೀ ಕುಟುಂಬವೇ ಆ ದೇವಸ್ಥಾನದಲ್ಲಿ ಜಮಾಯಿಸಿದೆ. ಎಲ್ಲರೂ ಒಟ್ಟಿಗೇ ಸಿಗುವ ಸಂದರ್ಭವಿದು. ಮುಂದೇನಾಗತ್ತೆ ಎಂದು ನೋಡಬೇಕಿದೆ.

Read more Photos on
click me!

Recommended Stories