Bhagyalakshmi Serial: ತಾಂಡವ್‌ ಮನೆಗೆ ಬಂದ್ರೂ ಭಾಗ್ಯ ನಂಗೆ ಬೇಕೇ ಬೇಕು; ಹಠ ಹಿಡಿದ ಆದಿ; ವೀಕ್ಷಕರ ಆಕ್ರೋಶ

Published : Feb 20, 2026, 03:39 PM IST

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾನು ಬದಲಾಗಿದ್ದೀನಿ, ಭಾಗ್ಯ ಜೊತೆ ಸಂಸಾರ ಮಾಡ್ತೀನಿ ಎಂದು ತಾಂಡವ್‌ ಹಠ ಹಿಡಿದು ಕೂತಿದ್ದಾನೆ. ಅತ್ತ ಆದಿ, ಭಾಗ್ಯ ಜೊತೆ ಬದುಕ್ತೀನಿ ಎಂದು ಪಣ ತೊಟ್ಟಿದ್ದಾಳೆ. ಈಗ ಈ ಕಥೆ ತ್ರಿಕೋನ ಪ್ರೇಮಕಥೆಯ ತಿರುವು ಪಡೆದಿದೆ. 

PREV
15
ಮನೆಗೆ ಬಂದ ತಾಂಡವ್

ಹೌದು, ತಾಂಡವ್‌ಗೆ ತನ್ನ ತಪ್ಪು ಏನು ಎಂದು ಅರ್ಥ ಆಗಿದೆ. ಈಗ ಅವನು ಭಾಗ್ಯ ಮನೆಗೆ ಬಂದಿದ್ದಾನೆ. ಭಾಗ್ಯ ಮಾತ್ರ ತಾಂಡವ್‌ನನ್ನು ಕ್ಷಮಿಸೋಕೆ ರೆಡಿ ಇಲ್ಲ. ಆದರೆ ತನ್ವಿ ಮಾತ್ರ ತನ್ನ ತಂದೆಗೆ ಒಂದು ಅವಕಾಶ ಕೊಡಿ ಎಂದು ಬೇಡುತ್ತಿದ್ದಾಳೆ.

25
ಆದಿ, ಭಾಗ್ಯ ಮದುವೆ ಆಗಬೇಕು

ಕುಸುಮಾ, ಆದಿ ಎಲ್ಲರೂ ಸೇರಿಕೊಂಡು ಆದಿ ಹಾಗೂ ಭಾಗ್ಯಳ ಮದುವೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಸುನಂದಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಭಾಗ್ಯ ಕೂಡ ಆದಿಯನ್ನು ಮದುವೆ ಆಗೋಕೆ ರೆಡಿ ಇದ್ದಾಳೆ. ಮುಂದೆ ಏನಾಗುವುದು?

35
ತಾಂಡವ್‌ ಬೇಡ, ಆದಿ ಇರಲಿ

ಈ ಬಗ್ಗೆ ವೀಕ್ಷಕರು ಏನು ಹೇಳುತ್ತಾರೆ ಎಂಬ ಬಗ್ಗೆ ಕುತೂಹಲ ಇರಬಹುದು. ಬಹುತೇಕರು ಆದಿ ಹಾಗು ಭಾಗ್ಯಳನ್ನು ಒಪ್ಪಿಕೊಂಡಿದ್ದಾರೆ, ಇವರಿಬ್ಬರು ಒಂದಾಗಲಿ ಎಂದು ಬಯಸುತ್ತಿದ್ದಾರೆ. ನಿಮ್ಮ ಮಗಳಿಗಾಗಿ, ಮಗಳನ್ನು ಗೌರವಿಸುವ ನಿಮ್ಮ ಮಗಳನ್ನು ತುಂಬಾ \ ಪ್ರೀತಿಸುವ ಜೋಪಾನ ಮಾಡುವ ಒಂದು ಜೀವ ಸಿಕ್ಕಿದೆ. ಒಬ್ಬ ತಾಯಿಯಾಗಿ ಮುಚ್ಚಿಕೊಂಡು ಒಪ್ಪಿಕೋ, ಮತ್ತೆ ಅಳಿಯಂದ್ರೆ ಅಳಿಯಂದ್ರೆ ಅಂತ ಆ ಹಳೆ ಕೋಣದ ಜೊತೆ ನಿನ್ನ ಮಗಳನ್ನು ಕಳುಹಿಸಬೇಡ ಎಂದು ವೀಕ್ಷಕರೊಬ್ಬರು ಕಾಮೆಂಟ್‌ ಮಾಡಿದ್ದರು.

45
ಒಂದು ಒಳ್ಳೆಯ ಸಂದೇಶ ಕೊಡಿ.

“ಏನ್ ಸೀರಿಯಲ್ ಮಾಡ್ತೀರಾ? ಒಂದು ಒಳ್ಳೆಯ ಸಂದೇಶ ಕೊಡಿ. ಯಾಕೆ ಭಾಗ್ಯಳಿಗೆ ಇನ್ನೊಂದು ಗಂಡಸಿನ ಅವಶ್ಯಕತೆ ಇದೆ ಅಂತ ತೋರುಸ್ತೀರಾ? ಒಂಟಿಯಾಗಿ ಜೀವನ ಸಾಗಿಸಿ, ಮಾದರಿಯಾಗೋ ಥರ ತೋರಿಸಿ. ಅದನ್ನು ಬಿಟ್ಟು ಆದಿಗೆ ಏನ್ ತಲೆ ಕೆಟ್ಟಿದ್ಯಾ? ಭಾಗ್ಯಳ ಗಂಡ ಮನೆಗೆ ಬಂದರೂ ಕೂಡ. ಇನ್ನು ಪ್ರೀತಿ ಗೀತಿ ಅಂದುಕೊಂಡು ಥೂ. ಇದಕ್ಕೆ ಸಮಾಜ ಬಿಡಿ, ಅವಳ ಮಗಳು ತನ್ವಿ ಒಪ್ತಾಳಾ? ಉಗಿದು ಉಪ್ಪಿನಕಾಯಿ ಹಾಕ್ತಾಳೆ” ಎಂದು ಕಾಮೆಂಟ್‌ ಮಾಡಿದ್ದಾರೆ.

55
ಯಾಕೆ ಹೀಗೆ ಮಾಡ್ತೀರಾ?

“ಇವತ್ತು ಸುನಂದಾ, ನಾಳೆ ತನ್ವಿ ಏನ್ ಇವ್ನು ತಾಂಡವ್‌ನನ್ನು ಹೊರಗಿನವನು ಅನ್ನೋದು? ಅವನು ಭಾಗ್ಯಳನ್ನು ಗಂಡ ಇವಯ್ಯಗೆ ಏನ್ ಹಕ್ಕಿದೆ ಮಾತಾಡೋಕೆ? ಇದನ್ನೆಲ್ಲ ನೋಡಿ ಕಲಿಯೋ ಜನರು ತುಂಬ ಜನ ಇದ್ದಾರೆ. ಈಗಾಗಲೇ ಹೆಂಗುಸರು ಗಂಡನ್ ಬಿಟ್ಟು ಡಿವೋರಸ್ ತಗೋಳೋದು ಕಾಮನ್ ಆಗಿದೆ‌, ಇದನ್ನೆಲ್ಲ ನೋಡಿ ಇನ್ನು ಕಲಿತಾರೆ” ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories