ಕನ್ನಡ ಕಿರುತೆರೆಗೆ ಕೆಲವು ವರ್ಷಗಳ ಹಿಂದಷ್ಟೆ ಪರಿಚಿತರಾದ ನಟಿ ಶಿಲ್ಪಾ ಕಾಮತ್. ‘ನೂರು ಜನ್ಮಕೂ’ ಧಾರಾವಾಹಿಯಿಂದ ತಮ್ಮ ನಟನೆ ಜರ್ನಿ ಶುರು ಮಾಡಿ, ಇದೀಗ ‘ಗೌರಿ ಕಲ್ಯಾಣ’ದ ಮೂಲಕ ಮಿಂಚುತ್ತಿರುವ , ಮೇ 24ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗುಳಿ ಕೆನ್ನೆಯ ಬೆಡಗಿ ಕುರಿತು ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.
26
ಬ್ಯಾಂಕ್ ಉದ್ಯೋಗದಿಂದ ನಟನೆವರೆಗಿನ ಜರ್ನಿ
ಮೂಲತಃ ಉಡುಪಿಯವರಾದ ಶಿಲ್ಪಾ, ಹುಟ್ಟಿ ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿ. ಸದ್ಯ ನಟನೆಗಾಗಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಅಂದ ಹಾಗೆ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ. ವಿದ್ಯಭ್ಯಾಸ ಮುಗಿದ ಮೇಲೆ ಒಂದಷ್ಟು ಸಮಯ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರು. ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.
36
ಇವರು ‘ಮಿಸ್ ಮಂಗಳೂರು’ ಕೂಡ ಹೌದು
ಶಿಲ್ಪಾ ಕಾಮತ್ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮುನ್ನ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದರು. 2023ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಬಳಿಕ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಶಿಲ್ಪಾ ಕಾಮತ್ ನಟಿಸಿದ ಮೊದಲ ಚಿತ್ರ ‘ರಂಗಸ್ಠಳ’. ಬಳಿಕ ಶಿಲ್ಪಾ ‘ನೂರು ಜನ್ಮಕೂ’ ಎನ್ನುವ ಹಾರರ್ ಕಥಾ ಹಂದರ ಇರುವ ಧಾರಾವಾಹಿಯಲ್ಲಿ ನಾಯಕಿ ಮೈತ್ರಿ ಪಾತ್ರಕ್ಕೆ ಜೀವ ತುಂಬಿದರು. ಆದರೆ ಈ ಧಾರಾವಾಹಿ ಹೆಚ್ಚು ಸಮಯ ಓಡಲಿಲ್ಲ. ಆದರೆ ಈ ಧಾರಾವಾಹಿ ಮೂಲಕ ಶಿಲ್ಪಾ ಲಕ್ ಮಾತ್ರ ಬದಲಾಯಿತು.
56
ಕಾಮಿಡಿ ಕಿಚನ್ ನಲ್ಲಿ ಮಿಂಚಿಂಗ್
ನೂರು ಜನ್ಮಕೂ ಧಾರಾವಾಹಿ ಅಂತ್ಯವಾಗುತ್ತಿದ್ದಂತೆ, ಶಿಲ್ಪಾ ಕಾಮತ್ ಗೆ ಕಾಮಿಡಿ ಕಿಚನ್ ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಇವರು ಅಲ್ಲೂ ಕಾಮಿಡಿ ಮಾಡುತ್ತಾ, ಉತ್ತಮ ರೀತಿಯಲ್ಲಿ ಅಡುಗೆ ಮಾಡುತ್ತಾ ಸ್ಪರ್ಧೆಯಲ್ಲಿ ಮುಂದುವರೆದಿದ್ದರು.
66
ಗೌರಿ ಕಲ್ಯಾಣ ಧಾರಾವಾಹಿಗೆ ನಾಯಕಿ
ಇದೀಗ ಶಿಲ್ಪಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೌರಿ ಕಲ್ಯಾಣ’ ಧಾರಾವಾಹಿಗೆ ನಾಯಕಿ ಗೌರಿಯಾಗಿ ನಟಿಸುತ್ತಿದ್ದಾರೆ. ಅಕ್ಕ ಇಷ್ಟಪಟ್ಟ ಹುಡುಗನನ್ನು, ಅಕ್ಕ ಮದುವೆ ಮಂಟಪದಿಂದ ಎದ್ದು ಹೋದ ಕಾರಣಕ್ಕೆ ತಂಗಿಯೇ ಮದುವೆಯಾದ ಕಥೆ, ನಂತರ ನಾಯಕನ ಜೊತೆಗಿನ ಜಗಳ ಇದೇ ಸೀರಿಯಲ್ ಹೈಲೈಟ್. ಮುಂದೆ ನಾಯಕಿ ಹೇಗೆ ಎಲ್ಲವನ್ನೂ ಸರಿ ಮಾಡ್ತಾಳೆ ಅನ್ನೋದು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.