ಇಂದಿಗೂ, ಸಮಾಜದಲ್ಲಿ ಅನೇಕ ಕೆಟ್ಟ ಆಚರಣೆಗಳಿವೆ, ಅವು ಮಾನವೀಯತೆಯಲ್ಲಿನ ನಂಬಿಕೆಯನ್ನು ತೆಗೆದುಹಾಕುತ್ತವೆ. ಇದೇ ರೀತಿಯಲ್ಲಿ, ಬಾಂಗ್ಲಾದೇಶದಲ್ಲಿ ತಂದೆ ಮತ್ತು ಮಗಳ ಸಂಬಂಧವನ್ನು ಬೆಸೆಯುವ ಇದೇ ರೀತಿಯ ಸಂಪ್ರದಾಯವಿದೆ. ಇದನ್ನ ಕೇಳಿದ್ರೆ ನಿಮಗೇ ಅಯ್ಯೋ ಹೀಗೂ ಆಗುತ್ತಾ ಅನಿಸಬಹುದು, ಆದ್ರೆ ಅಲ್ಲಿ ಹೀಗೆಯೇ ನಡೆಯೋದು ಸಂಪ್ರದಾಯ.
ಬಾಂಗ್ಲಾದೇಶದ ಮಂಡಿ ಬುಡಕಟ್ಟು (Bangladesh, Mandi tribes) ಜನಾಂಗದಲ್ಲಿ, ಹುಡುಗಿಯು ತನ್ನ ತಂದೆಯನ್ನೇ ಮದುವೆಯಾಗುತ್ತಾಳೆ ಮತ್ತು ತಾಯಿ ಮತ್ತು ಮಗಳು ಒಂದೇ ಪುರುಷನೊಂದಿಗೆ ಒಂದೇ ಹಾಸಿಗೆಯನ್ನು ಹಂಚಿಕೊಂಡು ಬದುಕುತ್ತಾರೆ. ಇದರ ಹಿಂದಿರುವ ಜನರ ತರ್ಕವೂ ತುಂಬಾ ವಿಚಿತ್ರವಾಗಿದೆ.
ಬಾಂಗ್ಲಾದೇಶದ ಮಂಡಿ ಜಾತಿಯ ಈ ಪದ್ಧತಿಯ ಪ್ರಕಾರ, ಹುಡುಗಿಯು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದರೆ (widow), ಬಳಿಕ ಆಕೆ ಇನ್ನೊಂದು ಮದುವೆಯಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿದರೆ, ಅವಳ ಮಗಳು ಅವಳ ತಂದೆಯನ್ನು ಮದುವೆಯಾಗುತ್ತಾಳೆ. ಇದು ಇಲ್ಲಿನ ಸಂಪ್ರದಾಯ
ಇದನ್ನು ಮಾಡುವುದರ ಹಿಂದಿನ ಕಾರಣವೇನೆಂದರೆ, ಒಬ್ಬ ಯುವಕ ವಿಧವೆಯನ್ನು ಮದುವೆಯಾಗಿ ಒಂದು ಮಗುವನ್ನು ಪಡೆದಾಗ, ಮಗು ತಂದೆಯನ್ನೇ ಮದುವೆಯಾಗುತ್ತದೆ. ಇದರಿಂದ ಅವನು ಅವರಿಬ್ಬರನ್ನೂ ದೀರ್ಘಕಾಲದವರೆಗೆ ಚೆನ್ನಾಗಿ ನೋಡಿಕೊಳ್ಳಬಹುದು ಎಂಬುದು ಆಚರಣೆಯ ಉದ್ದೇಶ.
ಬಾಂಗ್ಲಾದೇಶದ ಅದೇ ಬುಡಕಟ್ಟಿನ ಹುಡುಗಿಯೊಬ್ಬಳು ಈ ಸಂಪ್ರದಾಯದ ಬಗ್ಗೆ ಮಾತನಾಡಿ, ತನ್ನ ತಂದೆ ತಾನು ಚಿಕ್ಕವಳಿದ್ದಾಗ ತೀರಿಕೊಂಡರು. ಅವಳ ತಾಯಿ ಎರಡನೇ ಬಾರಿಗೆ ಮದುವೆಯಾದಳು ಮತ್ತು ಅವಳು 3 ವರ್ಷದವಳಿದ್ದಾಗ, ಅವಳು ತನ್ನ ಇನ್ನೊಬ್ಬ ತಂದೆಯನ್ನು ಮದುವೆಯಾದಳು ಎಂದು ಹೇಳುತ್ತಾಳೆ.
ಆಕೆ ದೊಡ್ಡವಳಾದಾಗ, ತಾನು ಇಲ್ಲಿವರೆಗೆ ಯಾರನ್ನು ತನ್ನ ತಂದೆ ಎಂದು ಭಾವಿಸಿದ್ದಾಳೋ ಅದು ನಿಜವಾಗಿಯೂ ಆಕೆಯ ಪತಿ ಎಂದು ತಿಳಿದಾಗ, ಈ ಸಂಪ್ರದಾಯದ ಬಗ್ಗೆ ತಿಳಿದು ನೀವು ಅಚ್ಚರಿಪಟ್ಟಂತೆ ಆಕೆಯೂ ಅಚ್ಚರಿಪಟ್ಟಳು ಎಂದು ತಿಳಿಸಿದ್ದಾಳೆ.
ಈ ಸಂಪ್ರದಾಯವು ಬಾಂಗ್ಲಾದೇಶದ ಮಂಡಿ ಜಾತಿಯಲ್ಲಿ ಇಂದಿಗೂ ಪ್ರಸಿದ್ಧವಾಗಿದೆ ಮತ್ತು ಇಲ್ಲಿ ವಿಧವೆಯೊಬ್ಬಳು ಮದುವೆಯಾದಾಗ, ಅವಳು ಜನಿಸಿದ ಮಗುವು ಅವಳ ತಂದೆಯನ್ನು ಮದುವೆಯಾಗುತ್ತದೆ. ಈ ವಿಚಿತ್ರ ಸಂಪ್ರದಾಯಕ್ಕೆ ಏನೆನ್ನ ಬೇಕು ಅನ್ನೋದೇ ತಿಳಿತಾ ಇಲ್ಲ