ತೇಲುವ ಕಲ್ಲುಗಳಿಂದ ನಿರ್ಮಾಣವಾದ ರಾಮಸೇತು ಮುಳುಗಿದ್ದಾದರೂ ಹೇಗೆ?

Published : Feb 24, 2025, 11:49 AM ISTUpdated : Feb 24, 2025, 12:05 PM IST

ನೀರಿನ ಮೇಲೆ ತೇಲುವ ಕಲ್ಲುಗಳಿಂದ ಮಾಡುವ ರಾಮ ಸೇತುವನ್ನು ಶ್ರೀರಾಮನ ನೇತೃತ್ವದಲ್ಲಿ ವಾನರರು ನಿರ್ಮಾಣ ಮಾಡಿದ್ದರು. ಆದರೆ, ತೇಲುತ್ತಿದ್ದ ಸೇತುವೆ ಹೇಗೆ ಮುಳುಗಿತು ಅನ್ನೋದು ನಿಮಗೆ ಗೊತ್ತೇ?   

PREV
18
ತೇಲುವ ಕಲ್ಲುಗಳಿಂದ ನಿರ್ಮಾಣವಾದ ರಾಮಸೇತು ಮುಳುಗಿದ್ದಾದರೂ ಹೇಗೆ?

ರಾವಣನು (Ravana) ಸೀತಾ ಮಾತೆಯನ್ನು ಅಪಹರಿಸಿ ಲಂಕೆಯಲ್ಲಿ ಇಟ್ಟಾಗ, ಆಕೆಯನ್ನು ಕರೆತರಳು ಶ್ರೀರಾಮನು ವಾನರರ ಸಹಾಯದಿಂದ ಸೇತುವೆ ನಿರ್ಮಾಣ ಮಾಡಿ, ಲಂಕೆಗೆ ಲಗ್ಗೆ ಇಟ್ಟಿದ್ದನು. ಈ ಸೇತುವೆಯನ್ನು ತೇಲುವ ಕಲ್ಲುಗಳಿಂದ ಮಾಡಲಾಗಿತ್ತು. ಹಾಗಿದ್ರೆ ಆ ತೇಲುವ ಸೇತುವೆ ಈಗ ಮುರಿದಿರೋದಕ್ಕೆ ಕಾರಣ ಏನು? 
 

28

ಭಗವಾನ್ ರಾಮ (Lord Sri Ram) ಮತ್ತು ಅವನ ವಾನರ ಸೈನ್ಯವು ಲಂಕಾವನ್ನು ಆಕ್ರಮಿಸಲು ರಾಮ ಸೇತುವನ್ನು ನಿರ್ಮಿಸಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ರಾಮ ಸೇತುವನ್ನು ನಂತರ ಭಗವಾನ್ ಶ್ರೀ ರಾಮನು ಮುರಿದನು ಅನ್ನೋದು ನಿಮಗೆ ಗೊತ್ತಿದ್ಯಾ? ಖಂಡಿತಾ ಗೊತ್ತಿರೋದಕ್ಕೆ ಸಾಧ್ಯ ಇಲ್ಲ. 
 

38

ರಾಮಾಯಣದ ಪ್ರಕಾರ, ರಾವಣನನ್ನು ಸೋಲಿಸಿದ ನಂತರ, ರಾಮನು ತಾಯಿ ಸೀತಾ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಅಯೋಧ್ಯೆಯ ರಾಜನಾದ ನಂತರ, ಭಗವಾನ್ ರಾಮನು ವಿಭೀಷಣನನ್ನು ರಾಮನ ಶ್ರೇಷ್ಠ ಭಕ್ತರಲ್ಲಿ ಒಬ್ಬನೆಂದು ಭಾವಿಸುತ್ತಾನೆ.
 

48

ರಾವಣನ ಮರಣದ ನಂತರ, ವಿಭೀಷಣನು ಲಂಕಾವನ್ನು ಆಳುತ್ತಾನೆ, ಆದ್ದರಿಂದ ಶ್ರೀ ರಾಮನು ತನ್ನ ಭಕ್ತನಾದ ವಿಭೀಷಣನನ್ನು ಭೇಟಿಯಾಗಲು ಲಂಕಾಗೆ ಹೋಗಲು ಯೋಚಿಸುತ್ತಾನೆ. ಭಗವಾನ್ ಶ್ರೀ ರಾಮನೊಂದಿಗೆ, ಭರತ ಮತ್ತು ಸುಗ್ರೀವ ಕೂಡ ಪುಷ್ಪಕ ವಿಮಾನದಲ್ಲಿ ಲಂಕೆಗೆ ಹೊರಟರು.
 

58

ಶ್ರೀ ರಾಮನು ತನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ ಎಂದು ವಿಭೀಷಣನಿಗೆ ತಿಳಿದ ಕೂಡಲೇ, ಅವರನ್ನು ಸ್ವಾಗತಿಸಲು ಇಡೀ ನಗರವನ್ನು ಅಲಂಕರಿಸುತ್ತಾನೆ. ಸಕಲ ಸಿದ್ಧತೆಯೊಂದಿಗೆ ಶ್ರೀರಾಮ ಹಾಗೂ ಇತರರನ್ನು ವಿಭೀಷಣ ಸ್ವಾಗತಿಸುತ್ತಾನೆ. 
 

68

ಶ್ರೀ ರಾಮ, ಭರತ ಮತ್ತು ಸುಗ್ರೀವನನ್ನು ಭೇಟಿ ಮಾಡಿ ವಿಭೀಷಣನಿಗೆ ತುಂಬಾನೇ ಸಂತೋಷವಾಗಿತ್ತು.  ಇಲ್ಲಿವರೆಗೆ ರಾವಣನ ಆಳ್ವಿಕೆ ಇತ್ತು, ಆದರೆ ಇನ್ನು ಮುಂದೆ ನೀವು ಈ ನಗರವನ್ನು ನ್ಯಾಯಯುತವಾಗಿ ಆಳಬೇಕು ಎಂದು ಶ್ರೀ ರಾಮ್ ವಿಭೀಷಣನಿಗೆ ಹೇಳುತ್ತಾನೆ.
 

78

ಇದಕ್ಕೆ ವಿಭೀಷಣನು ಒಪ್ಪಿಗೆ ಸೂಚಿಸುತ್ತಾನೆ. ಆದರೆ ವಿಭೀಷಣನಿಗೆ ಒಂದು ಭಯ ಕಾಡುತ್ತೆ, ಅದನ್ನೇ ಆತ ಶ್ರೀರಾಮನ ಬಳಿ ಹೇಳುತ್ತಾನೆ. ಶ್ರೀರಾಮ ನೀವು ಇಲ್ಲಿಗೆ ಬರಲು ನಿರ್ಮಾಣ ಮಾಡಿದಂತಹ ಸೇತುವೆಯಿಂದ ನಿಮಗೆ ಉಪಕಾರವೇ ಆಯ್ತು, ಆದರೆ ಇನ್ನು ಮುಂದೆ ಅದೇ ಸೇತುವೆ ದಾಟಿ, ಬೇರೆ ಬೇರೆ ರಾಜರುಗಳು ಬಂದು ನಮ್ಮ ರಾಜ್ಯದ ಮೇಲೆ ಯುದ್ಧ ಸಾರಿದರೆ, ಜನರಿಗೆ ಹಿಂಸೆ ಕೊಟ್ಟರೆ ಏನು ಮಾಡೋದು. 
 

88

ಮುಂದುವರೆದು ಹೇಳುತ್ತಾನೆ, ಈ ತೇಲುವ ವಿಶಿಷ್ಟ ಕಲ್ಲುಗಳಿಂದ ಮಾಡಿದ ಸೇತುವೆಯನ್ನು ಮುಳುಗಿಸೋದಕ್ಕೆ ಸಾಧ್ಯವೇ ಎಂದು. ವಿಭೀಷಣನು ಹೀಗೆ ಹೇಳಿದ ನಂತರ, ಭಗವಾನ್ ಶ್ರೀ ರಾಮನು ತನ್ನ ಬಾಣಗಳಿಂದ ರಾಮ ಸೇತುವನ್ನು (Rama Setu) ಮುರಿಯುತ್ತಾನೆ. ಹಾಗಾಗಿಯೇ ತೇಲುತ್ತಿದ್ದಂತಹ ರಾಮ ಸೇತು ಇದೀಗ ನೀರಿನಲ್ಲಿ ಮುಳುಗಿರೋದನ್ನು ನಾವು ಕಾಣಬಹುದು. 
 

click me!

Recommended Stories