100 ರೂ ಕೊಟ್ಟು ಸಿನಿಮಾ ನೋಡ್ರಿ, ನಿಮ್‌ ಗಂಟು ಹೋಗಲ್ಲ: ರವಿಚಂದ್ರನ್‌ ಮಾತಿಗೆ ಪ್ರೇಕ್ಷಕರು ಬೇಸರ

Published : Feb 20, 2026, 04:01 PM IST

ಮೊದಲು ಸಿನಿಮಾ ನೋಡಿ, ವಿಮರ್ಶೆ ಮಾಡಬೇಕು ಎಂದು ಹೋಗಬೇಡಿ. 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ನಿಮ್ಮ ಗಂಟು ಹೋಗಲ್ಲ, ಪ್ರೇಕ್ಷಕರು ಮೂರು ಗಂಟೆ ತಲ್ಲೀನವಾಗಿ ಸಿನಿಮಾ ನೋಡಬೇಕು, ಆ ಥರ ಸಿನಿಮಾ ಬೇಕು ಎಂದು ರವಿಚಂದ್ರನ್‌ ಅವರು ಹೇಳಿದ್ದರು. ಈ ಬಗ್ಗೆ ಬರಹಗಾರ ನಂದೀಶ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

PREV
17
ರವಿಚಂದ್ರನ್‌ ಹೇಳಿಕೆ ಬೇಜಾರಾಯ್ತು

ಸಿನಿಮಾವೊಂದರ ಪ್ರೆಸ್ ಮೀಟ್ ಸಂದರ್ಭದಲ್ಲಿ ರವಿಚಂದ್ರನ್ ಅವರು ಕೊಟ್ಟ ಹೇಳಿಕೆ ತೀರಾ ಬೇಸರ ಮೂಡಿಸಿದೆ. ರವಿಚಂದ್ರನ್ ಅವರಿಂದ ಎಂಥ ಮಾತುಗಳು ನಾವು ಕೇಳಬಯಸುತ್ತೇವೆ ಎಂಬುದನ್ನು ನಾನಿಲ್ಲಿ ಬರೆದಿದ್ದೇನೆ.

27
ರವಿಚಂದ್ರನ್ ಹೇಳಬೇಕಿದ್ದ ಮಾತುಗಳಿವು....
  • ಎಲ್ಲ ಕನ್ನಡ ಸಿನಿಮಾಗೂ ಅತ್ಯಧಿಕ ದರ 100 ಮಾಡಿ ಅಂತ ಹೇಳಬೇಕಾಗಿತ್ತು.
  • ಕನ್ನಡ ಚಿತ್ರರಂಗಕ್ಕೋಸ್ಕರ 100 ಥಿಯೇಟರ್ ಕಟ್ಟಿ, ಲಾಭ - ನಷ್ಟದ ಬಗ್ಗೆ ಯೋಚಿಸಬೇಡಿ, ಮೊದಲು ಕನ್ನಡ ಸಿನಿಮಾ ಉಳಿಸಿ ಅಂತ ಸರ್ಕಾರಕ್ಕೆ ಹೇಳಬೇಕಿತ್ತು.
  • ಸಿನಿಮಾದಲ್ಲಿ ದುಡಿದ ಹಣದಲ್ಲಿ ಹೋಟೆಲ್, ಪಬ್, ಮಾಲ್ ಕೊಳ್ಳುವ ನಟರಿಗೆ, ಅದರ ಬದಲು ಒಂದು ಥಿಯೇಟರ್ ಕೊಳ್ಳಿ, ಥಿಯೇಟರ್ ನಡೆಸಿ ಅಂತ ಹೇಳಬಹುದಿತ್ತು.
  • ಕ್ರಿಕೆಟ್ ಪ್ರಿಯರಿಗೆ ನಮ್ ಇಂಡಿಯನ್ ಟೀಮ್ ಇದೆ, ಸಿನಿಮಾದವರು ಕೇವಲ ಸಿನಿಮಾ ಮಾಡಿ ಅಂತ ಹೇಳಬೇಕಿತ್ತು. ಅಲ್ಲಿ Sponsor ಹುಡುಕೋ ಬದಲು, ಅದೇ ಕಂಪೆನಿಗಳನ್ನ ಸಿನಿಮಾ ನಿರ್ಮಾಣಕ್ಕೆ ಪ್ರೇರೇಪಿಸಿ ಅಂತ ಹೇಳಬೇಕಿತ್ತು.
  • 100 ಜನ ಹೊಸ ಪ್ರತಿಭಾವಂತ ಯುವ ನಿರ್ದೇಶಕರನ್ನು ಹುಡುಕಲು, ಹೊಸ ಅಲೆಗೆ ಅವಕಾಶ ಕೊಡಲು ಒಂದು ಸ್ಪರ್ಧೆ ಮಾಡಿ ಅಂತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ
  • ಹೇಳಬಹುದಿತ್ತು.
  • ಇದ್ಯಾವುದನ್ನು ಹೇಳದ ರವಿಚಂದ್ರನ್ 100 ಕೊಟ್ಟು ಸಿನಿಮಾ ನೋಡ್ರಯ್ಯ ಎಂದು ಜನರನ್ನೇ ಬೈದಿದ್ದಾರೆ.
  • ನಮ್ಮ ನಟರು ಸಿನಿಮಾದಲ್ಲಿ ಮಾತ್ರ ಕ್ರೇಜಿ ಆಗಿದ್ರೆ ಚೆಂದ... ನಿಜಜೀವನದಲ್ಲೂ ಹಾಗೆ ಮಾತನಾಡಿದ್ರೆ ಇರೋ ಬೆಲೆಯನ್ನು ಕಳೆದುಕೊಳ್ತಾರೆ.
37
ದೇವರನ್ನೇ ದೂರುವ ಮೂಲಕ ಕ್ರೇಜಿ ಸ್ಟಾರ್

ಅಣ್ಣಾವ್ರು ಅಭಿಮಾನಿಗಳನ್ನೇ ದೇವರೆಂದರು. ಈಗ ದೇವರನ್ನೇ ದೂರುವ ಮೂಲಕ ಕ್ರೇಜಿ ಸ್ಟಾರ್ ಚಿತ್ರರಸಿಕರಿಗೆ ಬೇಸರ ಮಾಡಿದ್ದಾರೆ.

ರವಿಚಂದ್ರನ್ ಕನ್ನಡ ಚಿತ್ರರಂಗದ ಪಾಲಿಗೆ ಸಿನಿಮಾಂತ್ರಿಕ. ಬೆಳ್ಳಿತೆರೆಗೆ ಹೊಸ ವಿನ್ಯಾಸ ತಂದವರು, ಸಿನಿಮಾ‌ ಮೇಕಿಂಗ್ ಪ್ರಕ್ರಿಯೆಗೆ ಹೊಸ ರೂಪ ಕೊಟ್ಟವರು. ಕಂಡ ಕನಸನ್ನು ನನಸಾಗಿಸಿಕೊಂಡವರು. ಸೋತರು, ಗೆದ್ದರೂ, ಮೈಕೊಡವಿಕೊಂಡು ಮತ್ತೆ ಮತ್ತೆ ಸಿನಿಮಾದಲ್ಲೇ ಮುಳುಗೆದ್ದವರು.

ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಯೋಗಶೀಲರು ಎಂಬುದು ನಿಸ್ಸಂಶಯವಾಗಿ ನಿಜ. ಹೀಗೂ ಸಿನಿಮಾ ಮಾಡಲು ಸಾಧ್ಯವಾ ಎಂಬ ಪ್ರಶ್ನೆಗೆ 'ಪ್ರೇಮಲೋಕ'ದ ಮೂಲಕ ಉತ್ತರ ಕೊಟ್ಟರು.

ಪ್ರಯೋಗ ಅನ್ನೋದು ವೆರಿ ರಿಸ್ಕಿ ಪ್ರಯತ್ನ. ಅದರಲ್ಲಿ ಯಶಸ್ಸು, ಸೋಲು ಎರಡು ದೊಡ್ಡ ಪ್ರಮಾಣದಲ್ಲಿಯೇ ಎದುರಾಗಬಹುದು. ಅದಕ್ಕೆ ದೊಡ್ಡ ಉದಾಹರಣೆ ಆ ಕಾಲದಲ್ಲಿಯೇ ನಾನಾ ಭಾಷೆಯಲ್ಲಿ ಆಯಾ ಚಿತ್ರರಂಗದ ಸ್ಟಾರ್ ಕಾಸ್ಟ್ ಇಟ್ಕೊಂಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 'ಶಾಂತಿ ಕ್ರಾಂತಿ'. ರವಿಚಂದ್ರನ್, ರಜನೀಕಾಂತ್, ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿ ತಯಾರಾದ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಚಿತ್ರಗಳು ದೊಡ್ಡ ಯಶಸ್ಸು ಕಾಣಲಿಲ್ಲ. ಆ ಸೋಲು ಕೊಟ್ಟ ಹೊಡೆತ ಬಹುವರ್ಷದವರೆಗೆ ಕಾಡಿತು.

47
ರಾಮಾಚಾರಿ ಗೆದ್ದಿತು, ಏಕಾಂಗಿ ಸೋತಿತು

ಕಡಿಮೆ ದಿನಗಳಲ್ಲಿ ಶೂಟ್ ಮಾಡಿದ 'ರಾಮಾಚಾರಿ' ಗದ್ದಿತು. ಅತಿ ನಿರೀಕ್ಷೆ ಇಟ್ಟುಕೊಂಡ 'ಏಕಾಂಗಿ' ಇನ್ನಿಲ್ಲದಂತೆ ಸೋತಿತು. ಆದರೆ ಹಾಡುಗಳು ಜನ ಮನ ಗೆಲ್ಲುವಲ್ಲಿ ಯಶಸ್ಚಿಯಾಯಿತು.

ರವಿಚಂದ್ರನ್ ಬಹು ಪ್ರೀತಿಯಿಂದ ಮಾಡಿದ 'ಮಂಜಿನ ಹನಿ' ಪೂರ್ಣವಾಗಲಿಲ್ಲ. 'ಅಪೂರ್ವ' ಚಿತ್ರ ಜನರ ಮನಸ್ಸು ಗೆಲ್ಲಲಿಲ್ಲ. ಮಗನಿಗಾಗಿ ಮಾಡಿದ 'ರಣಧೀರ ಪ್ರೇಮಲೋಕದಲ್ಲಿ' ಇಂಡಸ್ಟ್ರಿಯೇ ತಿರುಗಿ ನೋಡುವಂತೆ ಮುಹೂರ್ತ ಮಾಡಿಕೊಂಡರೂ, ಪೂರ್ಣವಾಗಲಿಲ್ಲ.

57
I am god - The crazy

ಈಗ ರವಿಚಂದ್ರನ್ ಅವರು 'I am god' the crazy ಎಂಬ ಹೆಸರಿನ ಸಿನಿಮಾ ಮಾಡ್ತಿದ್ದಾರೆ. ಚಿಕ್ಕಂದಿನಿಂದಲೂ ರವಿಚಂದ್ರನ್ ಅಭಿಮಾನಿ ಅನ್ನೋ ಹೆಮ್ಮೆಯಲ್ಲೇ ಬೆಳೆದ ಅಸಂಖ್ಯಾತರಲ್ಲಿ ನಾನು ಒಬ್ಬ. ಅವರ ಸಿನಿಮಾ ಅಂದ್ರೆ ಕಾದು ನೋಡ್ತೀನಿ. ಆದರೆ ನಮ್ಮ ನೆಚ್ಚಿನ ನಟನೇ ಆಗಲಿ, ಎಲ್ಲೋ ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲರಾದಾಗ ಅದನ್ನು ಮುಲಾಜಿಲ್ಲದೆ ಹೇಳಬೇಕು. ಇಲ್ಲ ಅಂದ್ರೆ ಆತ ನಿಜವಾದ ಅಭಿಮಾನಿಯೇ ಅಲ್ಲ.

I am god - The crazy... ಈ ಸಿನಿಮಾವನ್ನು ನಾನೊಬ್ನೆ ಮಾಡ್ತೀನಿ ಅಂದಿದ್ದಾರೆ. End to end one man show ಎಂದಿದ್ದಾರೆ. ಕೇಳೋಕೆ ಚೆಂದ, ವಿಭಿನ್ನ ಅನ್ಸುತ್ತೆ.

67
ಸಿನಿಮಾ ಎನ್ನೋದು ಟೀಂ ವರ್ಕ್

ಆದರೆ ವಾಸ್ತವದಲ್ಲಿ ಸಿನಿಮಾ ಟೀಮ್ ವರ್ಕ್. ಕಥೆ ಚಿತ್ರಕಥೆ ಒಬ್ಬರೇ ಬರೆದರೂ ಹತ್ತಾರು ಕ್ರಿಯಾಶೀಲ ತಲೆಗಳ, ಕಲೆಗಳ ಸಂಗಮದಿಂದ ಅದೊಂದು ಸಿನಿಮಾವಾಗಿ ಜೀವ ತಳೆಯುತ್ತೆ.

ನಮಗೆ ಕಾಣದ ತಪ್ಪು, ನಮ್ಮ ತಂಡದ ಯಾವುದೋ ಸದಸ್ಯನಿಗೆ ಕಾಣಬಹುದು. ಒಮ್ಮೆ ಒಬ್ಬ ಅಸೋಸಿಯೇಟ್ ಕೊಡೋ ಸಜೇಷನ್ ಕೂಡ ಸಿನಿಮಾದ ಸೀನ್ ವೊಂದನ್ನು ಮೇಲೆತ್ತಬಹುದು. ನಮಗಾಗಿ ಬರೆಯೋ ಚಿತ್ರಸಾಹಿತಿ, ಚಿತ್ರಕ್ಕೆ ಪದ ಜೋಡಿಸುವ ಸಂಭಾಷಣೆಕಾರ, ಸಂಗೀತ ಸಂಯೋಜಿಸಲು ಶ್ರಮಿಸುವ ಸಂಗೀತ ನಿರ್ದೇಶಕ ಎಲ್ಲರೂ ದಿ ಬೆಸ್ಟ್ ಕೊಡಲೆಂದೇ ದುಡಿಯುತ್ತಾರೆ. ಅವರನ್ನೆಲ್ಲ ಸಮನಾಗಿ, ಸರಿಯಾಗಿ ದುಡಿಸಿಕೊಳ್ಳೋದು, ಬಳಸಿಕೊಳ್ಳೋದೆ ನಿರ್ದೇಶಕನ ಜವಾಬ್ದಾರಿ. ಆ ವಿಚಾರದಲ್ಲಿ ಸದಾ ಗೆದ್ದಿರೋ ಕ್ರೇಜಿ ಸ್ಟಾರ್ ಈಗ ಎಲ್ಲವನ್ನು ನಾನೇ ಮಾಡ್ತೀನಿ ಅನ್ನೋ ಭರದಲ್ಲಿ ತಪ್ಪು ಮಾಡ್ತಿದ್ದಾರೆ. ಇದರಿಂದ ಸಿನಿಮಾ ಅನ್ನೋ ಅದ್ಭುತ ಕಲೆಯ ಸ್ವಾರಸ್ಯ, ಸಾಮರ್ಥ್ಯ ಎರಡು ಇಳಿಮುಖವಾಗುತ್ತದೆ.

77
ಒಂದೇ ಸಿನಿಮಾದಲ್ಲಿ 35 ಹಾಡು, ಕೇಳೋಕೆ ಆಗತ್ತಾ?

ಇಂದು ಒಂದೇ ಸಿನಿಮಾದಲ್ಲಿ 35 ಹಾಡು ಕೇಳೋ, ನೋಡೋ ತಾಳ್ಮೆ ಯಾರಿಗಾದರೂ ಇದೆಯಾ..

ಅದು ನಿಜಕ್ಕೂ ವರ್ಕ್ ಆಗುವ ವಿಷಯವಾ...!?

ರವಿಚಂದ್ರನ್ ಅವರಿಗೆ ಇದನ್ನು ನೇರವಾಗಿ ಹೇಳೋರು ಸುತ್ತ ಮುತ್ತ ಇರಬೇಕಿತ್ತು. ಸುಖಾಸುಮ್ಮನೆ ಅವರೆಲ್ಲಾ ಪ್ರಯೋಗಗಳಿಗೂ ಚಪ್ಪಾಳೆ ತಟ್ಟುವ ಬದಲು, ನೇರವಾಗಿ ಅನಿಸಿಕೆ ತಿಳಿಸುವ ಕೆಲವರಾದರೂ ಅವರೊಡನಿರಬೇಕಿತ್ತು.

ಮಾಣಿಕ್ಯ, ದೃಶ್ಯದಂತಹ ಫ್ಯಾಮಿಲಿ ಎಲಿಮೆಂಟ್ ಇರೋ ಪಾತ್ರಗಳಲ್ಲಿ ಜನ ಇಂದಿಗೂ ಅವರನ್ನು ಇಷ್ಟ ಪಡ್ತಾರೆ. ಜನ ಇಷ್ಟ ಪಡುವ ರೀತಿಯಲ್ಲಿ ಕಾಣಸಿಗಬೇಕಾದ ರವಿಚಂದ್ರನ್ ಅವರು, ತಮಗಿಷ್ಟವಾದದ್ದನ್ನೇ ತೋರಿಸುವ ಪ್ರಯತ್ನದಲ್ಲಿ ಎಲ್ಲೋ ಕಳೆದು ಹೋಗ್ತಿದಾರೆ ಅನ್ಸುತ್ತೆ.

ಇದೆಲ್ಲವನ್ನು ತುಂಬಾ ಅಭಿಮಾನದಿಂದ ಬರೆದಿದ್ದೇ‌ನೆ. ಒಬ್ಬ ನಿಜವಾದ ಅಭಿಮಾನಿಯಾಗಿ ಬರೆದಿದ್ದೇನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories