BBK 12: ವೈಷ್ಣವಿಯಿಂದ ಹಿಡಿದು ಶಿಶಿರ್ ವರೆಗೆ ಎಲ್ಲರ ಬಾಯಲ್ಲೂ ಗಿಲ್ಲಿ, ಯಮುನಾ ಮನಸ್ಸು ಗೆದ್ದ ಸ್ಪರ್ಧಿ ಯಾರು?

Published : Dec 02, 2025, 04:21 PM IST

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಹವಾ ಜೋರಾಗಿದೆ. ಈ ಬಾರಿಯ ಬಿಗ್‌ ಬಾಸ್‌ ಶೋವನ್ನು ಒನ್ ಮ್ಯಾನ್‌ ಶೋ ಎಂದೇ ಕರೆಯಲಾಗ್ತಿದೆ. ಗಿಲ್ಲಿ ಫ್ಯಾನ್ಸ್‌ ಮಾತ್ರ ಅಲ್ಲ ಕಿರುತೆರೆ ಕಲಾವಿದರು, ಮಾಜಿ ಸ್ಪರ್ಧಿಗಳಿಗೂ ಗಿಲ್ಲಿ ಫೆವರೆಟ್‌. ಯಾರೆಲ್ಲ ಗಿಲ್ಲಿ ಪರ ಗೊತ್ತಾ?  

PREV
16
ಗಿಲ್ಲಿ ಆಟ ಮೆಚ್ಚಿದ ಶಿಶಿರ್

ಹಿಂದಿನ ವಾರ ಮನೆಗೆ ಬಂದಿದ್ದ ಅತಿಥಿಗಳ ಜೊತೆ ಗಿಲ್ಲಿ ತಪ್ಪಾಗಿ ನಡೆದುಕೊಂಡಿದ್ರು ಎನ್ನುವ ಆರೋಪವೊಂದು ಕೇಳಿ ಬಂದಿತ್ತು. ಅದ್ರ ಬಗ್ಗೆ ಕಿಚ್ಚ ವೇದಿಕೆ ಮೇಲೆ ಚರ್ಚೆ ನಡೆಸಿದ್ದಾರೆ. ಬಿಗ್ ಬಾಸ್ 11ರ ಸ್ಪರ್ಧಿ, ನಟ ಶಿಶಿರ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ಪರ ಶಿಶಿರ್ ಬ್ಯಾಟ್ ಬೀಸಿದ್ದಾರೆ. ಗಿಲ್ಲಿ ಮಾಡಿದ್ರಲ್ಲಿ ಎಲ್ಲವೂ ತಪ್ಪಿರಲಿಲ್ಲ. ಕೆಲವೊಂದು ಕಡೆ ಅವರು ಎಡವಿದ್ದಾರೆ. ಆದ್ರೆ ತಿದ್ದಿ ನಡೆಯುವ ಅವರ ಗುಣ ಇಷ್ಟವಾಗುತ್ತೆ ಎಂದಿದ್ದಾರೆ.

26
ಬಿಗ್ ಬಾಸ್ ಬಗ್ಗೆ ನಟಿ ವೈಷ್ಣವಿ ಕೌಂಡಿನ್ಯ ಹೇಳಿದ್ದೇನು?

ಇನ್ನು ನಟಿ ವೈಷ್ಣವಿ ಕೂಡ ಗಿಲ್ಲಿ ಪರವೇ ಮಾತನಾಡಿದ್ದಾರೆ. ಬಿಗ್ ಬಾಸ್ ಶೋವನ್ನು ಪ್ರತಿ ದಿನ ನೋಡ್ತಿರುವ ವೃಷ್ಣವಿ, ಗಿಲ್ಲಿ ಬುದ್ಧಿವಂತಿಕೆಯಿಂದ ಆಟ ಆಡ್ತಿದ್ದಾರೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಯಾರು ವಿನ್ನರ್ ಎನ್ನುವ ಪ್ರಶ್ನೆಗೆ ಮಾತ್ರ ವೈಷ್ಣವಿ ಸ್ಪಷ್ಟ ಉತ್ತರ ನೀಡಿಲ್ಲ. ಯಾರು ಚೆನ್ನಾಗಿ ಆಡ್ತಾರೋ ಅವರು ಎನ್ನುವ ಮೂಲಕ ಪರೋಕ್ಷವಾಗಿ ಗಿಲ್ಲಿ ಹೆಸರು ಸೂಚಿಸಿದ್ದಾರೆ.

36
ಗಿಲ್ಲಿ ಇಷ್ಟಪಟ್ಟ ಯಮುನಾ

ಬಿಗ್ ಬಾಸ್ 11ರ ಸ್ಪರ್ಧಿ ಯಮುನಾಗೂ ಇಷ್ಟವಾಗಿದ್ದು ಗಿಲ್ಲಿ. ಗಿಲ್ಲಿ ಯಾರ ಬಗ್ಗೆಯೂ ಬೆನ್ನ ಹಿಂದೆ ಮಾತನಾಡಲ್ಲ. ಅಹಂ ಇಲ್ಲ. ಯಾವುದೇ ಸೇಡು ಗಿಲ್ಲಿಗಿಲ್ಲ, ಆ ಕ್ಷಣವನ್ನು ಅವರು ಜೀವಿಸ್ತಿದ್ದಾರೆ. ಹಾಗಾಗಿಯೇ ನನಗೆ ಗಿಲ್ಲಿ ಆಟ ನನಗೆ ತುಂಬಾ ಇಷ್ಟ ಎಂದು ಯಮುನಾ ಹೇಳಿದ್ದಾರೆ.

46
ಟಾಪ್ 3 ನಲ್ಲಿ ಯಾರನ್ನು ನೋಡಲು ಬಯಸ್ತಾರೆ ಯಮುನಾ?

ನಟಿ ಯಮುನಾಗೆ ಗಿಲ್ಲಿ ಮಾತ್ರವಲ್ಲ ರಕ್ಷಿತಾ ಕೂಡ ಇಷ್ಟವಾಗಿದ್ದಾರೆ. ಎರಡನೇ ವಾರವೇ ಸ್ಪರ್ಧಿಗಳ ಕೆಂಗನ್ಣಿಗೆ ಗುರಿಯಾಗಿದ್ದ ರಕ್ಷಿತಾ ತಾಳ್ಮೆಯನ್ನು ಯಮುನಾ ಮೆಚ್ಚಿದ್ದಾರೆ. ಇಷ್ಟೇ ಅಲ್ದೆ ರಘು ಅವರಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ತುಂಬಾ ಕೋಪವಿದ್ರೂ ಅದನ್ನು ರಘು ತೋರಿಸಿಕೊಳ್ತಿಲ್ಲ. ರಘು ಅವರಿಂದ ತಾಳ್ಮೆ ಕಲಿಯಬೇಕು, ಅವರ ಮನಸ್ಸು ಮಗುತರ ಇದೆ ಎಂದು ಯಮುನಾ ಹೇಳಿದ್ದಾರೆ. ಟಾಪ್ 3 ರಲ್ಲಿ ಗಿಲ್ಲಿ, ರಘು ಹಾಗೂ ರಕ್ಷಿತಾರನ್ನು ನೋಡಲು ಯಮುನಾ ಬಯಸಿದ್ದಾರೆ.

56
ಎಲ್ಲರ ಅಚ್ಚುಮೆಚ್ಚು ಗಿಲ್ಲಿ

ಸೋಶಿಯಲ್ ಮೀಡಿಯಾದಿಂದ ಹಿಡಿದು ಎಲ್ಲ ಕಡೆ ಗಿಲ್ಲಿಗೆ ಬೆಂಬಲ ಹೆಚ್ಚಿದೆ. ಗಿಲ್ಲಿ ಫ್ಯಾನ್ಸ್ ಸಂಖ್ಯೆ ಡಬಲ್ ಆಗಿದೆ. ಗಿಲ್ಲಿ ತಮಾಷೆ ನೋಡ್ತಾ ನೋವು ಮರೆಯುತ್ತಿದ್ದೇವೆ ಎನ್ನುವ ಪೋಸ್ಟ್ ಗಳು ವೈರಲ್ ಆಗ್ತಿದೆ. ಗಿಲ್ಲಿ ಕುರಿತು ಸಾಕಷ್ಟು ಸಾಂಗ್ ರೆಡಿ ಆಗ್ತಿದ್ದು, ದಿನಕ್ಕೊಂದು ಸಾಂಗ್ ವೈರಲ್ ಆಗ್ತಿದೆ. ಗಿಲ್ಲಿಗೆ ಅನೇಕ ಕಲಾವಿದರು ಬೆಂಬಲ ನೀಡಿದ್ದು, ಈ ಬಾರಿ ಟಾಪ್ 3 ರಲ್ಲಿ ಗಿಲ್ಲಿ ಇರುವ ಸಾಧ್ಯತೆ ಬಹುತೇಕ ಹೆಚ್ಚಿದೆ.

66
ಒನ್ ಮ್ಯಾನ್ ಶೋ

ಬಿಗ್ ಬಾಸ್ 12 ಶುರುವಾದಾಗಿನಿಂದ ಗಿಲ್ಲಿ ಅಧ್ಬುತವಾಗಿ ಆಡ್ತಿದ್ದಾರೆ. ರಜತ್, ಮಂಜು ಏನೇ ಆರ್ಭಟ ಮಾಡಿದ್ರೂ ಗಿಲ್ಲಿ ಮುಂದೆ ಸೋತಿದ್ದಾರೆ. ಹಾಗಾಗಿಯೇ ವೀಕ್ಷಕರು ಈ ಬಾರಿ ಬಿಗ್ ಬಾಸ್ ಒನ್ ಮ್ಯಾನ್ ಶೋ ಎನ್ನುತ್ತಿದ್ದಾರೆ.

Read more Photos on
click me!

Recommended Stories