Amruthadhaare Serial: ಜಯದೇವ್‌ ಕುತಂತ್ರ ಜಾಸ್ತಿಯಾಯ್ತು! ಸಿಡಿದೆದ್ದ ಗೌತಮ್‌ ಈಗ ಸಾಮ್ರಾಜ್ಯ ಕಟ್ಟೋದು ಬಾಕಿ

Published : Feb 20, 2026, 11:07 PM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತನ್ನ ತಂದೆ ಕಾರ್ಯ ಮಾಡಲು ರೆಡಿ ಆಗಿದ್ದನು. ಆಗ ಗೌತಮ್‌, ಜಯದೇವ್‌ ಇಬ್ಬರೂ ಸೇರಿಕೊಂಡು ಪಿಂಡ ಪ್ರಧಾನ ಮಾಡಲು ಬಂದಿದ್ದರು. ಆಗ ಜಯದೇವ್‌, ಗೌತಮ್‌ ಜೊತೆ ಸೇರಿ ಪಿಂಡ ಬಿಡೋದಿಲ್ಲ ಎಂದು ಹೇಳಿ ಹೋಗಿದ್ದನು. ಶಾಸ್ತ್ರದ ಪ್ರಕಾರ ಬೇರೆ ಬೇರೆ ಪಿಂಡ ಬಿಡೋ ಹಾಗಿಲ್ಲ. 

PREV
14
ಜಯದೇವ್‌ ಕಪಾಳಕ್ಕೆ ಏಟು ಬಿತ್ತು

ಅಂದಹಾಗೆ ಗೌತಮ್‌ ದಿವಾನ್‌, ತನ್ನ ತಂದೆಯ ಸಮಾಧಿ ಬಳಿ ಬಂದು ಪೂಜೆ ಮಾಡುತ್ತಿದ್ದನು. ಆಗ ಜಯದೇವ್‌ ಇದನ್ನೆಲ್ಲ ತಡೆದು, ತನ್ನ ತಂದೆಗೆ ಬಾಯಿಗೆ ಬಂದ ಹಾಗೆ ಬೈದನು. ಆಗ ಗೌತಮ್‌ ಸಿಟ್ಟು ಬಂದು, “ನನಗೆ ಬೇಕಿದ್ರೆ ಏನೂ ಬೇಕಾದರೂ ಮಾತಾಡು, ಅಪ್ಪನ ಬಗ್ಗೆ ಹಾಗೆಲ್ಲ ಮಾತನಾಡಬೇಡ” ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಜಯದೇವ್‌ ಕಪಾಳಕ್ಕೆ ಬಾರಿಸಿದ್ದಾನೆ.

24
ಜಯದೇವ್‌ ಅನಾಚಾರ ಹೆಚ್ಚು ಆಯ್ತು

ಹೊಸದಾಗಿ ಸ್ಟಾರ್ಟ್‌ಅಪ್‌ ಶುರು ಮಾಡಿ, ಬ್ಯುಸಿನೆಸ್‌ ಮಾಡಬೇಕು, ನಾಲ್ಕಾರು ಜನರಿಗೆ ಸಹಾಯ ಮಾಡಬೇಕು ಎಂದು ಗೌತಮ್‌ ಅಂದುಕೊಂಡಿದ್ದನು. ಆದರೆ ಜಯದೇವ್‌ ಅನಾಚಾರ ಇನ್ನಷ್ಟು ಹೆಚ್ಚಾಗಿರೋದರಿಂದ ಅವನು ಮತ್ತೆ ಆಸ್ತಿಯನ್ನು ವಶಪಡಿಸಿಕೊಂಡರೂ ಆಶ್ಚರ್ಯ ಇಲ್ಲ.

34
ಜಯದೇವ್‌ ಆಸ್ತಿ ಪಡೆಯೋದಿಲ್ಲ

ಗೌತಮ್‌ ದಿವಾನ್‌ಗೆ ಕೊಟ್ಟಿದ್ದನ್ನು ಮರಳಿ ಪಡೆಯೋ ಯೋಚನೆ ಇಲ್ಲ. ಹೀಗಾಗಿ ಜಯದೇವ್‌ ಆಸ್ತಿಯನ್ನು ಪಡೆಯೋದು ಡೌಟ್.‌ ಅವನ ಮುಂದೆ ಮತ್ತೆ ಅವನು ಸಾಮ್ರಾಜ್ಯ ಕಟ್ಟಲೂಬಹುದು, ತನ್ನ ಆಸ್ತಿಯನ್ನು ಅವನು ಹರಾಜಿನಲ್ಲಿ ಜಯದೇವ್‌ನಿಂದ ಪಡೆದರೂ ಆಶ್ಚರ್ಯ ಇಲ್ಲ.

44
ಮುಂದೆ ಏನಾಗುವುದು?

ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬ ಕುತೂಹಲ ಇದೆ. ಜಯದೇವ್‌ ಮಾತ್ರ ಸರಿ ಹೋಗೋದೂ ಇಲ್ಲ. ಅವನ ಕುತಂತ್ರಕ್ಕೆ ಗೌತಮ್‌ ಕುಟುಂಬಕ್ಕೆ ಇನ್ನಷ್ಟು ಸಮಸ್ಯೆ ಆಗಲೂಬಹುದು. ಹೀಗಾಗಿ ಇದಕ್ಕೆಲ್ಲ ಗೌತಮ್‌ ಏನಾದರೊಂದು ಪಾಠ ಕಲಿಸುತ್ತಾನೆ. ಇದರಲ್ಲಿ ಯಾವುದೇ ಸಂಶಯ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories