Phu Quoc Island: 15 ಭಾರತೀಯರ ಸಾವಿಗೆ ಕಾರಣವಾದ ವಿಯೆಟ್ನಾಂನ ಆ ಜಾಗ ಅಷ್ಟೊಂದು ಫೇಮಸ್ ಯಾಕೆ?

Published : Jul 13, 2026, 04:12 PM IST

ವಿಯೆಟ್ನಾಂನ ಸುಂದರ Phu Quoc Island ಬಳಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾಗಿರುವ ಸುದ್ದಿ ಎಲ್ಲೆಡೆ ಸದ್ದು ಮಾಡುತಿದೆ. ಆದರೆ ಫು ಕ್ವಾಕ್ ದ್ವೀಪ ಏಕೆ ಪ್ರಸಿದ್ಧವಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಯಾಕೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

PREV
17
ವಿಯೆಟ್ನಾಂನ ಜನಪ್ರಿಯ ಪ್ರವಾಸಿ ತಾಣ ಫು ಕ್ವಾಕ್ ದ್ವೀಪ

ವಿಯೆಟ್ನಾಂನ ಜನಪ್ರಿಯ ಪ್ರವಾಸಿ ತಾಣ ಫು ಕ್ವಾಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, 15 ಜನ ಸಾವೀಗೀಡಾಗಿರುವ ಘಟನೆ ನಡೆದಿದೆ. ಈ ಸುದ್ದಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ Phu Quoc Island ಹೈಲೈಟ್ ಆಗಿದ್ದು, ಯಾಕೆ ಹೆಚ್ಚಿನ ಪ್ರವಾಸಿಗರು ಈ ತಾಣಕ್ಕೆ ಹೋಗುತ್ತಿದ್ದಾರೆ ಎನ್ನುವ ಕುತೂಹಲವು ಹೆಚ್ಚಾಗಿದೆ.

27
Phu Quoc Island

ಫು ಕ್ವಾಕ್ ದ್ವೀಪವು ಸುಂದರವಾದ ಕಡಲತೀರಗಳು, ಸ್ಪಷ್ಟ ನೀಲಿ ಸಮುದ್ರಗಳು, ಐಷಾರಾಮಿ ರೆಸಾರ್ಟ್‌ಗಳು ಮತ್ತು ಸಾಹಸ ಚಟುವಟಿಕೆಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದು, ಈ ದ್ವೀಪವು ಪ್ರತಿ ವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಫು ಕ್ವಾಕ್ ದ್ವೀಪವನ್ನು ಏಕೆ ಪ್ರತಿ ವರ್ಷ ಇಷ್ಟೊಂದು ಜನ ಭೇಟಿ ನೀಡುತ್ತಿದ್ದಾರೆ ಗೊತ್ತಾ?

37
ವಿಯೆಟ್ನಾಂನ "ಪರ್ಲ್ ದ್ವೀಪ"

ಫು ಕ್ವೋಕ್ ದ್ವೀಪವನ್ನು ವಿಯೆಟ್ನಾಂನ "ಪರ್ಲ್ ದ್ವೀಪ" ಎಂದೂ ಕರೆಯುತ್ತಾರೆ. ಇದು ಬಿಳಿ ಮರಳಿನ ಕಡಲತೀರಗಳು, ಸ್ಪಷ್ಟ ನೀಲಿ ನೀರು, ಶಾಂತ ವಾತಾವರಣ ಮತ್ತು ಅದ್ಭುತ ಸನ್ ಸೆಟ್ ಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಲಾಂಗ್ ಬೀಚ್, ಸಾವೊ ಬೀಚ್, ಖೇಮ್ ಬೀಚ್ ಮತ್ತು ಓಂಗ್ ಲ್ಯಾಂಗ್ ಬೀಚ್‌ಗಳು ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯವಾಗಿವೆ.

47
ಬೀಚ್ ಎಡ್ವೆಂಚರ್ ಗಳಿಗೆ ಫೇಮಸ್

ನೀವು ಸಾಹಸಿಗರಾಗಿದ್ದರೆ, ಫು ಕ್ವೋಕ್ ದ್ವೀಪವು ಉತ್ತಮ ಸ್ಥಳ. ಇಲ್ಲಿಗೆ ಭೇಟಿ ನೀಡುವವರು ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ಕಯಾಕಿಂಗ್, ಜೆಟ್ ಸ್ಕೀಯಿಂಗ್, ಬೀಚ್ ವಾಕ್ ಮತ್ತು ಬೋಟ್ ರೈಡ್ ಸೇರಿದಂತೆ ವಿವಿಧ ಆಕ್ಟಿವಿಟಿಗಳನ್ನು ಎಂಜಾಯ್ ಮಾಡುತ್ತಾರೆ. ವರ್ಣರಂಜಿತ ಹವಳದ ಬಂಡೆಗಳು ಮತ್ತು ಸಮುದ್ರ ಜೀವನವು ಪ್ರವಾಸಿಗರಿಗೆ ಸ್ವರ್ಗ ಸುಖವನ್ನು ನೀಡುತ್ತದೆ.

57
ವಿಶ್ವದ ಅತಿ ಉದ್ದದ ಕೇಬಲ್ ಕಾರು

ಫು ಕ್ವೋಕ್ ದ್ವೀಪದ ಪ್ರಮುಖ ಆಕರ್ಷಣೆಯೆಂದರೆ ಹಾನ್ ಥಾಮ್ ಕೇಬಲ್ ಕಾರು. ಸುಮಾರು 8 ಕಿಲೋಮೀಟರ್ ಉದ್ದದ ಈ ಕೇಬಲ್ ಕಾರು ಸಮುದ್ರವನ್ನು ಮೇಲಿದೆ ಮತ್ತು ಇದು ವಿಶ್ವದ ಅತಿ ಉದ್ದದ ಮೂರು-ತಂತಿಯ ಸಾಗರದ ಮೇಲಿನ ಕೇಬಲ್ ಕಾರುಗಳಲ್ಲಿ ಒಂದಾಗಿದೆ. ಮೇಲಿನಿಂದ ಸಮುದ್ರ ಮತ್ತು ಸಣ್ಣ ದ್ವೀಪಗಳ ಸೌಂದರ್ಯವು ಪ್ರವಾಸಿಗರಿಗೆ ಥ್ರಿಲ್ ನೀಡುತ್ತದೆ.

67
ಇದಕ್ಕೆ ಯುನೆಸ್ಕೋದಿಂದಲೂ ಮಾನ್ಯತೆ ಸಿಕ್ಕಿದೆ

ಫು ಕ್ವಾಕ್ ದ್ವೀಪದ ಹೆಚ್ಚಿನ ಭಾಗವು ಫು ಕ್ವಾಕ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಈ ಉದ್ಯಾನವನವು ಯುನೆಸ್ಕೋ ಮಾನ್ಯತೆ ಪಡೆದ ಕಿಯೆನ್ ಗಿಯಾಂಗ್ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿದೆ. ದಟ್ಟವಾದ ಕಾಡುಗಳು, ಅಪರೂಪದ ವನ್ಯಜೀವಿಗಳು ಮತ್ತು ನೂರಾರು ಸಸ್ಯ ಪ್ರಭೇದಗಳು ಇಲ್ಲಿ ಕಂಡುಬರುತ್ತವೆ. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ.

77
ಭಾರತೀಯರನ್ನು ಆಕರ್ಷಿಸುತ್ತಿರುವ Phu Quoc Island

ಕಳೆದ ಕೆಲವು ವರ್ಷಗಳಿಂದ ಭಾರತೀಯ ಪ್ರವಾಸಿಗರಲ್ಲಿ ಫು ಕ್ವೋಕ್ ದ್ವೀಪವು ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತದಿಂದ ವಿಯೆಟ್ನಾಂಗೆ ನೇರ ವಿಮಾನಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಇದಲ್ಲದೆ, ಇದು ಐಷಾರಾಮಿ ರೆಸಾರ್ಟ್‌ಗಳು, ಬೀಚ್ ವಿಲ್ಲಾಗಳು, ನೈಟ್ ಮಾರ್ಕೆಟ್, ಸಮುದ್ರಾಹಾರ, ಮನೋರಂಜನಾ ಉದ್ಯಾನವನಗಳು ಮತ್ತು ಕಡಿಮೆ ವೆಚ್ಚದಲ್ಲಿ ಇಲ್ಲಿ ವೆಕೇಶನ್ ಎಂಜಾಯ್ ಮಾಡಬಹುದು ಎನ್ನುವ ಕಾರಣದಿಂದ ಭಾರತೀಯರು ವಿಯೆಟ್ನಾಂನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories