ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ: ನಟನ ಇಂಟರೆಸ್ಟಿಂಗ್​ ಮಾಹಿತಿ

Published : Feb 09, 2026, 01:57 PM IST

'ಅಮೃತಧಾರೆ' ಧಾರಾವಾಹಿಯ ಮೂಲಕ ಮನೆಮಾತಾದ ನಟ ಆನಂದ್, ತೆರೆಮೇಲೆ ಎಲ್ಲರನ್ನೂ ನಗಿಸುತ್ತಾರೆ. ಆದರೆ, ಅವರ ನಿಜ ಜೀವನದಲ್ಲಿ ಪತ್ನಿ ಚೈತ್ರಾ ಮತ್ತು ತಾಯಿಯ ಜೀವ ಉಳಿಸಲು ಕೊರೋನಾ ಸಮಯದಲ್ಲಿ ನಡೆಸಿದ ಹೋರಾಟ ಮಾತ್ರ ಕಣ್ಣೀರು ತರಿಸುತ್ತದೆ. ಅವರ ಬದುಕಿನ ಏಳುಬೀಳುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

PREV
16
ಎಲ್ಲರಿಗೂ ಬೇಕು ಇಂಥ ಗೆಳೆಯ

ಗೆಳೆಯ ಆನಂದ್​ ಎಂದರೆ ಸಾಕು, ಸೀರಿಯಲ್​ ಪ್ರಿಯರಿಗೆ ಮೊದಲು ನೆನಪಾಗುವುದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​. ಗೌತಮ್​ ಮತ್ತು ಆನಂದ್​ ಅವರ ಗೆಳೆತನಕ್ಕೆ ಸಾಟಿಯೇ ಇಲ್ಲ. ಇದ್ದರೆ ಇಂಥ ಗೆಳೆಯರು ಇರಬೇಕು ಎನ್ನುವಷ್ಟರ ಮಟ್ಟಿಗೆ ಇವರ ಪ್ರೀತಿ ಬೆಳೆದಿದೆ. ಗೆಳೆಯ ಗೌತಮ್​ ಮತ್ತು ಆತನ ಪತ್ನಿ ಭೂಮಿಕಾ ಇಬ್ಬರನ್ನೂ ಒಂದು ಮಾಡಲು ಆನಂದ್​ ಮಾಡುವ ಪ್ಲ್ಯಾನ್​ಗಳು, ಗೌತಮ್​ಗೆ ಕಾಲೆಳೆಯುವ ರೀತಿ ಎಲ್ಲವೂ ಆನಂದ್​ ಅವರ ಅಪೂರ್ವ ಅಭಿನಯಕ್ಕೆ ಸಾಕ್ಷಿಯಾಗಿದೆ. ಇವರ ನಿಜವಾದ ಹೆಸರು ಕೂಡ ಆನಂದ್​ ಎನ್ನೋದು ವಿಶೇಷ

26
ನಟನೆ ವ್ಹಾವ್​

ಇವರ ನಟನೆಯನ್ನು ನೋಡಿ ಎಲ್ಲರೂ ತಲೆದೂಗುತ್ತಿದ್ದಾರೆ. ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಆನಂದ್, ಇದೀಗ ಅಮೃತಧಾರೆಯಲ್ಲಿಯೂ ಎಲ್ಲರನ್ನೂ ನಗಿಸುತ್ತಿದ್ದಾರೆ. ವಿಶೇಷವೆಂದರೆ ಇವರ ಅಸಲಿ ಹೆಸರು ಕೂಡ ಆನಂದ್​. ಇಂದು ಅರ್ಥಾತ್​ ಫೆ.9 ಇವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಪತ್ನಿ ಚೈತ್ರಾ ವಿಶೇಷ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಜೀ ವಾಹಿನಿ ಕೂಡ ವಿಡಿಯೋ ಶೇರ್​ ಮಾಡಿದೆ.

36
ಮಗನನ್ನು ಮೀರಿಸೋ ಅಪ್ಪ

ಇವರ ಮಗ ದುಷ್ಯಂತ್‌ ಚಕ್ರವರ್ತಿ ಕೂಡ ಅಪ್ಪನನ್ನು ಮೀರುವ ನಟನೆ ಮಾಡುತ್ತಿದ್ದಾನೆ. ಆಕಾಶ್​ ಹೆಸರಿನಲ್ಲಿ ಗೌತಮ್​ ಮತ್ತು ಭೂಮಿಕಾ ಪುತ್ರನಾಗಿ ಮಿಂಚುತ್ತಿದ್ದಾನೆ ದುಷ್ಯಂತ್​. ಇದಾಗಲೇ, ಆನಂದ್​ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದಾರೆ.

46
ನೋವಿನ ಜೀವನ

ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ಎಷ್ಟೋ ನಟರು ಹಿಂದೊಮ್ಮೆ ತುತ್ತು ಅನ್ನಕ್ಕೂ ಪರದಾಡಿದ್ದು ಇದೆ. ಇನ್ನು ಕೆಲವರು ಬಾಲ್ಯದಿಂದಲೂ ನೋವನ್ನೇ ಹೊತ್ತು ಬಂದಿದ್ದರೆ, ಮತ್ತೆ ಕೆಲವರಿಗೆ ಕಹಿ ಘಟನೆಗಳಿಂದ ಜೀವನ ತತ್ತರಿಸಿ ಹೋಗಿರುವುದೂ ಉಂಟು. ಬಹುತೇಕ ಎಲ್ಲರ ಬಾಳಿನಲ್ಲಿಯೂ ಈ ಏಳು-ಬೀಳುಗಳು ಸಹಜವೇ. ಅದೇ ರೀತಿ ಎಲ್ಲರನ್ನೂ ನಗಿಸುವ ಆನಂದ್​ ಅವರ ಜೀವನದಲ್ಲಿಯೂ ಬಹು ದೊಡ್ಡ ಆಘಾತವೇ ನಡೆದಿತ್ತು.

56
ಬದುಕಿನಲ್ಲಿ ಹೋರಾಟ

ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದರು. ಅದನ್ನು ಆನಂದ್​ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ವೇಳೆ, ನಿಜ ಜೀವನದಲ್ಲಿ ಏಳುಬೀಳು ಕಂಡವರು ಆನಂದ್​ ಮತ್ತು ಚೈತ್ರಾ. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್​ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು.

66
ಕರೋನಾ ಟೈಮ್​ ಸಂಕಟ

ಈ ಹಿಂದೆ ಚೈತ್ರಾ, ಕರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್​ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್​ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories