ಅಗಲಿದ ಅಪ್ಪ-ಅಮ್ಮನ ಜೊತೆಗಿನ ಸುಂದರ ಕ್ಷಣಗಳನ್ನು ನೆನಪಿಸಿದ ಬಿಗ್ ಬಾಸ್ ಸ್ಪರ್ಧಿ Aishwarya Sindhogi

Published : Feb 21, 2026, 02:42 PM IST

Aishwarya Sindhogi: ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಅಗಲಿದ ತಮ್ಮ ಅಪ್ಪ-ಅಮ್ಮನನ್ನು ನೆನಪಿಸಿಕೊಂಡು ಹಳೆಯ ಮಧುರ ನೆನಪುಗಳ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
16
ಐಶ್ವರ್ಯ ಸಿಂಧೋಗಿ

ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ, ಖಳ ನಾಯಕಿಯಾಗಿ, ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದ ನಟಿ ಐಶ್ವರ್ಯ ಸಿಂಧೋಗಿ. ಇವರುಕನ್ನಡ ಕಿರುತೆರೆಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು. ಇದೀಗ ನಟಿ ತಮ್ಮ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

26
ಅಪ್ಪ-ಅಮ್ಮನ ಫೋಟೊ ಹಂಚಿಕೊಂಡ ನಟಿ

ಐಶ್ವರ್ಯ ಸಿಂಧೋಗಿ ಇದೀಗ ಅಗಲಿದ ತಮ್ಮ ಅಮ್ಮ-ಅಪ್ಪನ ಜೊತೆಗೆ ಕಳೆದಂತಹ ಸುಂದರವಾದ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ. ಬಾಲ್ಯದಿಂದ ಹಿಡಿದು, ಅಪ್ಪ-ಅಮ್ಮ ಜೊತೆಗಿರುವವರೆಗಿನ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.

36
ಮುದ್ದಾದ ಕ್ಷಣಗಳು

ಅಪ್ಪ-ಅಮ್ಮನ ಜೊತೆಗೆ ಏರ್ ಪೋರ್ಟಲ್ಲಿ, ಅಮ್ಮ ಮುದ್ದು ಮಾಡುವ ಫೋಟೊಗಳು, ಪೊಲೀಸ್ ಡ್ರೆಸಲ್ಲಿ ಅಪ್ಪ, ಅಪ್ಪ-ಅಮ್ಮನ ಹಳೆಯ ಫೋಟೊಗಳು, ಅಪ್ಪನ ಕೈ ಹಿಡಿದು ಶಾಲೆಯಿಂದ ಬರುತ್ತಿರುವ ಫೋಟೊ, ಅಮ್ಮನ ಜೊತೆಗೆ ಝೂನಲ್ಲಿ ಕುಳಿತಿರುವ ಫೋಟೊ, ಅಪ್ಪನ ಜೊತೆಗೆ ಜೋಕಾಲಿ ಆಡಿದ ಫೋಟೊ, ಕೊನೆಗೆ ಅಪ್ಪ-ಅಮ್ಮನ ಫೋಟೊಗೆ ಹಾರಿ ಹಾಕಿ, ತಾನು ಕೈಮುಗಿದು ಕುಳಿರುವ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.

46
ತಂದೆ-ತಾಯಿಯನ್ನು ಕಳೆದುಕೊಂಡ ಐಶ್ವರ್ಯ

ಐಶ್ವರ್ಯಾ ಸಿಂಧೋಗಿ ಅವರಿಗೆ ಅಮ್ಮ-ಅಪ್ಪ ಇಲ್ಲ. ಇಬ್ಬರು ಕೂಡ ಎರಡು ವರ್ಷಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. 2018ರಲ್ಲಿ ಐಶ್ವರ್ಯಾ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಂತರ 2020ರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಐಶ್ವರ್ಯಾ ಅವರ ತಾಯಿ ಕೂಡ ಸಾವನ್ನಪ್ಪಿದ್ದರು. ಬಳಿಕ ಒಬ್ಬಂಟಿಯಾಗಿ ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ ಐಶ್ವರ್ಯ.

56
ಅಪ್ಪನ ಸಾವಿನ ಬಳಿಕ ಕಷ್ಟಕರ ಜೀವನ

ಐಶ್ವರ್ಯ ತಂದೆಯ ಸಾವಿನ ಬಳಿಕ ಕಷ್ಟದಲ್ಲಿ ದಿನದೂಡಿದ್ದರು ಐಶ್ವರ್ಯ. ಅವರ ಬ್ಯುಸಿನೆಸ್ ನಲ್ಲೂ ಹಲವರು ಮೋಸ ಮಾಡಿದ್ದರಂತೆ. ಆದರೆ ಎಲ್ಲಾ ಕಷ್ಟವನ್ನು ಮೆಟ್ಟಿ ನಿಂತು ಐಶ್ವರ್ಯ ನಟನೆಯಲ್ಲಿ ತೊಡಗಿದರು, ಬಳಿಕ ಅಮ್ಮನನ್ನು ಸಹ ಕಳೆದುಕೊಂಡರು. ಆದರೆ ಕಲೆ, ನಟನಾ ಲೋಕ ಕೈ ಬಿಟ್ಟಿಲ್ಲ ಎನ್ನುತ್ತಾರೆ ಐಶ್ವರ್ಯ.

66
ಶಿಶಿರ್ ಜೊತೆಗಿನ ಸಂಬಂಧ

ಸದ್ಯ ಕೆಲವೊಂದು ಸೀರಿಯಲ್, ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿರುವ ಐಶ್ವರ್ಯ, ಹೆಚ್ಚು ಸುದ್ದಿಯಲ್ಲಿರುವುದು ಶಿಶಿರ್ ಜೊತೆಗಿನ ಗೆಳತನದಿಂದ. ಇಬ್ಬರೂ ಬಿಗ್ ಬಾಸ್ ಬಳಿಕ ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾ, ಟ್ರಾವೆಲ್ ಮಾಡುತ್ತಿದ್ದಾರೆ. ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಏನೋ ಇದೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ. ಆದರೆ ಇಬ್ಬರೂ ಆ ಬಗ್ಗೆ ಮೌನವಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories