ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಚಿತ್ರಾಲ್ ರಂಗಸ್ವಾಮಿ ಅವರು ಷೋ ಬಗ್ಗೆ ಕೆಲವು ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಎಲಿಮಿನೇಷನ್‌ಗಳನ್ನು ಮೊದಲೇ ಒಪ್ಪಂದದ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ಸಾರ್ವಜನಿಕ ವೋಟಿಂಗ್ ಪ್ರಕ್ರಿಯೆಯು ಕೇವಲ ನಾಟಕ ಎಂದು ಅವರು ಆರೋಪಿಸಿದ್ದಾರೆ.
ಬಿಗ್ಬಾಸ್ ಬಗ್ಗೆ ಇದಾಗಲೇ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಹುತೇಕ ಎಲ್ಲಾ ಭಾಷೆಗಳ ಬಿಗ್ಬಾಸ್ನಲ್ಲಿಯೂ ಕೆಲವೊಂದು ಅಪಸ್ವರಗಳು ಕೇಳಿಬರುವುದು ಉಂಟು. ಹೆಸರು ರಿಯಾಲಿಟಿ ಷೋ ಆದ್ರೂ ಅದರ ರಿಯಾಲಿಟಿ ದೇವರಿಗೇ ಪ್ರೀತಿ ಎನ್ನುವ ಮಾತು ಬಹುತೇಕ ಎಲ್ಲಾ ರಿಯಾಲಿಟಿ ಷೋಗಳಲ್ಲಿಯೂ ಕೇಳಿ ಬರುವುದು ಉಂಟು. ಆದರೆ ಇದೀಗ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ನಟಿ, ಬಾಡಿ ಬಿಲ್ಡರ್ ಆಗಿರೋ ಚಿತ್ರಾಲ್ ರಂಗಸ್ವಾಮಿ ಅವರು ಶಾಕಿಂಗ್ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ.
26
ಮೊದಲೇ ಸಹಿ
Rapid Rashmi ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ನಟಿ ಚಿತ್ರಾಲಾ, ಹೇಗೆ ಗೊತ್ತಿಲ್ಲದೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ, ವೋಟಿಂಗ್ ನೆಪದಲ್ಲಿ ಮೊದಲೇ ಎಲಿಮಿನೇಟ್ ಮಾಡೋದನ್ನು ಫಿಕ್ಸ್ ಮಾಡಿಕೊಳ್ಳಲಾಗುತ್ತದೆ ಎಂದು ತನ್ನ ಅನುಭವಕ್ಕೆ ಬಂದಿರುವ ಮಾತುಗಳನ್ನಾಡಿದ್ದಾರೆ. ಅಂದು ನಡೆದ ಅವಮಾನದಿಂದ ಹೊರ ಬರಲು ಕಷ್ಟವಾಗಿದೆ ಎನ್ನುತ್ತಿದ್ದಾರೆ.
36
ಎಲಿಮಿನೇಷನ್ ಬಗ್ಗೆ ಹೇಳಿರ್ತಾರೆ
ಬಿಗ್ಬಾಸ್ಗೆ ಹೋಗುವ ಮೊದಲು ಒಂದು ಅಗ್ರೀಮೆಂಟ್ಗೆ ಸಹಿ ಹಾಕಿಸಿಕೊಳ್ತಾರೆ. ಅದರಲ್ಲಿ ಮೊದಲೇ ನಾವು ರಿಜೆಕ್ಟ್ ಆಗುವ ಬಗ್ಗೆ ಉಲ್ಲೇಖಿಸಿರಲಾಗುತ್ತದೆ. ಇರುವಷ್ಟು ದಿವಸ ದುಡ್ಡು ಕೊಡ್ತಾರೆ ಎಂದು ಆಸೆಯಿಂದ ಅಲ್ಲಿ ಹೋಗಬೇಕಷ್ಟೇ. ನಾನ್ಯಾಕೇ ಈ ಸುಳ್ಳು ಅಗ್ರೀಮೆಂಟ್ಗೆ ಸಹಿ ಹಾಕಬೇಕು ಎಂದು ನನಗೆ ಎನ್ನಿಸಿತು. ವ್ಯಕ್ತಿತ್ವದ ಆಟ ಎನ್ನುವ ಟ್ಯಾಗ್ಲೈನ್ ಬೇರೆ. ಅಲ್ಲಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಲು ಹೋಗಬೇಕಷ್ಟೇ. ಮೊದಲೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು, ಸ್ಟೇಜ್ ಮೇಲೆ ನಮ್ಮ ವ್ಯಕ್ತಿತ್ವ ಹಾಳು ಮಾಡ್ತಾರೆ. ಇದಕ್ಕೆ ರೆಡಿ ಇದ್ರೆ ಹೋಗಬೇಕು ಅಷ್ಟೇ ಎಂದು ಖಾರವಾಗಿ ನುಡಿದಿದ್ದಾರೆ ನಟಿ.
ನನ್ನನ್ನು ಈ ಷೋಗೆ ಕರೆದವರ ಬಳಿಯೇ ಈ ಬಗ್ಗೆ ಪ್ರಶ್ನಿಸಿದ್ದೆ. ಆದರೆ ಅದಕ್ಕೆ ಸೂಕ್ತ ಉತ್ತರ ಬರಲಿಲ್ಲ ಎಂದಿದ್ದಾರೆ. ಇದು ಸ್ಕ್ರಿಪ್ಟೆಡ್ ಅಂತಾರೆ. ಆದ್ರೆ ಸ್ಕ್ರಿಪ್ಟೆಡ್ ಅಲ್ಲ. ಅಲ್ಲಿ ನಡೆಯೋದೇ ಬೇರೆ ರೀತಿ. ಹೀಗೆಲ್ಲಾ ಒಪ್ಪಂದ ಮಾಡಿಕೊಂಡೇ ಆಗೋದು. ವೋಟಿಂಗ್ ಅಂತಾರೆ.. ಅಲ್ಲಿ ವೀಕ್ಷಕರೇ ಮತದಾರರು ಅಂತಾರೆ, ಎಲ್ಲವೂ ಸುಳ್ಳೇ ಎಂದು ಇನ್ನೊಂದು ಶಾಕಿಂಗ್ ವಿಷ್ಯ ಹೇಳಿದ್ದಾರೆ.
56
ವೋಟಿಂಗ್ ಅಂತಾರೆ, ಹಿಂದಿನ ದಿನವೇ ಪ್ಯಾಕ್ ಮಾಡಿಸ್ತಾರೆ
ನಾಳೆ ವೋಟಿಂಗ್ ನಡೆಯುತ್ತೆ, ನಿಮ್ಮ ಬಗ್ಗೆ ಗೊತ್ತಾಗತ್ತೆ ಎಂದು ಒಂದಿಷ್ಟು ಮಂದಿಯನ್ನು ಎಲಿಮಿನೇಟ್ ಮಾಡಿರುತ್ತಾರೆ. ಆದರೆ ವೋಟಿಂಗ್ ರಿಸಲ್ಟ್ ಏನು ಬರುತ್ತೋ ಅದರ ಹಿಂದಿನ ದಿನವೇ ಯಾರು ಹೊರಗೆ ಹೋಗಬೇಕೆಂದು ಡಿಸೈಡ್ ಆಗಿರುತ್ತೋ ಅವರು ಪ್ಯಾಕ್ ಮಾಡಿಕೊಳ್ಳಬೇಕು. ನಾವು ಹೋಗುವ ವಿಡಿಯೋ ಎಲ್ಲಾ ಮೊದಲೇ ಶೂಟ್ ಮಾಡಿಕೊಳ್ತಾರೆ ಎಂದು ನಟಿ ಹೇಳಿದ್ದಾರೆ.
66
ವೀಕ್ಷಕರ ಹೆಸರಲ್ಲಿ ಜ್ಯೂನಿಯರ್ ಆರ್ಟಿಸ್ಟ್
ವೀಕ್ಷಕರ ಓಟು ಅಂತಾರೆ. ಅಲ್ಲಿ ಒಂದಿಷ್ಟು ಅವರದ್ದೇ ಜನರನ್ನು ಕರೆಸಿಕೊಂಡಿರ್ತಾರೆ. 15 ಜನ ಜ್ಯೂನಿಯರ್ ಆರ್ಟಿಸ್ಟ್‌ಗಳು ವೋಟ್ ಹಾಕಿದ್ರು. ಆ ವೋಟ್‌ಗಳನ್ನು ಇಡೀ ಕರ್ನಾಟಕದವ್ರು ಹಾಕಿದ್ದು ಅಂತ ತೋರಿಸಿದ್ರು. ಮಧ್ಯರಾತ್ರಿಯೇ ನಮ್ಮ ಪ್ಯಾಕಿಂಗ್ ನಡೆದಿರುತ್ತದೆ. ಮಾರನೆಯ ದಿನ ವೋಟ್ ಅಂತ ವೀಕ್ಷಕರಿಗೆ ತೋರಿಸ್ತಾರೆ. ಆಮೇಲೆ ನಾವು ಹೊರಗಡೆ ಹೋಗುವ ರೀತಿ ಎಲ್ಲಾ ನಡೆಸುತ್ತಾರೆ. ಆದರೆ ಎಲ್ಲವೂ ಹಿಂದಿನ ರಾತ್ರಿಯೇ ಶೂಟಿಂಗ್ ಆಗಿ ಹೋಗಿರುತ್ತದೆ ಎಂದಿದ್ದಾರೆ ನಟಿ ಚಿತ್ರಾಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.