ಜೀವನದಲ್ಲಿ ಒಮ್ಮೆ ನೋಡಿ ಕೊಡಗು, ಅಂಥದ್ದೇನಿದೆ ಅಲ್ಲಿ?

First Published Oct 3, 2022, 3:51 PM IST

ಭಾರತದ ಸ್ಕಾಟ್ಲೆಂಡ್ ಎಂದು ಹೇಳಿದ್ರೆ ಆ ಚುಮು ಚುಮು ಚಳಿ, ಮಂಜು ಮುಸುಕಿದ ವಾತಾವರಣ, ತಣ್ಣನೆ ಬೀಸುವ ಗಾಳಿ, ಹಸಿರು ಪ್ರಕೃತಿ, ಬೆಟ್ಟ -ಗುಡ್ಡಗಳು, ವೈವಿಧ್ಯಮಯ ಹೂವುಗಳು, ಖಗ ಮೃಗಗಳು ಎಲ್ಲವನ್ನೂ ತನ್ನೊಳಗೆ ಬಿಗಿದಪ್ಪಿಕೊಂಡಿರುವ ಭೂಲೋಕದ ಸ್ವರ್ಗ (Heaven of Earth) ಮಡಿಕೇರಿಯ ನೆನಪಾಗದೇ ಇರೋದಾದರೂ ಹೇಗೆ? ಕೂರ್ಗ್ ದಕ್ಷಿಣ ಕರ್ನಾಟಕದ (South Karnataka) ಒಂದು ಪ್ರಶಾಂತವಾದ, ಸಣ್ಣ ನಗರವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಇದು ಮುಖ್ಯವಾಗಿ ತನ್ನ ಸುಂದರ ದೃಶ್ಯಗಳು, ವೈವಿಧ್ಯಮಯ ವನ್ಯಜೀವಿಗಳು, ವಿಶ್ವದರ್ಜೆಯ ಕಾಫಿ ಮತ್ತು ಕೊಡಗಿನ ಯೋಧರು, ಭಕ್ಷ್ಯ, ಸಂಸ್ಕೃತಿಗೆ (Culture) ಹೆಸರುವಾಸಿಯಾಗಿದೆ.  

ಇತ್ತೀಚಿನ ವರ್ಷಗಳಲ್ಲಿ, ಕೂರ್ಗ್ (Scotland of India) ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನೀವು ಈಗಾಗಲೇ ಕೂರ್ಗಿಗೆ ಭೇಟಿ ನೀಡದಿದ್ದರೆ, ಈ ಬಾರಿ ಭೇಟಿ ನೀಡಿ. ಯಾಕೆ ಕೂರ್ಗ್ ಗೆ ಭೇಟಿ ನೀಡಬೇಕು ಅನ್ನೋದಕ್ಕೆ ಇಲ್ಲಿದೆ ಕೆಲವು ರೀಸನ್ ಗಳು. ಯಾವುದು ಅದು ನೋಡೋಣ…

ಅಬ್ಬಿ ಜಲಪಾತ

ಅಬ್ಬಿ ಜಲಪಾತ ನೀವು ನೋಡಲೇಬೇಕಾದ ಫಾಲ್ಸ್. ಜಲಪಾತದ ಆ ಜುಳು ಜುಳು ಶಬ್ದಗಳ ನಡುವೆ ನೀವು ಶಾಂತಿ ಮತ್ತು ನೆಮ್ಮದಿ ಜೊತೆಗೆ ಸಂತೋಷ ಕೂಡ ಪಡೆದುಕೊಳ್ಳುವಿರಿ. ಪಶ್ಚಿಮ ಘಟ್ಟಗಳ ಕಡಿದಾದ ಇಳಿಜಾರುಗಳಲ್ಲಿ ಹಲವಾರು ತೊರೆಗಳು ಸೇರಿ ಅಬ್ಬಿ ಜಲಪಾತವಾಗಿದೆ. ಇಲ್ಲಿಂದ, ನೀರು ಕಾವೇರಿ ನದಿಗೆ ಹರಿಯುತ್ತೆ.ಧುಮ್ಮಿಕ್ಕಿ ಹರಿಯುವ ಅಬ್ಬಿ ಫಾಲ್ಸ್ (Abbi Falls) ನೋಡೋದೆ ಚೆಂದ.

ಹುತ್ತರಿ ಹಬ್ಬ

ಹುತ್ತರಿ ಎಂದರೆ 'ಹೊಸ ಅಕ್ಕಿ' ಎಂದರ್ಥ ಮತ್ತು ಇದು ಕೊಡಗಿನ ಸುಗ್ಗಿಯ ಹಬ್ಬದ ಹೆಸರು. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ಆಚರಿಸಲಾಗುವ ಹುತ್ತರಿ (Hutthari Falls) ಸಾಕಷ್ಟು ಹಾಡು ಮತ್ತು ನೃತ್ಯ ಆಚರಣೆಗಳನ್ನು ಒಳಗೊಂಡಿದೆ, ಮತ್ತು ಪ್ರವಾಸಿಗರಿಗೆ ನಿಜವಾಗಿಯೂ ಸ್ಮರಣೀಯ ಅನುಭವ ನೀಡುತ್ತೆ.

ಕೂರ್ಗ್ ಆಹಾರ

ಸ್ಥಳೀಯ ಕತೆಗಳ ಪ್ರಕಾರ ಕೊಡವರು ಮಹಾನ್ ಅಲೆಕ್ಸಾಂಡರ್ ವಂಶಸ್ಥರು. ಅವರು ಶುದ್ಧ ಮಾಂಸಾಹಾರಿಗಳು. ಮಾಂಸವನ್ನು ಸಾಕಷ್ಟು ತೆಂಗಿನಕಾಯಿ, ಮಸಾಲೆ ಮತ್ತು ಕರಿಬೇವಿನ ಎಲೆಗಳೊಂದಿಗೆ ಬೇಯಿಸಲಾಗುತ್ತದೆ. ಕೆಲವು ಪ್ರಸಿದ್ಧ ಕೂರ್ಗ್ ಭಕ್ಷ್ಯಗಳೆಂದರೆ ಪಂದಿ ಕರಿ, ಕಡುಬು ಇತ್ಯಾದಿ!

ದುಬಾರೆ ಎಲಿಫೆಂಟ್ ಕ್ಯಾಂಪ್ (Dubare Elephant Camp)

ಆನೆಗಳು ವಿಶೇಷ ಆಕರ್ಷಣೆ ಇಲ್ಲಿ. ಅದು ನಮ್ಮೊಳಗಿನ ಮಗುವನ್ನು ಹೊರಗೆ ತರುತ್ತದೆ. ಕರ್ನಾಟಕವು ಆನೆಗಳಿಗೆ ಹೆಸರುವಾಸಿ. ಅದರಲ್ಲಿಯೂ ದುಬಾರೆ ಎಲಿಫ್ಯಾಂಟ್ ಕ್ಯಾಂಪ್ (Dubare elephant camp) ಯಾವುದೇ ಪ್ರಾಣಿ ಪ್ರಿಯರಿಗೆ ಬೆಸ್ಟ್ ಅನುಭವ ನೀಡುತ್ತೆ. ಮತ್ತು ಕೇವಲ ಆನೆಗಳು ಮಾತ್ರವಲ್ಲ, ಸುತ್ತಮುತ್ತಲಿನ ಕಾಡುಗಳಲ್ಲಿ ಚಿರತೆಗಳು, ಗೌರ್, ಕರಡಿಗಳು, ನವಿಲುಗಳು ಮತ್ತು ಪಾರ್ಟ್ರಿಡ್ಜ್ ಗಳನ್ನು ಸಹ ಗುರುತಿಸಬಹುದು.

ತಡಿಯಂಡಮೋಲ್ ಹಿಲ್

5724 ಅಡಿ ಎತ್ತರದಲ್ಲಿರುವ ತಡಿಯಂಡಮೋಲ್ ಕೊಡಗಿನ ಅತ್ಯುನ್ನತ ಶಿಖರವಾಗಿದೆ ಮತ್ತು ಚಾರಣಕ್ಕೆ ಸೂಕ್ತವಾದ ಸ್ಥಳವಾಗಿದೆ. ಈ ಪರ್ವತದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಾಲಯವು ಕೊಡವರ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಚಾರಣವು ದೀರ್ಘವಾಗಿದೆ, ಆದರೆ ಮೇಲ್ಭಾಗ ತಲುಪುತ್ತಿದ್ದಂತೆ, ಆ ಸುಂದರ ಪ್ರಕೃತಿ, ತಂಪು ಗಾಳಿ, ಎಲ್ಲವೂ ಅದ್ಭುತ ಅನುಭವ ನೀಡುತ್ತೆ. 

ಬೈಲಕುಪ್ಪೆ

ಕೂರ್ಗ್ ದಕ್ಷಿಣ ಭಾರತದ ಅತಿದೊಡ್ಡ ಟಿಬೆಟಿಯನ್ ವಸಾಹತು (Tibetan Colony)  ಹೊಂದಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತಾ. ನೀವು ಬೈಲಕುಪ್ಪೆಗೆ ಭೇಟಿ ನೀಡಿದಾಗ, ಗೋಲ್ಡನ್ ಟೆಂಪಲ್ ಹೋಗೋದನ್ನು ಮರೆಯಬೇಡಿ. ಇಲ್ಲಿನ ದೇಗುಲ, ಟಿಬೇಟಿಯನ್ ಜನರು, ಅವರ ಕರಕುಶಲ ಕಲೆಗಳು ಎಲ್ಲವೂ ಅದ್ಭುತ ಅನುಭವ ನೀಡುತ್ತೆ. 

ನಿಸರ್ಗಧಾಮ

ಕಾವೇರಿ ನದಿಯಿಂದ ರೂಪುಗೊಂಡ ಕೂರ್ಗ್ ಬಳಿಯ ದ್ವೀಪವಾದ ನಿಸರ್ಗಧಾಮವನ್ನು ತೂಗುಸೇತುವೆಯ ಮೂಲಕ ಪ್ರವೇಶಿಸಬಹುದು. ಈ ಸ್ಥಳವು ರಜಾದಿನಗಳು ಮತ್ತು ದೋಣಿ ಸವಾರಿಗಳಿಗೆ ಸೂಕ್ತ. 25 ಎಕರೆ ವಿಸ್ತೀರ್ಣದ ಈ ದ್ವೀಪವು ಬಿದಿರು, ತೇಗ ಮತ್ತು ಶ್ರೀಗಂಧದ ಮರಗಳಿಂದ ತುಂಬಿದೆ ಮತ್ತು ಜಿಂಕೆಗಳು, ನವಿಲುಗಳು ಮತ್ತು ಮೊಲಗಳಂತಹ ಪ್ರಾಣಿಗಳಿಗೆ ನೆಲೆಯಾಗಿದೆ.
 

ತಲಕಾವೇರಿ ವನ್ಯಜೀವಿ ಅಭಯಾರಣ್ಯ

ಹುಲಿಗಳು, ಚಿರತೆಗಳು, ನರಿಗಳು, ಮುಳ್ಳುಹಂದಿಗಳು, ದೈತ್ಯ ಹಾರುವ ಅಳಿಲುಗಳು, ನಾಗರಹಾವು, ಹೆಬ್ಬಾವು ಮತ್ತು ಆನೆ ಸೇರಿ ಹಲವಾರು ಪ್ರಾಣಿಗಳಿಗೆ ನೆಲೆಯಾಗಿರುವ ಕೊಡಗಿನ ಸಮೀಪದಲ್ಲಿರುವ ಈ ವನ್ಯಜೀವಿ ಅಭಯಾರಣ್ಯ ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಇದು ಟ್ರೆಕ್ಕಿಂಗ್‌ಗೆ ಸೂಕ್ತ ಸ್ಥಳವಾಗಿದೆ. ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ಮತ್ತು ಏಪ್ರಿಲ್ ನಡುವೆ!

ಭಾಗಮಂಡಲ

ಭಾಗಮಂಡಲವು ಕಾವೇರಿ ಮತ್ತು ಕನಿಕಾ ನದಿಗಳ ಸಂಗಮವಾಗುವ ಸ್ಥಳ. ಮೂರನೇ ನದಿ ಸುಜ್ಯೋತಿ ಭೂಗರ್ಭದಿಂದ ಸೇರುತ್ತದೆ. ಯಾತ್ರಾರ್ಥಿಗಳು ಸಂಗಮದಲ್ಲಿ ಸ್ನಾನ ಮಾಡುತ್ತಾರೆ.  ಭಗಂಡೇಶ್ವರ ದೇವಾಲಯದಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ನಾರಾಯಣ ಎಂಬ ಮೂರು ದೇವಾಲಯಗಳನ್ನು ಹೊಂದಿದೆ, ಇವೆಲ್ಲವೂ 10 ಶತಮಾನಗಳಷ್ಟು ಹಳೆಯದೆಂದು ನಂಬಲಾಗಿದೆ. 

ಕಾಫಿ

ಕೂರ್ಗ್ ದೇಶದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾಗಿದೆ. ಕೂರ್ಗ್ ಕಾಫಿ ತನ್ನ ನೀಲಿ ಬಣ್ಣ, ಶುದ್ಧ ಬೀನ್ಸ್ ಮತ್ತು ಉತ್ತಮ ಮದ್ಯಪಾನಗಳಿಗೆ ಹೆಸರುವಾಸಿ.ದು ವಿಶ್ವದಾದ್ಯಂತ ಬೇಡಿಕೆಯಲ್ಲಿರುವ ಡ್ರಿಂಕ್ಸ್. ಸೀಸನ್‌ನಲ್ಲಿ, ಇಡೀ ಕೂರ್ಗ್ ಕಾಫಿಯ ಘಂ ಎನ್ನುವ ಪರಿಮಳವನ್ನು ಹೊಂದಿರುತ್ತೆ.

ಕೊಡವ ಹಾಕಿ ಉತ್ಸವ

ಕೊಡಗಿನ ಕೊಡವ ಸಮುದಾಯದಲ್ಲಿ ಹಾಕಿ ಒಂದು ಕ್ರೇಜ್ ಆಗಿದೆ, ಆದ್ದರಿಂದ ಸಮುದಾಯದ ಕುಟುಂಬಗಳಲ್ಲಿ ಒಂದು ಪ್ರತಿವರ್ಷ ಈ ಪ್ರಸಿದ್ಧ ಹಾಕಿ ಪಂದ್ಯಾವಳಿಯನ್ನು (Hockey festival) ಆಯೋಜಿಸುತ್ತದೆ. ಇದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದ ಅತಿದೊಡ್ಡ ಫೀಲ್ಡ್ ಹಾಕಿ ಸ್ಪರ್ಧೆಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ. ಹಾಕಿಯಲ್ಲಿ 50ಕ್ಕೂ ಹೆಚ್ಚು ಕೊಡವರು ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಅವರಲ್ಲಿ 7 ಜನರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ.

click me!