ಲಕ್ಷ್ಮೀ ನಿವಾಸದಿಂದ ಹೊರ ಬಂದ ಮತ್ತೊಬ್ಬ ಸ್ಟಾರ್ ನಟ: ತಂಗಿ ಹಿಂದೆಯೇ ಹೋದ ಅಣ್ಣ!

Published : Jul 02, 2025, 08:59 PM IST

Lakshmi Nivasa Kannada Serial Big Update: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹಿರಿಯ ನಟ ಹೊರ ನಡೆದಿದ್ದಾರೆ. ಲಕ್ಷ್ಮೀ ಮತ್ತು ತನು ಪಾತ್ರಗಳು ಬದಲಾದ ಬೆನ್ನಲ್ಲೇ ಮತ್ತೊಂದು ಪಾತ್ರ ಬದಲಾಗಿದೆ.

PREV
14

ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್‌ನ ಪಾತ್ರಧಾರಿಗಳು ಒಬ್ಬರಾದ ನಂತರ ಒಬ್ಬರಂತೆ ಬದಲಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕಥಾ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯೇ ಹೊರಬರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದೀಗ ಸೀರಿಯಲ್ ಮತ್ತೊಂದು ಪಾತ್ರಧಾರಿ ಲಕ್ಷ್ಮೀ ನಿವಾಸಕ್ಕೆ ಗುಡ್‌ಬೈ ಹೇಳಿದ್ದಾರೆ.

24

ಸದ್ಯ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಬದಲಾಗಿ ಅವರ ಸಮಕಾಲೀನವರೇ ಆದ ಮಾಧುರಿ ನಟಿಸುತ್ತಿದ್ದಾರೆ. ಜನರು ಸಹ ಲಕ್ಷ್ಮೀ ಪಾತ್ರದಲ್ಲಿ ಮಾಧುರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಲಕ್ಷ್ಮೀ ಸೋದರನ ಪಾತ್ರದ ಕಲಾವಿದ ಬದಲಾಗಿದ್ದಾರೆ.

34

ಲಕ್ಷ್ಮೀ ನಿವಾಸ ಸೀರಿಯಲ್ ಆರಂಭವಾದಾಗಿನಿಂದ ನರಸಿಂಹ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದರಾಗಿರುವ ನೀನಾಸಂ ಅಶ್ವಥ್ ಧಾರಾವಾಹಿಯ ಹಿರಿಯ ಕಲಾವಿದರಾಗಿದ್ರು. ಇದೀಗ ನೀನಾಸಂ ಅಶ್ವಥ್ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ.

44

ನೀನಾಸಂ ಅಶ್ವಥ್ ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ಸೀರಿಯಲ್‌ನ ತನು ಪಾತ್ರವೂ ಬದಲಾಗಿತ್ತು. ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ನೀನಾಸಂ ಅಶ್ವಥ್ ಹೊರ ಬಂದಿರೋದು ಸೀರಿಯಲ್‌ಗೆ ಹೊಡೆತ ಬೀಳುತ್ತಾ ಅಂತ ಆತಂಕ ಎದುರಾಗಿದೆ.

Read more Photos on
click me!

Recommended Stories