ಈ ತಾಣಗಳು ಮಾನ್ಸೂನ್‌ನಲ್ಲೂ ಹನಿಮೂನನ್ನು ರೋಮ್ಯಾಂಟಿಕ್ ಆಗಿಸುತ್ತೆ

First Published | Jul 13, 2022, 7:22 PM IST

ಮಾನ್ಸೂನ್ ಅಬ್ಬರ ಇದೀಗ ಭಾರಿ ಜೋರಾಗಿದೆ. ಈ ಟೈಮ್ ನಲ್ಲಿ ಟ್ರಾವೆಲ್ ಮಾಡೋದು ಸಹ ಚೆನ್ನಾಗಿರುತ್ತೆ. ಮಾನ್ಸೂನ್ ನಲ್ಲಿ ಪರಿಸರ ತನ್ನನೇ ತಾನು ಬದಲಾಯಿಸಿಕೊಂಡು ಸುಂದರಿಯಾಗಿ ಬದಲಾಗುತ್ತಾಳೆ. ಹಾಗಾಗಿ ಈ ಸಮಯದಲ್ಲಿ ನೋಡುವಂತಹ ಸಾಕಷ್ಟು ತಾಣಗಳು ಸೃಷ್ಟಿಯಾಗುತ್ತದೆ. ಇನ್ನು ನೀವು ಮಾನ್ಸೂನ್ ಸಮಯದಲ್ಲಿ ಹನಿಮೂನ್ ಪ್ಲ್ಯಾನ್ ಮಾಡಿಕೊಂಡಿದ್ದು, ಯಾವ ತಾಣಕ್ಕೆ ಹೋದ್ರೆ ಚೆನ್ನಾಗಿರುತ್ತೆ ಎಂದು ಯೋಚ್ನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಸಲಹೆಗಳು. ಇಲ್ಲಿ ತಿಳಿಸಿರುವ ತಾಣಗಳು ಮಳೆಗಾಲದಲ್ಲಿ ಅದ್ಭುತವನ್ನೇ ಸೃಷ್ಟಿಸಿರುತ್ತೆ. ಹಾಗಿದ್ರೆ ಬನ್ನಿ ಸುಂದರವಾದ ಹನಿಮೂನ್ ತಾಣಗಳ ಬಗ್ಗೆ ತಿಳಿಯೋಣ. 

ಮಾನ್ಸೂನ್ ನಲ್ಲಿ ನೀವು ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ನಾವು ನಿಮಗೆ ಹೇಳ್ತೀವಿ ಕೇಳಿ. ಮಾನ್ಸೂನ್ ನಲ್ಲಿ ಹಲವಾರು ತಾಣಗಳು ಭಯವನ್ನು ಹುಟ್ಟಿಸೋದು ನಿಜಾ. ಆದರೆ ಮಾನ್ಸೂನ್ ನಲ್ಲಿ ಹನಿಮೂನ್ ಎಂಜಾಯ್ ಮಾಡಲು ಇಲ್ಲಿ ತಿಳಿಸಲಾಗಿರುವ ತಾಣಗಳು ಬೆಸ್ಟ್ ಆಯ್ಕೆಗಳಾಗಿವೆ. 

ಮಳೆಗಾಲದಲ್ಲಿ ನೀವು ಯಾವ ಸುರಕ್ಷಿತ ಸ್ಥಳಕ್ಕೆ ಹೋಗಬಹುದು ಎಂಬ ಕುತೂಹಲ ನಿಮಗಿದ್ದರೆ, ಇಂದು ನಾವು ನಿಮ್ಮ ಈ ಉದ್ವೇಗವನ್ನು ಕಡಿಮೆ ಮಾಡಲು ಬಂದಿದ್ದೇವೆ. ಮಾನ್ಸೂನ್ ಸೀಸನ್ ನಲ್ಲಿ ನೀವು ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ. ಈ ತಾಣಗಳು ಹೆಚ್ಚು ರೋಮ್ಯಾಂಟಿಕ್ (romantic) ಆಗಿಯೂ ಇರುತ್ತೆ. ಹಾಗಿದ್ರೆ ಬನ್ನಿ, ಆ ಸುಂದರ ತಾಣಗಳ ಬಗ್ಗೆ ತಿಳಿಯೋಣ. 

Tap to resize

ಕೋವಲಂ, ಕೇರಳ:
ಕೇರಳದ ಕೋವಲಂ ಮಾನ್ಸೂನ್ ಸೀಸನ್ ನಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ತಂಪಾದ ಗಾಳಿ ಬೀಸುವ ಕಡಲತೀರದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ರೊಮ್ಯಾಂಟಿಕ್ ಸಂಜೆಯನ್ನು ಕಳೆಯಬಹುದು. ಇಲ್ಲಿರುವ ಸಾಂಪ್ರದಾಯಿಕ ಹೌಸ್ ಬೋಟ್ ಗಳು (house boat) ನಿಮ್ಮ ಸಂಜೆಯನ್ನು ಇನ್ನಷ್ಟು ವರ್ಣರಂಜಿತವಾಗಿಸಬಹುದು. 

ಇಷ್ಟೇ ಅಲ್ಲ, ಆಯುರ್ವೇದ ಸ್ಪಾ ಇಲ್ಲಿ ಸಾಕಷ್ಟಿವೆ, ಇಲ್ಲಿ ನೀವು ಆರಾಮದಾಯಕವಾಗಿ ಬಾಡಿ ಮಸಾಜ್ ಮಾಡುತ್ತಾ ಸಂಗಾತಿಯೊಂದಿಗೆ ರಿಲ್ಯಾಕ್ಸ್ ಮಾಡಬಹುದು. ಅದಕ್ಕಿಂತ ಹೆಚ್ಚು ರೋಮ್ಯಾಂಟಿಕ್ ಆಗಿರಲು ಇದಕ್ಕಿಂತ ಇನ್ನೇನು ಬೇಕು? ಆದ್ದರಿಂದ, ಆಗೊಮ್ಮೆ ಈಗೊಮ್ಮೆ, ಕೇರಳದ ಈ ಸ್ಥಳವನ್ನು ನೋಡಿ ಬನ್ನಿ.

ಲಡಾಖ್:
ಮಾನ್ಸೂನ್ ಸೀಸನ್ ನಲ್ಲಿ ಈ ಸ್ಥಳವು ತುಂಬಾ ಸುಂದರವಾಗಿರುತ್ತೆ. ಈ ಸೀಸನ್ ನಲ್ಲಿಇಲ್ಲಿ ಕಡಿಮೆ ಮಳೆಯಾಗುತ್ತೆ. ಇಲ್ಲಿನ ಬೆಟ್ಟದ ಕಣಿವೆಗಳ ನಡುವೆ ನೀವು ಟೆಂಟ್ ಹೌಸ್ ನಲ್ಲಿ ಎಂಜಾಯ್ ಮಾಡಬಹುದು. ಇಲ್ಲಿನ ಪ್ಯಾಂಗಾಂಗ್ ಸರೋವರ ಎಷ್ಟೊಂದು ಸುಂದರವಾಗಿದೆ ಅಂದ್ರೆ, ಇಲ್ಲಿನ ಪ್ರತಿ ಕ್ಷಣವನ್ನು ನೀವು ಎಂಜಾಯ್ ಮಾಡ್ತೀರಿ. ತಂಪಾದ ಪ್ರದೇಶದಲ್ಲಿ ನಿಮ್ಮ ಸಂಗಾತಿ ಜೊತೆ ರೊಮ್ಯಾನ್ಸ್ ಮಾಡಲು ಇದು ಅತ್ಯುತ್ತಮ ಸ್ಥಳವಾಗಿದೆ.

ಪುದುಚೇರಿ:
ಮಾನ್ಸೂನ್ ಗೆ ಅನುಗುಣವಾಗಿ ಮಧುಚಂದ್ರಕ್ಕೆ (monsoon) ಈ ಸ್ಥಳವು ಅತ್ಯುತ್ತಮವಾಗಿದೆ. ಸಮುದ್ರ ತೀರದಲ್ಲಿರುವ ಅನೇಕ ರೊಮ್ಯಾಂಟಿಕ್ ರೆಸ್ಟೋರೆಂಟ್ ಗಳು ಮತ್ತು ಕೆಫೆಗಳು ನಿಮ್ಮ ಸಂಜೆಯನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತೆ. ಇದಲ್ಲದೆ, ನೀವು ಇಲ್ಲಿನ ಸುಂದರ ದೃಶ್ಯಗಳು ಮತ್ತು ಸ್ಥಳಗಳನ್ನು ಆನಂದಿಸಬಹುದು, ಜೊತೆಗೆ ಸ್ಪಾದಲ್ಲೂ ಎಂಜಾಯ್ ಮಾಡಬಹುದು.

ಜೈಪುರ, ರಾಜಸ್ಥಾನ:
ಮಾನ್ಸೂನ್ ಸೀಸನ್ ನಲ್ಲಿ, ಜೈಪುರದಂತಹ ಬಿಸಿ ಸ್ಥಳವು ರೋಮ್ಯಾಂಟಿಕ್ ಆಗುತ್ತದೆ. ಈ ಸೀಸನ್ ನಲ್ಲಿ ನೀವು ಈ ನಗರದ ಪ್ರಸಿದ್ಧ ಅರಮನೆಗಳು, ಕೋಟೆಗಳು ಮತ್ತು ಮಾರುಕಟ್ಟೆಗಳನ್ನು ಸುಲಭವಾಗಿ ಸುತ್ತಾಡುತ್ತಾ ಎಂಜಾಯ್ ಮಾಡಬಹುದು. ಜೈಪುರದ ಮೇಲ್ಛಾವಣಿಯ ರೆಸ್ಟೋರೆಂಟ್ ಗಳು ನಗರದ ಸುಂದರ ದೃಶ್ಯಗಳನ್ನು ನೋಡಲು ಮತ್ತು ನಿಮ್ಮ ಸಂಜೆಯನ್ನು ಸ್ಮರಣೀಯವಾಗಿಸಲು ಅತ್ಯುತ್ತಮವಾಗಿವೆ.

Latest Videos

click me!