ಲಡಾಖ್ ಧ್ವಜದಲ್ಲಿ ಬರೆಯಲಾದ ಮಂತ್ರಗಳ ಅರ್ಥವೇನು?

First Published | May 13, 2023, 1:47 PM IST

ಜನರು ಲಡಾಖ್ ನಿಂದ ತಂದ ಧ್ವಜಗಳನ್ನು ತಮ್ಮ ವಾಹನಗಳಲ್ಲಿ ಹಾಕುತ್ತಾರೆ. ಆದರೆ ಇದರಲ್ಲಿ ಏನು ಬರೆದಿದ್ದಾರೆ ಅನ್ನೋದರ ಬಗ್ಗೆ ಕೇಳಿದ್ರೆ ಮಾತ್ರ ಯಾರಿಗೂ ತಿಳಿದಿರೋದಿಲ್ಲ. ವಾಸ್ತವವಾಗಿ, ಇವು ಟಿಬೆಟಿಯನ್ ಧ್ವಜಗಳಾಗಿದ್ದು, ಅವುಗಳ ಮೇಲೆ ಅನೇಕ ಅಕ್ಷರಗಳನ್ನು ಬರೆಯಲಾಗಿದೆ. ಆದರೆ ಈ ಮಂತ್ರಗಳ ಅರ್ಥ ನಿಮಗೆ ತಿಳಿದಿದೆಯೇ? 

ಲಡಾಖ್ ನಲ್ಲಿ ಅತ್ಯಂತ ಪ್ರಸಿದ್ಧ ವಿಷಯ ಯಾವುದು ಎಂದು ಕೇಳಿದ್ರೆ ಖಂಡಿತವಾಗಿಯೂ ಪ್ರತಿಯೊಬ್ಬರೂ ಸಹ ಸುಂದರವಾದ ಪರ್ವತಗಳು, ಹಿಮ, ಆಹಾರ ಎನ್ನುತ್ತಾರೆ. ಇದರ ಜೊತೆಗೆ ಅಲ್ಲಿನ ವರ್ಣರಂಜಿತ ಧ್ವಜವು ಬಹಳ ಪ್ರಸಿದ್ಧವಾಗಿದೆ, ಇದನ್ನು ಬಹುತೇಕ ಪ್ರತಿಯೊಬ್ಬ ಪ್ರವಾಸಿಗರು ತಮ್ಮೊಂದಿಗೆ ತರುತ್ತಾರೆ. ಅದು ಕಾರು ಅಥವಾ ಬೈಕ್ ಆಗಿರಲಿ, ನೀವು ಎಲ್ಲೆಡೆ ಲಡಾಖಿ ಧ್ವಜಗಳನ್ನು (Ladakh Flag) ನೋಡಬಹುದು. ಈ ವರ್ಣರಂಜಿತ ಧ್ವಜಗಳಲ್ಲಿ ಅನೇಕ ರೀತಿಯ ಅಕ್ಷರಗಳನ್ನು ಬರೆಯಲಾಗಿದೆ. ಆದರೆ ಇದು ವಾಸ್ತವವಾಗಿ ಲಡಾಖಿ ಅಲ್ಲ ಆದರೆ ಟಿಬೆಟಿಯನ್ ಧ್ವಜ ಎಂದು ನಿಮಗೆ ತಿಳಿದಿದೆಯೇ? 

ಈ ಧ್ವಜಗಳನ್ನು ಬೌದ್ಧ ಸನ್ಯಾಸಿಗಳ (Buddha Monks) ಸುತ್ತಲೂ ಇರಿಸಲಾಗಿದೆ. ಮನಾಲಿಯಿಂದ ಲಡಾಖ್ ವರೆಗೆ, ನೀವು ಅಂತಹ ಧ್ವಜಗಳನ್ನು ವಿವಿಧ ಸ್ಥಳಗಳಲ್ಲಿ ಕಾಣಬಹುದು. ಆದರೆ ಈ ಧ್ವಜಗಳ ಮೇಲೆ ಏನು ಬರೆಯಲಾಗಿದೆ ಗೊತ್ತಾ? ವಾಸ್ತವವಾಗಿ, ಟಿಬೆಟಿಯನ್ ಮಂತ್ರಗಳನ್ನು ಅವುಗಳ ಮೇಲೆ ಬರೆಯಲಾಗಿದೆ. ಇಲ್ಲಿನ ಪ್ರತಿಯೊಂದು ಬಣ್ಣಕ್ಕೂ ವಿಭಿನ್ನ ಅರ್ಥವಿದೆ. ಪ್ರತಿಯೊಂದು ಬಣ್ಣವು ಒಂದು ಅಂಶವನ್ನು ಪ್ರತಿನಿಧಿಸುತ್ತದೆ. 

Tap to resize

ಬಿಳಿ ಎಂದರೆ ಗಾಳಿ, ಕೆಂಪು ಎಂದರೆ ಬೆಂಕಿ, ಹಸಿರು ಎಂದರೆ ನೀರು, ಹಳದಿ ಎಂದರೆ ಭೂಮಿ, ನೀಲಿ ಎಂದರೆ ಗಾಳಿ. ಇದರಲ್ಲಿ 7 ವಿಭಿನ್ನ ಬಣ್ಣಗಳಿವೆ ಎಂದು ಜನರು ಭಾವಿಸುತ್ತಾರೆ, ಆದರೆ ಅದರಲ್ಲಿ ಕೇವಲ ಐದು ಬಣ್ಣಗಳಿವೆ. ಇತರ ಬಣ್ಣಗಳು ಪುನರಾವರ್ತಿತವಾಗಿದ್ದು, ಇದು ಉತ್ತರ ಮತ್ತು ದಕ್ಷಿಣ ದಿಕ್ಕನ್ನು ಸಂಕೇತಿಸುತ್ತದೆ.

ಮಂತ್ರಗಳನ್ನು ಹೊರತುಪಡಿಸಿ, ಕಲಾಕೃತಿ ಕೂಡ ಇದೆ. ಟಿಬೆಟಿಯನ್ ಪ್ರಾರ್ಥನಾ ಧ್ವಜದ ಪ್ರತಿಯೊಂದು ಧ್ವಜವು ಮೂರು ರತ್ನಗಳನ್ನು ಜೋಡಿಸಿರುವ ಗ್ರಾಫಿಕ್ ಕುದುರೆಯನ್ನು ಹೊಂದಿದೆ. ಈ ರತ್ನಗಳನ್ನು ಬುದ್ಧ, ಧರ್ಮ ಮತ್ತು ಸಂಘದ ಸಂಕೇತಗಳೆಂದು ಪರಿಗಣಿಸಲಾಗಿದೆ. ಈ ಗ್ರಾಫಿಕ್ ಮೇಲೆ ಮಂತ್ರಗಳನ್ನು ಬರೆಯಲಾಗಿದೆ. ನೀವು ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ವಿನ್ಯಾಸ ಮತ್ತು ಸಾಮಾನ್ಯ ವಿನ್ಯಾಸ ಎರಡನ್ನೂ ಕಾಣಬಹುದು. 

ಟಿಬೆಟಿಯನ್ ಧ್ವಜದಲ್ಲಿ ಮುದ್ರಿಸಲಾದ ಮಂತ್ರದ ಅರ್ಥವೇನು?
ಧ್ವಜದ ಮೇಲೆ 'ಓಂ ಮಣಿ ಪದ್ಮೆ ಹಮ್' ಎಂದು ಬರೆಯಲಾಗಿದೆ. ಇದನ್ನು ಟಿಬೆಟಿಯನ್ ಭಾಷೆಯಲ್ಲಿ ಬರೆಯಲಾಗಿದೆ. ಓಂ ಅನ್ನು ಅತ್ಯಂತ ಪವಿತ್ರ ಅಕ್ಷರವೆಂದು ಪರಿಗಣಿಸಲಾಗಿದೆ. ಮಣಿ ಎಂದರೆ ರತ್ನ, ಪದ್ಮ ಎಂದರೆ ಕಮಲ. ಇದರ ಅರ್ಥ ಜ್ಞಾನ ತುಂಬಿದ ಆತ್ಮ ಎಂದು. ಈ ಮಂತ್ರಕ್ಕೆ ಒಂದೇ ಅರ್ಥವಿಲ್ಲ. ಇದು ಸಹಾನುಭೂತಿ, ನೈತಿಕತೆ, ತಾಳ್ಮೆ, ಶ್ರದ್ಧೆ, ತ್ಯಾಗ ಮತ್ತು ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ನೀವು ಈ ಮಂತ್ರವನ್ನು ಪಠಿಸಿದರೆ, ಹೆಮ್ಮೆ, ಅಸೂಯೆ, ದುರಾಸೆ ಮತ್ತು ಕೋಪದಿಂದ ದೂರವಿರುತ್ತೀರಿ ಎಂದು ನಂಬಲಾಗಿದೆ.  

ಈ ಧ್ವಜಗಳನ್ನು ಗಾಳಿಯಲ್ಲಿ ಹಾರುತ್ತಿರಬೇಕು. 
ಈ ಧ್ವಜಗಳು ಎಂದಿಗೂ ಸ್ಥಬ್ದವಾಗಿ ಇರಬಾರದು ಎಂದು ಬೌದ್ಧ ಧರ್ಮವು ನಂಬುತ್ತದೆ. ಇವು ಸಕಾರಾತ್ಮಕ ಕಂಪನಗಳೊಂದಿಗೆ ಬರುತ್ತವೆ ಮತ್ತು ಯಾವಾಗಲೂ ಗಾಳಿಯಲ್ಲಿ ಹಾರುತ್ತಿರಬೇಕು. ಆದ್ದರಿಂದ, ಅವುಗಳನ್ನು ಪರ್ವತಗಳ ಮೇಲೆ ಕಟ್ಟಲಾಗುತ್ತೆ. ಇದರಿಂದ ಅವು ಚಲಿಸುತ್ತಲೇ ಇರುತ್ತವೆ. 

ಈ ಧ್ವಜಗಳು ಎಂದಿಗೂ ನೆಲಕ್ಕೆ ಬೀಳಬಾರದು. 
ಬೌದ್ಧ ಧರ್ಮದ ಸಂಕೇತವೆಂದು ಪರಿಗಣಿಸಲಾದ ಈ ಧ್ವಜಗಳನ್ನು ಯಾವುದೇ ಸಂದರ್ಭದಲ್ಲೂ ನೆಲದ ಮೇಲೆ ಬೀಳಿಸಬಾರದು. ಆದ್ದರಿಂದ, ಅದನ್ನು ಯಾವಾಗಲೂ ಗಟ್ಟಿಯಾಗಿ ಕಟ್ಟಿರುತ್ತಾರೆ. ಇದನ್ನು ಬಾಗಿಲ ಚೌಕಟ್ಟಿನಲ್ಲಿ ಕಟ್ಟಿದ್ರೆ, ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.   ಈ ಧ್ವಜದ ಬಗ್ಗೆ ಮತ್ತೊಂದು ಮಾನ್ಯತೆ ಇದೆ. ಧ್ವಜಗಳ ಬಣ್ಣ ಮಸುಕಾಗುತ್ತಿದ್ದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರಾರ್ಥನೆಗಳು ಗಾಳಿಯೊಂದಿಗೆ ಭಗವಂತನನ್ನು ತಲುಪುತ್ತವೆ ಎಂದು ನಂಬಲಾಗಿದೆ.  

Latest Videos

click me!