ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ಕಿರುತೆರೆಯ ಈ ಕ್ಯೂಟಿ ಯಾರು ಗೊತ್ತಾಯ್ತ?

Published : Feb 20, 2026, 02:17 PM IST

Guess the Actress: ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿರುವ ಫೋಟೊದಲ್ಲಿ ಒಂದು ಪುಟ್ಟ ಹುಡುಗಿ, ವಿವಿಧ ರೀತಿಯಲ್ಲಿ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ಆ ಮಗು ಈಗ ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಸಿನಿಮಾ ನಟಿ ಕೂಡ ಹೌದು. ಇದು ಯಾರು ಗೆಸ್ ಮಾಡಿ ಹೇಳಿ.

PREV
16
ಯಾರು ಈ ಕ್ಯೂಟ್ ಹುಡುಗಿ

ಬಾಲ್ಯದಲ್ಲೇ ಫೋಟೊಗೆ ಮುದ್ದು ಮುದ್ದಾಗಿ ಪೋಸ್ ಕೊಡುತ್ತಿರುವ ಈ ಸುಂದರಿ ಯಾರು ಗೆಸ್ ಮಾಡಿ. ಈಕೆ ಸಿನಿಮಾ ನಟಿಯೂ ಹೌದು, ಸದ್ಯ ಕನ್ನದ ಕಿರುತೆರೆಯಲ್ಲಿ ಗುರುತಿಸಿಕೊಂಡ ಜನಪ್ರಿಯ ನಟಿಯೂ ಹೌದು, ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳೂತ್ತಿರುವ ಈ ಬೆಡಗಿ ಯಾರು ಇಲ್ಲಿದೆ ಮಾಹಿತಿ.

26
ಅನ್ವಿತಾ ಸಾಗರ್

ಇದು ಬೇರೆ ಯಾರು ಅಲ್ಲ, ಕನ್ನಡ ಕಿರುತೆರೆ ನಟಿ ಸದ್ಯ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದ ಮೂಲಕ ಗಮನ ಸೆಲೆಯುತ್ತಿರುವ ನಟಿ ಅನ್ವಿತಾ ಸಾಗರ್. ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಅಣ್ಣ ಅನೂಪ್ ಸಾಗರ್ ಬಾಲ್ಯದ ಫೋಟೊಗಳನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ.

36
ಅಣ್ಣನ ಪ್ರೀತಿಯ ವಿಶ್

ಈ ಪುಟ್ಟ, ಮುದ್ದಾದ ಕ್ಷಣಗಳಿಂದ ಹಿಡಿದು ನಮ್ಮ ಕುಟುಂಬದ ಬಲವಾದ ಆಧಾರಸ್ತಂಭವಾಗುವವರೆಗೆ... ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪುಟ್ಟ ತಂಗಿ. ನೀನು ನನಗೆ ತಿಳಿದಿರುವ ಅತ್ಯಂತ ಬೆಂಬಲ ನೀಡುವ ಮತ್ತು ಕಾಳಜಿಯುಳ್ಳ ಆತ್ಮವಾಗಿ ಬೆಳೆದಿರುವೆ. ನನ್ನ ಜೀವನ, ನನ್ನ ಸಮಸ್ಯೆಗಳು, ನನ್ನ ಸಂತೋಷ ಮತ್ತು ಎಲ್ಲವನ್ನೂ ನಿನ್ನೊಂದಿಗೆ ಹಂಚಿಕೊಳ್ಳಲು ನಾನು ನಿಜವಾಗಿಯೂ ಧನ್ಯನಾಗಿದ್ದೇನೆ. ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಎಂದೆಂದಿಗೂ ಹೆಮ್ಮೆಪಡುತ್ತೇನೆ. ನಿನ್ನನ್ನು ನನ್ನ ಸಹೋದರಿ ಎಂದು ಕರೆಯುವುದೇ ಅದೃಷ್ಟ. ನೀನು ಹೇಗಿದ್ದೀಯೋ ಹಾಗೆಯೇ ಇರು. ಮತ್ತು ನೆನಪಿಡೂ, ಏನೇ ಆದರೂ ನಾನು ಯಾವಾಗಲೂ ನಿನಗಾಗಿ ಇರುತ್ತೇನೆ ಎನ್ನುತ್ತಾ ಅಣ್ಣ ಮುದ್ದಾಗಿ ವಿಶ್ ಮಾಡಿದ್ದಾರೆ.

46
ಸಾಗರದ ಹುಡುಗಿ ಅನ್ವಿತಾ

ಅನ್ವಿತಾ ಸಾಗರ್ ಮೂಲತಃ ಶಿವಮೊಗ್ಗ ಮೂಲದವರಾಗಿದ್ದು, ಕಿರುತೆರೆ ಜೊತೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅನ್ವಿತಾ ಸಾಗರ್ (Anvitha Sagar)ಮೂಲ ಹೆಸರು ಪಾರ್ವತಿ. ಇವರು 20 ಫೆಬ್ರವರಿ 1992ರಲ್ಲಿ ಜನಿಸಿದ್ದಾರೆ. ಸೀರಿಯಲ್ ನಟಿಯಾಗುವ ಮುನ್ನ ಅನ್ವಿತಾ ಮಾಡೆಲ್ ಆಗಿದ್ದರು, ಟಿವಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡ್ತಿದ್ರು, ಅಷ್ಟೇ ಅಲ್ಲ ತುಳು ಸಿನಿಮಾಗಳ ನಾಯಕಿ ಕೂಡ ಆಗಿದ್ರು.

56
ಮಾಡೆಲ್, ಆಂಕರ್, ನಟಿ

ಅನ್ವಿತಾ ಜನಿಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಅಲ್ಲಿಯೇ ಹೈಸ್ಕೂಲ್ ಶಿಕ್ಷಣ ಮುಗಿಸಿದ ಇವರು, ನಂತರ ನೆಲೆಯೂರಿದ್ದು ಮಂಗಳೂರಿನಲ್ಲಿ. ಅಲ್ಲೇ ಇವರು ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದು ಬಳಿಕ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. 2015 ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ‘ದಂಡ್’ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು, ನಂತರ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿದರು. ಇವರು ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ , ಜೀವನ ಯಜ್ಞ ಹಾಗೂ ತುಳು ಸಿನಿಮಾಗಳಾದ ದಂಡ್ , ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.

66
ಸೀರಿಯಲ್ ಮೂಲಕ ಜನಪ್ರಿಯತೆ

ಸದ್ಯ ಅನ್ವಿತಾ ಸಾಗರ್ ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ. ಮಲ್ಲಿಯಾಗಿ ಕಾಣಿಸಿಕೊಂಡಿರುವ ಅನ್ವಿತಾ ಸಾಗರ್, ಈ ಹಿಂದೆ ಗಟ್ಟಿಮೇಳ ಧಾರಾವಾಹಿಯಲ್ಲಿ ಮೂವರು ಸೋದರರ ಮುದ್ದಿನ ತಂಗಿಯ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ನಟಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಧಾರವಾಹಿಯಲ್ಲಿ 'ಜ್ಯೋತಿ' ಎಂಬ ಪಾತ್ರದಲ್ಲೂ ನಟಿಸಿದ್ದರು ಈ ಬೆಡಗಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories