ನಟ ದರ್ಶನ್‌ ಶೀಘ್ರದಲ್ಲೇ ರಿಲೀಸ್‌ ಆಗ್ತಾರಾ? ಮಹತ್ವದ ಸುಳಿವು ಕೊಟ್ಟ ಪತ್ನಿ ವಿಜಯಲಕ್ಷ್ಮೀ!

Published : Nov 06, 2025, 05:52 PM IST

ಅತ್ತ ಪತಿ ನಟ ದರ್ಶನ್‌ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ, ಇತ್ತ ಪತ್ನಿ ವಿಜಯಲಕ್ಷ್ಮೀ ಅವರು ಟ್ರಿಪ್‌ ಹೋಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಸಂದೇಶ ಹಂಚಿಕೊಂಡಿದ್ದಾರೆ.

PREV
15
ವಿಜಯಲಕ್ಷ್ಮೀ ಭಾರೀ ಬ್ಯುಸಿ

ನಟ ದರ್ಶನ್‌ ಅವರು ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಕೇಸ್‌ನಲ್ಲಿ ಜೈಲಿಗೆ ಹೋದಾಗಿನಿಂದ ವಿಜಯಲಕ್ಷ್ಮೀ ಅವರು ಸಾಕಷ್ಟು ಒದ್ದಾಡಿದ್ದರು. ದರ್ಶನ್‌ ಬಿಡುಗಡೆಗೆ ಅವರು ಪಣತೊಟ್ಟಿದ್ದರು. ಒಂದು ಕಡೆ ಸಿನಿಮಾ ಕೆಲಸ, ಇನ್ನೊಂದು ಕಡೆ ಕಾನೂನು ಕೆಲಸಗಳು, ಮತ್ತೊಂದು ಕಡೆ ಫಾರ್ಮ್‌ಹೌಸ್‌ ನೋಡಿಕೊಳ್ಳಬೇಕು. 

25
ಒದ್ದಾಡುತ್ತಿದ್ದ ವಿಜಯಲಕ್ಷ್ಮೀ

ನಟ ದರ್ಶನ್‌ ಅವರನ್ನು ಬಿಡಿಸಲು ದೇವರ ಮೊರೆ ಹೋಗಿದ್ದರು, ಇನ್ನು ಕಾನೂನು ಹೋರಾಟವನ್ನು ಮಾಡುತ್ತಿದ್ದರು. ವಿಜಯಲಕ್ಷ್ಮೀ ಅವರ ಈ ನಡೆಯನ್ನು ಅನೇಕರು ಮೆಚ್ಚಿದ್ದರೆ, ಇನ್ನೂ ಅನೇಕರು ತಪ್ಪು ಎಂದು ಕೂಡ ಹೇಳಿದ್ದುಂಟು.

35
ಸಂದೇಶ ಏನು?

“ಇಂದು ಎಂತಹದೇ ಕೆಟ್ಟದ್ದು ಆದರೂ ಸರಿ, ಜೀವನ ಮುಂದುವರಿಯುತ್ತದೆ, ನಾಳೆ ಇದು ಉತ್ತಮವಾಗಿರುತ್ತದೆ” ಎಂದು ವಿಜಯಲಕ್ಷ್ಮೀ ದರ್ಶನ್‌ ಅವರು ಕ್ಯಾಪ್ಶನ್‌ ನೀಡಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

45
ದರ್ಶನ್‌ ಬಿಡುಗಡೆ ಆಗುವ ಸೂಚನೆಯಾ?

ಈಗ ವಿಜಯಲಕ್ಷ್ಮೀ ಅವರು ಈ ರೀತಿ ಕ್ಯಾಪ್ಶನ್‌ ಕೊಟ್ಟಿರೋದು ನೋಡಿ, ಅನೇಕರು ಇದು ನಟ ದರ್ಶನ್‌ ಬಿಡುಗಡೆ ಆಗುವ ಸೂಚನೆಯಾ? ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

55
ಈ ಕೇಸ್‌ ಯಾವ ಸ್ವರೂಪ ಪಡೆಯಲಿದೆ ?

ಅನೇಕರು ಈ ಫೋಟೋಗೆ ಮೆಚ್ಚುಗೆ ಸೂಚಿಸಿದ್ದು, ನಿಮಗೆ ಬೆಂಬಲ ಕೊಡ್ತೀವಿ ಎಂದು ಹೇಳಿದ್ದಾರೆ. ಅಂದಹಾಗೆ ನಟ ದರ್ಶನ್‌ ಅವರು ಸದ್ಯಕ್ಕೆ ಜೈಲಿನಿಂದ ರಿಲೀಸ್‌ ಆಗೋದು ಡೌಟ್.‌ ದರ್ಶನ್‌ ಅವರಿಗೆ ಜಾಮೀನು ಸಿಕ್ಕಿ, ಕ್ಯಾನ್ಸಲ್‌ ಆಗಿತ್ತು. ಒಟ್ಟಿನಲ್ಲಿ ಈ ಕೇಸ್‌ ಯಾವ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಿದೆ. 

Read more Photos on
click me!

Recommended Stories