41ನೇ ವಯಸ್ಸಿಗೆ ನೈಜವಾಗಿ ಇಬ್ಬರು ಮಕ್ಕಳಿಗೆ ಜನ್ಮಕೊಟ್ಟ ಖ್ಯಾತ ಧಾರಾವಾಹಿ ನಟಿ!

Published : May 26, 2026, 04:51 PM IST

Actor vivek dahiya and divyanka tripathi: ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ. 

PREV
15
ಹೊಸ ಅತಿಥಿಗಳ ಆಗಮನ

ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ.

25
ಆರು ತಿಂಗಳಗಳ ಕಾಲ ಹೇಳಿರಲಿಲ್ಲ!

ಈ ಹಿಂದೆ ದಿವ್ಯಾಂಕಾ ಅವರು ಪ್ರಗ್ನೆಂಟ್‌ ಎಂದು ಸಾಕಷ್ಟು ಬಾರಿ ಗಾಸಿಪ್‌ ಹರಡಿತ್ತು. ಆಗ ಅವರು ಸುಳ್ಳು ಎಂದು ಹೇಳಿದ್ದರು. ನಿಜಕ್ಕೂ ಗರ್ಭಿಣಿಯಾದಾಗ ಅವರು ಆರು ತಿಂಗಳಗಳ ಕಾಲ ಎಲ್ಲಿಯೂ ವಿಷಯವನ್ನೇ ಹೇಳಿರಲಿಲ್ಲ. ಈಗ ಮಗು ಹುಟ್ಟಿರುವ ಸುದ್ದಿಯನ್ನು ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

35
ಪ್ರೀತಿಸಿ ಮದುವೆ!

ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾ ಅವರು ಪ್ರೀತಿಸಿ ಮದುವೆಯಾಗಿದ್ದರು. ವಿವೇಕ್‌ ಇನ್ನೂ ನಟನಾಗಿ ಹೆಸರು ಮಾಡಿರಲಿಲ್ಲ, ಆದರೆ ದಿವ್ಯಾಂಕಾ ಸ್ಟಾರ್‌ ಆಗಿದ್ದರು. ಹೀಗಿದ್ದರೂ ಇವರ ನಡುವಿನ ಪ್ರೀತಿ ಗೆದ್ದಿತು.

45
ಸೋಶಿಯಲ್‌ ಮೀಡಿಯಾ ಪೋಸ್ಟ್

"ನಾವು ಸಂತೋಷವನ್ನು ಕೇಳಿದ್ದೆವು, ಆದರೆ ದೇವರು ನಮಗೆ ಡಬಲ್ ಖುಷಿ ಕೊಟ್ಟಿದ್ದಾನೆ. ನಮ್ಮ ಮನೆಗೆ ಇಬ್ಬರು ಗಂಡು ಮಕ್ಕಳು ಬಂದಿದ್ದಾರೆ" ಎಂದು ಈ ಜೋಡಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

55
ಕರಣ್‌ ಅರ್ಜುನ್‌ ಬಂದ್ರು!

ವಿವೇಕ್ ದಹಿಯಾ ಕೂಡ, "ಕೊನೆಗೂ ಕಾಯುವಿಕೆ ಮುಗಿದಿದೆ. 'The Boyz', ಜೀವನವು ನಮ್ಮ ಕಲ್ಪನೆಗಿಂತಲೂ ಹೆಚ್ಚು ಸುಂದರವಾಗಿ ಕಾಣುತ್ತಿದೆ. ನನ್ನ ಕರಣ್ ಅರ್ಜುನ್ ಬಂದರು! ದಿವ್ ಮತ್ತು ನಾನು ಜೀವನದ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮಗೆ ಬೇಕು" ಎಂದು ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories