Bigg Boss Kannada Season 12: ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ ಜೊತೆ ರಕ್ಷಿತಾ ಶೆಟ್ಟಿ ಜಗಳ ಆಗಿದೆ. ಈಗ ಇವರ ಮನೆಯವರು ರೆನಿತಾ ಸುಪ್ರಿಯಾ ಎನ್ನುವವರ ಜೊತೆ ಮಾತನಾಡಿದ್ದಾರೆ.
ರಕ್ಷಿತಾ ಶೆಟ್ಟಿಗೆ ಕನ್ನಡ ಬರುತ್ತದೆ, ಆದರೂ ಕೂಡ ಸುಮ್ಮನೆ ಎಲ್ಲ ಭಾಷೆ ಸೇರಿಸಿ ಮಾತನಾಡುತ್ತಾಳೆ ಎಂದು ಧ್ರುವಂತ್ ಅವರು ಆರೋಪ ಮಾಡಿದ್ದರು. ಈ ಬಗ್ಗೆ ರಕ್ಷಿತಾ ಶೆಟ್ಟಿ ಅಜ್ಜಿ, ಅಕ್ಕಪಕ್ಕದ ಮನೆಯವರು ಮಾತನಾಡಿದ್ದಾರೆ.
26
ಅಜ್ಜಿ ಏನು ಹೇಳಿದ್ರು?
“ರಕ್ಷಿತಾ ಶೆಟ್ಟಿ ಮುಂಬೈನಲ್ಲಿದ್ದಳು, ಹೀಗಾಗಿ ಅವಳಿಗೆ ಸ್ಪಷ್ಟವಾಗಿ ಕನ್ನಡ ಬರೋದಿಲ್ಲ. ಕನ್ನಡ ಹಾಗೂ ತುಳು ಮಿಶ್ರಿತ ಭಾಷೆಯಲ್ಲಿ ಮಾತಾಡುತ್ತಾಳೆ. ಈಗ ಅವಳ ಕನ್ನಡ ಸುಧಾರಣೆಯಾಗಿದೆ. ಈಗ ಆಟವನ್ನು ಚೆನ್ನಾಗಿ ಆಡುತ್ತಿದ್ದಾಳೆ” ಎಂದು ರಕ್ಷಿತಾ ಅಜ್ಜಿ ಹೇಳಿದ್ದಾರೆ.
36
ರಕ್ಷಿತಾ ಅತ್ತಿದ್ದು ಬೇಸರ ಆಯ್ತು
“ಮಲ್ಲಮ್ಮ ಹೋದಮೇಲೆ ರಕ್ಷಿತಾ ಒಂಟಿಯಾದಳು. ಅವಳು ಅಳೋದು ನೋಡಿ ನನಗೂ ಬೇಸರ ಆಯ್ತು. ನನಗೆ ಗಿಲ್ಲಿ ನಟ ಇಷ್ಟವಾಗ್ತಾರೆ, ರಕ್ಷಿತಾ ಇಲ್ಲ ಅಂದ್ರೆ ಅವರೇ ಗೆಲ್ಲಬೇಕು” ಎಂದು ಅಜ್ಜಿ ಹೇಳಿದ್ದಾರೆ.
“ರಕ್ಷಿತಾ ಶೆಟ್ಟಿಗೆ ಕನ್ನಡ ಮಾತಾಡೋಕೆ ಇಷ್ಟ. ಈಗ ಅವಳು ಕಲಿಯುತ್ತಿದ್ದಾಳೆ. ಅಶ್ವಿನಿ ಗೌಡ ಅವರು ರಕ್ಷಿತಾರನ್ನು ಟಾರ್ಗೆಟ್ ಮಾಡಿದ್ದಾರೆ. ಇದು ಬೇಸರ ಆಗುತ್ತದೆ” ಎಂದು ರಕ್ಷಿತಾ ಶೆಟ್ಟಿಯ ಪಕ್ಕದಮನೆಯವರಾದ ಪ್ರತಿಮಾ ಹೇಳಿದ್ದಾರೆ.
56
ಧ್ರುವಂತ್ ಹಿಂದೆ ಮಾತಾಡ್ತಾರೆ ಅಷ್ಟೇ
“ರಕ್ಷಿತಾ ತನ್ನ ಸ್ವಭಾವ ಹೇಗಿದೆಯೋ ಹಾಗೆ ಇದ್ದಾಳೆ. ನಾವು ಅಕ್ಕ ಪಕ್ಕದ ಮನೆಯವರಾಗಿ ಹೇಗಿದ್ದಾರೋ ಹಾಗೆ ಅವರು ಅಲ್ಲಿದ್ದಾರೆ. ರಕ್ಷಿತಾ ಬಗ್ಗೆ ಧ್ರುವಂತ್ ಮಾತಾಡಿರೋದು, ಅಶ್ವಿನಿ ಗೌಡ ಟಾರ್ಗೆಟ್ ಮಾಡಿರೋದು ಬೇಸರ ಆಗಿದೆ. ರಕ್ಷಿತಾ ಮುಂದೆಯೇ ಈ ರೀತಿ ಮಾತನಾಡಿದರೆ, ಧ್ರುವಂತ್‌ಗೆ ಅವಳು ಸರಿಯಾಗಿ ಉತ್ತರ ಕೊಡ್ತಾಳೆ ಎಂದು ಗೊತ್ತಿದೆ. 100 ಸಿನಿಮಾ ಮಾಡಿ ಅಶ್ವಿನಿ ಗೌಡ ಅವರು ಬಿಗ್ ಬಾಸ್‌ಗೆ ಬಂದಿದ್ದಾರೆ, ಆದರೆ ರಕ್ಷಿತಾ ಒಂದು ಯುಟ್ಯೂಬ್ ಚಾನೆಲ್ ಮಾಡಿ ಬಿಗ್ ಬಾಸ್ ಮನೆಗೆ ಬಂದಿದ್ದಾಳೆ. ಅವಳೇ ಗ್ರೇಟ್” ಎಂದು ಪಕ್ಕದಮನೆಯವರು ಹೇಳಿದ್ದಾರೆ.
66
ಧ್ರುವಂತ್ ತುಂಬ ಫೇಕ್
“ಧ್ರುವಂತ್ ತುಂಬ ಫೇಕ್. ಇನ್ನು ಎರಡು ವಾರಕ್ಕೆ ಧ್ರುವಂತ್ ಹೊರಗಡೆ ಬರುತ್ತಾರೆ. ಇದಂತೂ ಸತ್ಯ” ಎಂದು ಪಕ್ಕದಮನೆಯವರು ಹೇಳಿದ್ದಾರೆ.