BBK 12: ವೀಕ್ಷಕರು ಏನು ಆಗಬಾರದು ಅಂದುಕೊಂಡಿದ್ರೋ ಅದೇ ಆಗೋಯ್ತು! ಎಂಥ ಟ್ವಿಸ್ಟ್‌ ಕೊಟ್ರಿ Bigg Boss?

Published : Nov 06, 2025, 05:24 PM IST

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕಂಪ್ಲೀಟ್‌ ಹಾರ್ಟ್‌ಗೆ ಕನೆಕ್ಟ್‌ ಆಗೋ ಥರ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಮನೆಯವರಿಂದ ಪತ್ರಗಳು ಬರುತ್ತಿವೆ, ಆದರೆ ಆ ಪತ್ರಗಳು ಇಬ್ಬರಲ್ಲಿ ಒಬ್ಬರಿಗೆ / ಮೂವರಲ್ಲಿ ಒಬ್ಬರಿಗೆ ಸಿಗುತ್ತಿದೆ. ಈಗ ಇದೇ ವಿಚಾರವು ಅಶ್ವಿನಿ, ಜಾನುರನ್ನು ಒಂದು ಮಾಡಿತಾ?

PREV
15
ಜಾಹ್ನವಿ, ಅಶ್ವಿನಿ ಗೌಡ ದೂರ ಆದರು

ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಆರಂಭದಿಂದ ಫ್ರೆಂಡ್ಸ್‌ ಆಗಿದ್ದವರು, ಇವರಿಬ್ಬರು ಸೇರಿಕೊಂಡು ರಕ್ಷಿತಾ ಶೆಟ್ಟಿ ವಿರುದ್ಧ ದಾಳಿ ಮಾಡಿದ್ದನ್ನು ಇಡೀ ಕರ್ನಾಟಕ ನೋಡಿ, ಖಂಡಿಸಿದೆ. ಆಮೇಲೆ ಜಾಹ್ನವಿ, ಅಶ್ವಿನಿ ಗೌಡ ದೂರ ಆದರು.

25
ಜನರನ್ನು ಯಾಮಾರಿಸುತ್ತಿದ್ದಾರೆ

ಅಶ್ವಿನಿ ಗೌಡ, ಜಾಹ್ನವಿ ಅವರು ಜಗಳ ಆಡಿಕೊಂಡಿದ್ದರೂ ಕೂಡ ಫ್ರೆಂಡ್ಸ್‌ ಆಗಿಯೇ, ಉಳಿದುಕೊಂಡಿದ್ದಾರೆ, ಕರ್ನಾಟಕದ ಜನತೆಗೆ ಯಾಮಾರಿಸುತ್ತಿದ್ದಾರೆ ಎಂದು ಗಿಲ್ಲಿ ನಟ ಹೇಳಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಟಾಂಗ್‌ ಕೊಟ್ಟಿದ್ದರೂ ಕೂಡ, ಇವರಿಬ್ಬರು ನಕ್ಕಿದ್ದರು, ಆದರೆ ಎಲ್ಲರ ಮುಂದೆ ಮಾತನಾಡಿರಲಿಲ್ಲ.

35
ಪತ್ರವನ್ನು ತ್ಯಾಗ ಮಾಡಬೇಕು

ಈಗ ಇವರಿಬ್ಬರು ಒಂದಾಗುವಂತಹ ಟಾಸ್ಕ್‌ ಬಂದಿತ್ತು. ಜಾಹ್ನವಿ, ಅಶ್ವಿನಿ, ನಿಮ್ಮ ಮುಂದೆ ನಿಮ್ಮ ಮಕ್ಕಳು ಬರೆದಿರುವ ಪತ್ರ ತುಂಬ ಮುಖ್ಯ ಆಗುತ್ತದೆ. ನಿಮಗೆ ಈ ವಾರ ಇಮ್ಯುನಿಟಿ ಬೇಕಿದ್ದರೆ, ಪತ್ರ ಬೇಕು ಎಂದರೆ, ನೀವು ಈ ಪತ್ರವನ್ನು ತ್ಯಾಗ ಮಾಡಬೇಕು. ಈ ಪತ್ರಗಳಲ್ಲಿ ಒಬ್ಬರು ಪತ್ರವನ್ನು ತ್ಯಾಗ ಮಾಡಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದರು.

45
ನನಗೆ ತಂದೆ ಇಲ್ಲ

ಮಗುವಿಗೆ ತಾಯಿ ಇಷ್ಟ ಎಂದಾದರೆ, ತಂದೆ ಕೂಡ ಮುಖ್ಯವಾಗುತ್ತಾನೆ. ನನಗೆ ತಂದೆ ಇಲ್ಲ, ತಂದೆ ಅಂದರೆ ನನಗೆ ಇಷ್ಟ, ಇವತ್ತು ಬೇಕು ಅಂದರೂ ಕೂಡ ಅವರು ಸಿಗೋದಿಲ್ಲ ಎಂದು ಅಶ್ವಿನಿ ಅವರು ಹೇಳಿದ್ದಾರೆ.

55
ಪತ್ರ ಯಾರ ಪಾಲಾಗುತ್ತದೆ?

ಈಗ ಪತ್ರ ಯಾರ ಪಾಲಾಗುತ್ತದೆ? ಯಾರು ತ್ಯಾಗ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಈ ಟಾಸ್ಕ್‌ ನೆಪದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಒಂದಾಗ್ತಾರಾ ಎಂಬ ಪ್ರಶ್ನೆ ಕೂಡ ಮೂಡಿಬರುತ್ತಿದೆ. ಇವರಿಬ್ಬರು ಒಂದಾಗೋದು ಅನೇಕ ವೀಕ್ಷಕರಿಗೆ ಇಷ್ಟವೇ ಇಲ್ಲ.

Read more Photos on
click me!

Recommended Stories