'Dr Rajkumar​ ಸಾಕ್ಷಾತ್​ ದೇವರು' ಎನ್ನುತ್ತಲೇ ಸಾವಿನ ಹಾದಿಯಲ್ಲಿದ್ದಾಗ ಪ್ರಾರ್ಥನೆ ಮಾಡಿದ್ದನ್ನು ನೆನಪಿಸಿದ ಅಮಿತಾಭ್

Published : Oct 26, 2025, 03:26 PM IST

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಅಮಿತಾಭ್ ಬಚ್ಚನ್, ಡಾ.ರಾಜ್​ಕುಮಾರ್ ಅವರನ್ನು 'ಕನ್ನಡದ ದೇವರು' ಎಂದು ಬಣ್ಣಿಸಿದ್ದಾರೆ. ರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ ಅವರು, 'ಕೂಲಿ' ಚಿತ್ರದ ಅಪಘಾತದ ಸಮಯದಲ್ಲಿ ರಾಜ್‌ಕುಮಾರ್ ಪ್ರಾರ್ಥಿಸಿದ್ದನ್ನು ಸ್ಮರಿಸಿಕೊಂಡರು.

PREV
16
ಮೇರುನಟ ಡಾ.ರಾಜ್​ಕುಮಾರ್​

ಕರ್ನಾಟಕ ಕಂಡ ಅಪರೂಪದ ನಟ, ಡಾ.ರಾಜ್​ಕುಮಾರ್​ ಎನ್ನುವಲ್ಲಿ ಎರಡು ಮಾತೇ ಇಲ್ಲ. ನಟನೆಯಿಂದ ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಿಂದಲೂ ಅವರು ಹೆಸರುವಾಸಿಯಾದವರು. ಕನ್ನಡ ಬಿಟ್ಟು ಬೇರೆ ಭಾಷೆಗಳ ಸಿನಿಮಾಗಳಿಗೂ ಹೋಗದೇ, ರಾಜಕೀಯಕ್ಕೂ ಎಂಟ್ರಿ ಕೊಡದೇ ಸೀದಾ ಸಾದಾ ಜೀವನ ಮಾಡುತ್ತಲೇ ಕೋಟ್ಯಂತರ ಮಂದಿಯ ಅಭಿಮಾನಗಳಿಸಿದವರು ಡಾ.ರಾಜ್​. ಇದೇ ಕಾರಣಕ್ಕೆ ಅವರ ದಶಕಗಳ ಹಿಂದಿನ ಚಿತ್ರಗಳು ಆ ಚಿತ್ರಗಳ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿ ನಿಂತಿವೆ.

26
ರಾಜ್​ಕುಮಾರ್​ರನ್ನು ಹೊಗಳಿದ ಬಿಗ್​-ಬಿ

ಇಂಥ ಡಾ.ರಾಜ್​ಕುಮಾರ್​ ಅವರನ್ನು ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್​ ಅವರು ಹಾಡಿ ಕೊಂಡಾಡಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿ ಸಂದರ್ಭದಲ್ಲಿ ರಿಷಬ್​ ಶೆಟ್ಟಿ (Rishab Shetty) ಅವರು ಹಾಟ್​ ಸೀಟ್​ನಲ್ಲಿ ಕುಳಿತ ಸಂದರ್ಭದಲ್ಲಿ ಅಮಿತಾಭ್​ ಅವರು ಡಾ.ರಾಜ್​ ಅವರನ್ನು ಸ್ಮರಿಸುತ್ತಲೇ ಅವರ ಕನ್ನಡದ ದೇವರು ಎಂದು ಹೇಳಿದ್ದಾರೆ.

36
ಡಾ.ರಾಜ್​ ದೇವರು ಇದ್ದಂತೆ

​​ರಾಜಕುಮಾರ್ ಅವರನ್ನು ಭೇಟಿಯಾದಾಗಲೆಲ್ಲಾ ಅವರ ಆಶೀರ್ವಾದ ಪಡೆಯುತ್ತಿದ್ದೆ. ಅವರು ನೀಡಿಹೋಗಿರುವ ಕೊಡುಗೆ ಅಪಾರವಾದದ್ದು. ಅವರ ನಟನೆಗೆ ಮತ್ತೊಬ್ಬರು ಸರಿಸಾಟಿಯಾಗಿರಲು ಸಾಧ್ಯವೇ ಇಲ್ಲ. ಅವರೊಬ್ಬ ದೇವರು ಇದ್ದಂತೆ. ತುಂಬಾ ಸಿಂಪಲ್ ವ್ಯಕ್ತಿ. ಅವರನ್ನು ಕಂಡಾಗಲೆಲ್ಲ ನಾನು ಆಶ್ಚರ್ಯ ಪಡುತ್ತಿದ್ದೆ ಎಂದಿದ್ದಾರೆ ಅಮಿತಾಭ್​ ಬಚ್ಚನ್​

46
ಜೀವನ ಶೈಲಿಗೆ ಮೆಚ್ಚುಗೆ

ಸದಾ ಅವರು ಸರಳ ಬಟ್ಟೆ ಧರಿಸುತ್ತಿದ್ದರು. ಅವರ ಜೀವನ ಶೈಲಿ ನೋಡಿದರೆ ಅಂಥ ದೊಡ್ಡ ನಟನಾ ಎಂದು ಹೇಳಲು ಸಾಧ್ಯವೇ ಇರಲಿಲ್ಲ. ರಾಜ್​ಕುಮಾರ್ ಅವರಂಥ ಮೇರುನಟನ ಆಶೀರ್ವಾದ ಪಡೆದ ನಾವೇ ಧನ್ಯ’ ಎಂದು ಭಾವುಕರಾದರು ಅಮಿತಾಭ್​.

56
ಸಾವು-ಬದುಕಿನ ನಡುವೆ ಹೋರಾಟ

ಇದೇ ವೇಳೆ, 1983ರಲ್ಲಿ ಕೂಲಿ ಚಿತ್ರೀಕರಣದ ಸಮಯದಲ್ಲಿ, ಅಮಿತಾಭ್​ ಬಚ್ಚನ್ ಸಹನಟ ಪುನೀತ್ ಇಸ್ಸಾರ್ ಅವರೊಂದಿಗೆ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಚಾಕು ಇರಿತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಅವರಿಗೆ ತೀವ್ರ ಆಂತರಿಕ ರಕ್ತಸ್ರಾವ ಮತ್ತು ವಾರಗಳವರೆಗೆ ಗಂಭೀರ ಸ್ಥಿತಿಯಲ್ಲಿದ್ದರು. ಅಂಥ ಸಂದರ್ಭದಲ್ಲಿ ಡಾ.ರಾಜ್​ಕುಮಾರ್​ ಕೂಡ ಅಮಿತಾಭ್​ ಅವರಿಗಾಗಿ ಹಲವಾರು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ನಟ ತಿಳಿಸಿದ್ದಾರೆ.

66
ಕೊನೆ ಕ್ಷಣದವರೆಗೂ...

"ಅಂದಿನಿಂದ, ಅವರು ನಿಧನರಾಗುವ ದಿನದವರೆಗೂ, ನಾವು ಸಂಪರ್ಕದಲ್ಲಿದ್ದೆವು. ನಾನು ಅವರ ಮಕ್ಕಳೊಂದಿಗೂ ಆತ್ಮೀಯನಾಗಿದ್ದೆ, ಅವರು ಈಗ ತಮ್ಮದೇ ಆದ ರೀತಿಯಲ್ಲಿ ಸ್ಟಾರ್ ಗಳಾಗಿದ್ದಾರೆ ಎಂದು ಅಮಿತಾಭ್​ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories