ವಿದೇಶ ಸುತ್ತಿ ಮನೆಗೆ ಬಂದಾಗ ಮೊದಲೇನು ತಿಂತಾರೆ ಡಾ. ಬ್ರೋ? ಕಂಟೆಂಟ್ ಕ್ರಿಯೇಟರ್ಸ್ ಗೆ ಟಿಪ್ಸ್ ನೀಡಿದ ಗಗನ್

Published : Apr 30, 2026, 09:29 PM IST

ಯಾವುದೇ ವಿವಾದ ಇಲ್ದೆ ಎಲ್ಲರಿಗೆ ಇಷ್ಟವಾಗುವ ಕಂಟೆಂಟ್ ಕ್ರಿಯೇಟರ್ ಡಾ. ಬ್ರೋ. ಕಳೆದ ಎರಡು ತಿಂಗಳಿಂದ ಡಾ. ಬ್ರೋ ಅವರ ಯಾವುದೇ ವಿಡಿಯೋ ಬಂದಿಲ್ಲ. ನೆಕ್ಸ್ಟ್ ಯಾವ್ದು ಅಂತ ಕಾಯ್ತಿರೋರಿಗೆ ಖುಷಿ ಸುದ್ದಿ ಇದೆ. 

PREV
16
ಎಲ್ಲಿ ಹೋದ್ರು ಡಾ. ಬ್ರೋ?

ಡಾ. ಬ್ರೋ ಯಾರಿಗೆ ಗೊತ್ತಿಲ್ಲ. ಪ್ರವಾಸಿ ಕಂಟೆಂಟ್ ಕ್ರಿಯೇಟರ್ ಗಗನ್ ಅನ್ನೋದಕ್ಕಿಂತ ಡಾ. ಬ್ರೋ ಹೆಸರೇ ಪ್ರಸಿದ್ಧಿ ಪಡೆದಿದೆ. ದೇಶ, ದೇಶ ಸುತ್ತಿ, ಅಪಾಯದ ಸ್ಥಳಗಳಿಗೆ ಹೋಗಿ ಅಧ್ಬುತ ವಿಡಿಯೋ ಮಾಡುವ ಗಗನ್ ಕಳೆದ ಎರಡು ತಿಂಗಳಿಂದ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಹಾಕಿಲ್ಲ. ವೀಕ್ಷಕರು ಡಾ. ಬ್ರೋ ವಿಡಿಯೋ ಮಿಸ್ ಮಾಡಿಕೊಳ್ತಿದ್ದಾರೆ. ಆದ್ರೆ ಗಗನ್,ಮುಂದೆ ಬನ್ನಿ ಎನ್ನುವ ಪೋಡ್ಕಾಸ್ಟ್ ನಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಆಸಕ್ತಿಕರ ವಿಷ್ಯಗಳನ್ನು ಹೇಳಿದ್ದಾರೆ.

26
ಡಾ. ಬ್ರೋ ಹೆಸರು ಬಂದಿದ್ದು ಹೇಗೆ?

ಡಾ. ಬ್ರೋ ಹೆಸರಿನ ಬಗ್ಗೆ ಎಲ್ಲರಿಗೂ ಕನ್ಫ್ಯೂಸ್ ಇದೆ. ಡಾ. ಅಂದ್ರೆ ಡಾಕ್ಟರ್. ಗಗನ್ ಎಂಬಿಬಿಎಸ್ ಓದಿದ್ದು, ಟ್ರಾವೆಲ್ ವ್ಲಾಗ್ ಮಾಡ್ತಿದ್ದಾರೆ ಅಂತ ಕೆಲವರು ನಂಬಿದ್ದಾರೆ. ಆದ್ರೆ ನಿಜವಾಗ್ಲೂ ಈ Dr ಅಂದ್ರೆ ಡಾಕ್ಟರ್ ಅಲ್ಲ. ಡಿಯರ್ ಬ್ರೋ. ಕಾಲೇಜಿನಲ್ಲಿರುವಾಗ್ಲೇ ಗಗನ್ ಯುಟ್ಯೂಬ್ ಗೆ ವಿಡಿಯೋ ಹಾಕಲು ಶುರು ಮಾಡಿದ್ದರು. ಯೂಟ್ಯೂಬ್ ಚಾನೆಲ್ ಗೆ ಏನು ಹೆಸರಿಡಬೇಕು ಅಂತ ಆಲೋಚನೆ ಮಾಡಿದಾಗ ಬಂದಿದ್ದೇ ಈ ಹೆಸರು. ಕಾಲೇಜಿನಲ್ಲಿ ಎಲ್ರೂ ಬ್ರೋ ಬ್ರೋ ಅನ್ನೋದನ್ನು ಕೇಳಿ, ಗಗನ್ ತಮ್ಮ ಚಾನೆಲ್ ಗೆ ಬ್ರೋ ಅಂತ ಹೆಸರಿಟ್ಟರು. ಅದ್ರ ಹಿಂದೆ ಅಥವ ಮುಂದೆ ಏನಾದ್ರೂ ಸೇರಿಸ್ಬೇಕು ಅಂದಾಗ ಅವರಿಗೆ ಹೊಳೆದಿದ್ದು ಡಿಯರ್. ಹೀಗೆ ಅವರ ಚಾನೆಲ್ ಗೆ Dr. ಬ್ರೋ ಅಂತ ನಾಮಕರಣ ಮಾಡಿದ್ರು.

36
ಚಾನೆಲ್ ಶುರು ಮಾಡೋವಾಗ ಬಂದ ಚಾಲೆಂಜ್ ಏನು?

ಪಿಯುಸಿಯಿಂದ ಶುರುವಾದ ಅವರ ಯುಟ್ಯೂಬ್ ಚಾನೆಲ್ ಇಲ್ಲಿಗೆ ಬಂದು ನಿಂತಿದೆ. ಡಾ. ಬ್ರೋ ಚಾನೆಲ್ ಆರಂಭ ಕೂಡ ಧಮಾಲ್ ಆಗಿರಲಿಲ್ಲ. ಸಾಕಷ್ಟು ವಿಡಿಯೋ ಮಾಡಿದ್ದ ಗಗನ್ ನಿಧಾನವಾಗಿ ಜನರಿಗೆ ಪರಿಚಯ ಆದ್ರು. ಡಿಗ್ರಿಗೆ ಬರ್ತಿದ್ದಂತೆ ಸ್ವಲ್ಪ ಪಳಗಿದ್ದ ಗಗನ್ ಅವರಿಗೆ ಕಾಡಿದ್ದು ಹಣ. ಸಮಯ ಸಿಕ್ಕಾಗ ಪೂಜೆ, ಹೋಮದಲ್ಲಿ ಸಹಾಯ ಮಾಡ್ತಿದ್ದ ಗಗನ್ ಈ ಹಣವನ್ನೇ ತಮ್ಮ ಪ್ರವಾಸಕ್ಕೆ ಖರ್ಚು ಮಾಡ್ತಿದ್ದರು.

46
ಡಾ. ಬ್ರೋ ಇಷ್ಟಪಡುವ ಆಹಾರ ಯಾವ್ದು?

ವಿದೇಶ ಸುತ್ತಿ ಮನೆಗೆ ಬಂದಾಗ ಗಗನ್ ಮೊದಲು ತಿನ್ನುವ ಆಹಾರ ಉಪ್ಪಿಟ್ಟು. ವಿದೇಶದಲ್ಲಿ ಹಣ್ಣು, ತರಕಾರಿ, ಅನ್ನ – ಉಪ್ಪಿನಕಾಯಿಯಲ್ಲೂ ಗಗನ್ ಹೊಟ್ಟೆ ತುಂಬಿಸಿಕೊಂಡಿದ್ದಿದೆ. ಆದ್ರೆ ಮನೆಗೆ ಬರ್ತಿದ್ದಂತೆ ಅವರು ಇಷ್ಟಪಟ್ಟು ಉಪ್ಪಿಟ್ಟು ತಿಂತಾರೆ. ಮರುದಿನ ಮುದ್ದೆ ತಿಂತೇನೆ ಎನ್ನುತ್ತಾರೆ ಗಗನ್.

56
ಗಗನ್ ಗೆ ಯಾವ ದೇಶ ಇಷ್ಟ

ನಾನಾ ದೇಶಗಳನ್ನು ಸುತ್ತಿ ಬಂದಿರುವ ಗಗನ್, ಮುಂದಿನ ಜನ್ಮದಲ್ಲೂ ಭಾರತದಲ್ಲೇ ಹುಟ್ಟಬೇಕು ಎನ್ನುತ್ತಾರೆ. ಭಾರತದ ಋಣ ತೀರಿಸಬೇಕು. ವಿದೇಶ ಸುತ್ತಾಡಲು ಚೆಂದ. ಆದ್ರೆ ಜೀವನ ನಡೆಸಲು ಭಾರತ ಎಂದಿದ್ದಾರೆ.

66
ಯುವಕರಿಗೆ ಸ್ಪೂರ್ತಿ ಮಾತು

ಪ್ರತಿಯೊಬ್ಬರೂ ತಮ್ಮಿಷ್ಟದ ಕೆಲ್ಸ ಮಾಡ್ಬೇಕು ಎನ್ನುವ ಗಗನ್, ಡಿಗ್ರಿ ನಂತ್ರದ ನಾಲ್ಕೈದು ವರ್ಷ ರಿಸ್ಕ್ ತೆಗೆದುಕೊಳ್ಳಿ ಎನ್ನುತ್ತಾರೆ. ಮಕ್ಕಳು ಯೂಟ್ಯೂಬ್ ಶುರು ಮಾಡಿದ್ರೆ ಪಾಲಕರು ಸಪೋರ್ಟ್ ಮಾಡ್ಬೇಕು, ಮಕ್ಕಳು ಪಾರ್ಟ್ ಟೈಂ ಕೆಲ್ಸ ಮಾಡಿ, ಅದ್ರಲ್ಲಿ ಬಂದ ಹಣದಲ್ಲಿ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವ ಗಗನ್, ಕನ್ನಡಿಗರೆಲ್ಲ ಉದ್ಯಮಿಗಳಾಗ್ಬೇಕು ಎನ್ನುತ್ತಾರೆ. Mundhe Banni Podcast ನಲ್ಲಿ ಗಗನ್ ಮುಂದೆ ಚಾನಲ್ ಶುರು ಮಾಡುವ ಪ್ಲಾನ್ ನಲ್ಲಿರೋರಿಗೆ ಸಾಕಷ್ಟು ಸಲಹೆ ನೀಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories