ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟ ಶ್ವೇತಾ ಚೆಂಗಪ್ಪ

Published : May 22, 2025, 11:19 AM IST

ಕನ್ನಡ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ತಮ್ಮ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಬಂದಿದ್ದಾರೆ.   

PREV
18
ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟ ಶ್ವೇತಾ ಚೆಂಗಪ್ಪ

ಕನ್ನಡ ಕಿರುತೆರೆ ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ (Shwetha Chengappa), ಸ್ವಲ್ಪ ಸಮಯದಿಂದ ಕಿರುತೆರೆಯಿಂದ ದೂರ ಇದ್ದಾರೆ, ಸದ್ಯ ತಮ್ಮ ಗಂಡ ಹಾಗೂ ಮಗನ ಜೊತೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. 
 

28

ಇದೀಗ ಉಡುಪಿಯ ಶ್ರೀಕೃಷ್ಣ ಮಠಕ್ಕೆ (Udupi ShriKrishna Math) ಕುಟುಂಬ ಸಮೇತರಾಗಿ ಭೇಟಿ ನೀಡಿರುವ ಶ್ವೇತಾ ಚೆಂಗಪ್ಪ, ದೇವಾಲಯದಲ್ಲಿ ತೆಗೆಸಿರುವಂತಹ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

38

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಗೆ ಭೇಟಿ ಕೊಟ್ಟ ಕ್ಷಣ. ಶ್ರೀ ಕೃಷ್ಣನ ದರ್ಶನ ನಮ್ಮ ಮನೆಯ ಪುಟ್ಟ ಕೃಷ್ಣನೊಂದಿಗೆ. ಎಂದು ಬರೆಯುತ್ತಾ, ದೇವರ ದರ್ಶನ ಮಾಡಿದ ಫೋಟೊ, ಕನಕನ ಕಿಂಡಿ ಮುಂದಿನ ಫೋಟೊ ಹಾಗೂ ಊಟ ಮಾಡಿದ ಫೋಟೊ ಶೇರ್ ಮಾಡಿದ್ದಾರೆ. 

48

ಇದರ ಜೊತೆಗೆ ಶ್ವೇತಾ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಗುರುಗಳಿಂದ ಕೋಟಿಗೀತ ಲೇಖನಯಜ್ಞ ಸ್ವೀಕಾರ ಮಾಡಿಕೊಂಡಿದ್ದು, ಆ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ನನ್ನ ಮಗನಿಗೆ ಕೃಷ್ಣನ ಸನ್ನಿಧಾನದಲ್ಲಿ ಕೊಳಲು ಸಿಕ್ಕಿತು. ಇದಕ್ಕಿಂತ ದೊಡ್ಡ ಉಡುಗೊರೆ ಏನಿದೆ ಅಲ್ವಾ??? ಎಂದು ಬರೆದುಕೊಂಡಿದ್ದಾರೆ. 
 

58

ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಗುರುಗಳೇ ಶ್ವೇತಾ ಮಗನಿಗೆ ಕೊಳಲನ್ನು ಉಡುಗೊರೆಯಾಗಿ (fluet gift) ನೀಡಿದ್ದಾರೆ. ಇದರ ಜೊತೆಗೆ ನಟಿ ಮಂಗಳೂರಿಗೆ ಪ್ರಯಾಣದ ಮೂಲ ಉದ್ದೇಶ , ಅಲ್ಲಿರುವ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಮಾಡಿ ನಮ್ಮ ಕಂದನಿಗೂ ಕ್ಷೇತ್ರದ ಮಹತ್ವವನ್ನ ಹೇಳಿ ಕೊಡುವಂತಹ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. 
 

68

ಈ ಹಿಂದೆಯೂ ಶ್ವೇತಾ ಶೆಂಗಪ್ಪ, ಪತಿ ಕಿರಣ್ ಅಪ್ಪಚ್ಚು ಹಾಗೂ ತಮ್ಮ ಕುಟುಂಬದ ಜೊತೆಗೆ ಉಡುಪಿ, ಕೊಲ್ಲೂರು, ಕದ್ರಿ, ಕೊರಗಜ್ಜ ಕ್ಷೇತ್ರ ಸೇರಿ ಕರಾವಳಿಯ ದೇಗುಲಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡ್ದೆದಿದ್ದರು. 
 

78

2003ರಲ್ಲಿ ಸುಮತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಬಳಿಕ, ಕಾದಂಬರಿ, ಸುಕನ್ಯ, ಅರುಂಧತಿ, ಸೌಂದರ್ಯ ಸೀರಿಯಲ್ ಗಳು ಹಾಗೂ ವರ್ಷ, ತಂಗಿಗಾಗಿ ಹಾಗೂ ವೇದ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. 
 

88

ಇಷ್ಟೇ ಅಲ್ಲ 2012 ರಲ್ಲಿ ಶ್ವೇತಾ ನಟನೆ ಬಿಟ್ಟು, ನಿರೂಪಣೆ (Anchoring) ಆರಂಭಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ನಟಿ ಕುಣಿಯೋಣ ಬಾರಾ, ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್, ಜೋಡಿ ನಂ 1, ಸೂಪರ್ ಕ್ವೀನ್ ಹಾಗೂ ಚೋಟಾ ಚಾಂಪಿಯನ್ ಸೇರಿ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ. 
 

Read more Photos on
click me!

Recommended Stories