ಸೀತಾ ರಾಮ ಧಾರಾವಾಹಿ ಅಂತ್ಯ… ಭಾವನಾತ್ಮಕ ಪತ್ರ ಬರೆದ ವೀಕ್ಷಕರ ಮೆಚ್ಚಿನ ಶ್ರೀರಾಮ್ ದೇಸಾಯಿ

Published : May 22, 2025, 01:22 PM ISTUpdated : May 22, 2025, 01:23 PM IST

ಸೀತಾ ರಾಮ ಧಾರಾವಾಹಿಯ ಎರಡು ವರ್ಷದ ಜರ್ನಿ ಅಂತ್ಯ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಗಗನ್ ಚಿನ್ನಪ್ಪ ಭಾವುಕ ಪತ್ರ ಬರೆದಿದ್ದಾರೆ.   

PREV
17
ಸೀತಾ ರಾಮ ಧಾರಾವಾಹಿ ಅಂತ್ಯ… ಭಾವನಾತ್ಮಕ ಪತ್ರ ಬರೆದ ವೀಕ್ಷಕರ ಮೆಚ್ಚಿನ ಶ್ರೀರಾಮ್ ದೇಸಾಯಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಸೀತಾ ರಾಮ ಧಾರಾವಾಹಿ (Seetha Rama Serial), ತನ್ನ ವಿಭಿನ್ನ ಕಥೆಯ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕಳೆದ ಎರಡು ವರ್ಷಗಳಿಂದ ನಿಮ್ಮನ್ನು ರಂಜಿಸುತ್ತಾ ಬಂದಿದ್ದ ಸೀತಾ ರಾಮ ಧಾರಾವಾಹಿ ಇದೀಗ ಮುಕ್ತಾಯ ಹಂತ ತಲುಪಿದ್ದು, ಈಗಾಗಲೇ ಸೀರಿಯಲ್ ಶೂಟಿಂಗ್ ಸಹ ಮುಕ್ತಾಯವಾಗಿದೆ. 
 

27

ಸದ್ಯ ಝೀ ಕನ್ನಡದಲ್ಲಿ ಸೀತಾ ರಾಮ ಧಾರಾವಾಹಿಯ ಕೊನೆಯ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ. ಸೀರಿಯಲ್ ಅಂತ್ಯವಾಗುತ್ತಿರುವುದರಿಂದ ರಾಮ್ ಪಾತ್ರದ ಮೂಲಕ ಎರಡು ವರ್ಷ ರಂಜಿಸಿದ ನಟ ಗಗನ್ ಚಿನ್ನಪ್ಪ (Gagan Chinnappa), ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದಾರೆ. ಪತ್ರ ಬರೆಯುವ ಮುನ್ನ ಇದನ್ನು ಬರೆಯಲು ಕುಳಿತಾಗ, ನಾನು ಭಾವುಕತೆ ಮತ್ತು ಕೃತಜ್ಞತೆಯಿಂದ ತುಂಬಿಹೋಗಿದ್ದೇನೆ ಎಂದು ಆರಂಭಿಸಿದ್ದಾರೆ. 
 

37

ಸೀತಾರಾಮ ಸೀರಿಯಲ್ ಕುರಿತು ಶ್ರೀರಾಮ್ ದೇಸಾಯಿ (Sri Ram Desai) ಆಲಿಯಾಸ್ ಗಗನ್ ಚಿನ್ನಪ್ಪ ಬರೆದಿದ್ದಾದ್ರೂ ಏನು ನೋಡೋಣ… ಸೀತಾರಾಮ ಕೇವಲ ಒಂದು ಶೋ ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದಾಗಿದೆ - ಇದು ಜೀವನವನ್ನು ಬದಲಾಯಿಸುವ ಪ್ರಯಾಣವಾಗಿದೆ. ನನ್ನನ್ನು ರೂಪಿಸಿದ, ನನಗೆ ಸವಾಲು ಹಾಕಿದ ಮತ್ತು ನಾನು ಹಿಂದೊಮ್ಮೆ ನಕ್ಷತ್ರಗಳಿಗೆ ಪಿಸುಗುಟ್ಟಿದ ಕನಸುಗಳನ್ನು ನನಸಾಗಿಸಿದ ಪ್ರಯಾಣ. ಶ್ರೀ ರಾಮ ದೇಸಾಯಿ ಪಾತ್ರವನ್ನು ನಿರ್ವಹಿಸುವುದು ನನ್ನ ವೃತ್ತಿಜೀವನದ ಅತ್ಯಂತ ಸುಂದರವಾದ ಅಧ್ಯಾಯವಾಗಿದೆ ಮತ್ತು ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಪವಿತ್ರ ಸ್ಥಾನವನ್ನು ಹೊಂದಿರುತ್ತದೆ.
 

47

ಈ ಪಾತ್ರವು ಒಬ್ಬ ಕಲಾವಿದನಾಗಿ ನಾನು ನಿರೀಕ್ಷಿಸಿದ್ದನ್ನೆಲ್ಲಾ ನನಗೆ ನೀಡಿತು - ಪ್ರೀತಿ, ಮನ್ನಣೆ, ಬೆಳವಣಿಗೆ ಮತ್ತು ನಿಮ್ಮೆಲ್ಲರೊಂದಿಗಿನ ಆಳವಾದ ಸಂಪರ್ಕ. ಆದರೆ ಅದಕ್ಕಿಂತ ಹೆಚ್ಚಾಗಿ, ಅದು ನನಗೆ ನಿಮ್ಮನ್ನು ನೀಡಿತು - ಅಚಲ ನಂಬಿಕೆ ಮತ್ತು ವಾತ್ಸಲ್ಯದಿಂದ ನನ್ನೊಂದಿಗೆ ನಿಂತ ಬೆಂಬಲಿಗರ ಕುಟುಂಬ. ಪ್ರತಿಯೊಂದು ಸಂದೇಶ, ಪ್ರತಿಯೊಂದು ಹರ್ಷೋದ್ಗಾರ, ನೋಡುವ ಪ್ರತಿ ಶಾಂತ ಕ್ಷಣ - ಎಲ್ಲವೂ ಮುಖ್ಯವಾಗಿತ್ತು. ನೀವು ಈ ಪ್ರಯಾಣವನ್ನು ಅರ್ಥಪೂರ್ಣಗೊಳಿಸಿದ್ದೀರಿ.
 

57

ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ, ಕಥೆಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಶ್ರೀ ರಾಮ ದೇಸಾಯಿ ನಿಮ್ಮ ಜೀವನದ ಭಾಗವಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಝಿ ಕನ್ನಡ ವಾಹಿನಿ (Zee Kannada) ಮತ್ತು ಸೀತಾರಾಮ ಧಾರಾವಾಹಿ ತಂಡಕ್ಕೆ ನಾನು ಅನಂತವಾಗಿ ಕೃತಜ್ಞನಾಗಿದ್ದೇನೆ ಮತ್ತು ಆಳವಾಗಿ ಕೃತಜ್ಞನಾಗಿದ್ದೇನೆ ಎಂದಿದ್ದಾರೆ ಗಗನ್. 
 

67

ಅಷ್ಟೇ ಅಲ್ಲ ಈ ಅಧ್ಯಾಯಕ್ಕೆ ತೆರೆ ಬೀಳುತ್ತಿದ್ದಂತೆ, ನಾನು ನಿಮ್ಮ ಪ್ರೀತಿಯನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ - ವಿದಾಯವಾಗಿ ಅಲ್ಲ, ಬದಲಾಗಿ ಮುಂದಿನ ದಾರಿ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲೆಲ್ಲಾ ನನ್ನ ಅತ್ಯುತ್ತಮವಾದದ್ದನ್ನು ನೀಡುವ ಭರವಸೆ ನೀಡುತ್ತೇನೆ.  ಹೃದಯಪೂರ್ವಕವಾಗಿ ಧನ್ಯವಾದಗಳು. ಸೈನಿಂಗ್ ಆಫ್, ಎಂದೆಂದಿಗೂ ನಿಮ್ಮ, ಶ್ರೀ ರಾಮ್ ದೇಸಾಯಿ…. ಎಂದು ಭಾವಪೂರ್ಣವಾಗಿ ಬರೆದಿದ್ದಾರೆ. 
 

77

ಸೀತಾ ಮತ್ತು ಪುಟ್ಟ ಸಿಹಿಯ ಜೀವನದ ಸುಂದರ ಕಥೆಯನ್ನು ಹೇಳಿಕೊಂಡು ಬಂದ ಧಾರಾವಾಹಿ ಸೀತಾ ರಾಮ. ಸೀತಾ ಜೀವನದಲ್ಲಿ ರಾಮನ ಎಂಟ್ರಿ. ಭಾರ್ಗವಿಯ ದುಷ್ಟತನ, ಸೀತಾ ರಾಮರ ಮದುವೆ. ಸಿಹಿಯ ಸಾವು, ಎಂತ ಕಷ್ಟದಲ್ಲೂ ಜೊತೆಯಾಗಿ ನಿಂತ ಸ್ನೇಹಿತ ಅಶೋಕ ಇವೆಲ್ಲವೂ ಜನರನ್ನು ಎರಡು ವರ್ಷಗಳ ಕಾಲ ಹಿಡಿದಿಟ್ಟಿತ್ತು, ಇದೀಗ ಧಾರಾವಾಹಿ ಕೊನೆಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಪ್ರಸಾರ ನಿಲ್ಲಿಸಲಿದೆ. 
 

Read more Photos on
click me!

Recommended Stories