ಪ್ರಪಂಚದಾದ್ಯಂತ ಮದುವೆಯ ವಿವಿಧ ಆಚರಣೆಗಳಿವೆ (wedding traditions). ಕೆಲವು ಸ್ಥಳಗಳ ಸಂಪ್ರದಾಯ ಹೇಗಿದೆಯೆಂದರೆ ಈ ರೀತಿ ಸಂಪ್ರದಾಯವೂ ಇದೆಯೇ ಎಂದು ನಿಮಗೆ ಅಚ್ಚರಿಯಾಗಬಹುದು. ನಮ್ಮ ನೆರೆಯ ದೇಶ ಚೀನಾದ ಬಗ್ಗೆ ಹೇಳೊದಾದ್ರೆ, ಇಲ್ಲಿ ಮದುವೆಯ ಸಮಯದಲ್ಲಿ ಅಂತಹ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ, ಇದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಇಲ್ಲಿ ವಧುವು ಅಳುವುದರಿಂದ ಹಿಡಿದು ಅವಳನ್ನು ವರ ಸ್ಪರ್ಶಿಸಲೂ ಸಹ ರೀತಿ ರಿವಾಜುಗಳಿವೆ. ಇಲ್ಲಿನ ಜನರು ಎಷ್ಟೇ ಆಧುನಿಕವಾಗಿದ್ದರೂ ತಮ್ಮ ಸಂಪ್ರದಾಯವನ್ನು ಅನುಸರಿಸಲು ಮರೆಯುವುದಿಲ್ಲ. ಚೀನಾದಲ್ಲಿ ಮದುವೆಗಳಲ್ಲಿನ ಸಂಪ್ರದಾಯದ ಬಗ್ಗೆ ತಿಳಿಯೋಣ…
ಚೀನಾದಲ್ಲಿ ಆಧುನಿಕ ವೆರ್ಸ್ಟನ್ ಶೈಲಿಯ ವಿವಾಹಗಳು ನಡೆಯಲಿವೆ. ಇದರಲ್ಲಿ ಹೆಚ್ಚಾಗಿ ಗಂಡು- ಹೆಣ್ಣಿಗೆ ತುಂಬಾನೆ ಕಾಟ ಕೊಡುವ ಸಂಪ್ರದಾಯ ಸಹ ಇದೆ. ವಧು ಮತ್ತು ವರರಿಗೆ ಅವರ ಸಂಬಂಧಿಕರು ಮತ್ತು ಸ್ನೇಹಿತರು ಕಿರುಕುಳ ನೀಡುತ್ತಾರೆ. ಆದಾಗ್ಯೂ, ಈ ಆಚರಣೆಯು ಶತಮಾನಗಳಿಂದ ನಡೆಯುತ್ತಿದೆ. ಈ ಮೊದಲು, ವಧುವಿಗೆ ಅವಳ ಅತ್ತೆ-ಮಾವನ ಮನೆಯಲ್ಲಿ ಕಿರುಕುಳ ನೀಡಬೇಕಾಗಿತ್ತು. ಆದರೆ ಈಗ ಈ ಆಚರಣೆಯನ್ನು ಕೇವಲ ಮೋಜಿಗಾಗಿ ಮಾಡಲಾಗುತ್ತದೆ. ಮದುವೆಯಲ್ಲಿರುವ ಅತಿಥಿಗಳು ಈ ಆಚರಣೆಯನ್ನು ನೋಡಲು ಉತ್ಸುಕರಾಗಿರುತ್ತಾರೆ.
ಪ್ರಾಚೀನ ಕಾಲದಲ್ಲಿ ಮದುವೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಡಲಾಗುತ್ತಿತ್ತು. ಇದರಿಂದಾಗಿ ವಧು ಮತ್ತು ವರರಿಗೆ ಲೈಂಗಿಕತೆಯ ಬಗ್ಗೆ ತಿಳಿದಿರಲಿಲ್ಲ. ಈ ಆಚರಣೆಯ ಮೂಲಕ, ದೈಹಿಕ ಸಂಬಂಧವನ್ನು (physical relationship) ಹೇಗೆ ಹೊಂದಬೇಕೆಂದು ಅವರಿಗೆ ತಿಳಿಸಲಾಯಿತು.
ಇಷ್ಟೇ ಅಲ್ಲ, ಮದುವೆ ನಂತರ, ವರನ ಕುಟುಂಬದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ವರ ಅವಳ ಅನುಮತಿಯಿಲ್ಲದೇ ವಧುವನ್ನು ಮುಟ್ಟುವಂತಿಲ್ಲ ಅಥವಾ ಅವನು ಬಲವಂತವಾಗಿ ಡ್ರಿಂಕ್ಸ್ ಕುಡಿಯಲು ಪ್ರಯತ್ನಿಸುವಂತಿಲ್ಲ. ಅಂದರೆ, ಮದುವೆಯ ನಂತರ, ಹುಡುಗಿಯ ಅನುಮತಿಯ ನಂತರವೇ ಅವಳ ಪತಿ ಅವಳೊಂದಿಗೆ ಸಂಬಂಧ ಹೊಂದಬಹುದು.
ಚೀನಾದಲ್ಲಿ ಮದುವೆ ಸಮಯದಲ್ಲಿ ಮತ್ತೊಂದು ವಿಚಿತ್ರ ಆಚರಣೆಯನ್ನು ನಡೆಸಲಾಗುತ್ತದೆ. ನೈಋತ್ಯ ಪ್ರಾಂತ್ಯದ ಸಿಚುವಾನ್ ನಲ್ಲಿ, ತುಜಿಯಾ ಬುಡಕಟ್ಟಿನ ಮದುವೆಗೆ ಒಂದು ತಿಂಗಳ ಮೊದಲು ವಧು ಅಳಬೇಕು (crying women). ದೊಡ್ಡ ಹಜಾರದಲ್ಲಿ ವಧು ಕುಳಿತು ಪ್ರತಿದಿನ ಸುಮಾರು ಒಂದು ಗಂಟೆಗಳ ಕಾಲ ಅಳಬೇಕು..
ಹತ್ತು ದಿನಗಳ ನಂತರ, ತಾಯಿಯೂ ಅವರೊಂದಿಗೆ ಅಳೋದಕ್ಕೆ ಆರಂಭಿಸುತ್ತಾರೆ. ನಂತರ 10 ದಿನಗಳ ನಂತರ, ಅಜ್ಜಿ ವಧುವಿನೊಂದಿಗೆ ಅಳುತ್ತಾರೆ. ನಂತರ ಸಹೋದರಿ, ಚಿಕ್ಕಮ್ಮ ಕೂಡ ಅವರೊಂದಿಗೆ ಅಳುತ್ತಾರೆ. ವರದಿಗಳ ಪ್ರಕಾರ, ಅಳುವ ಸಮಯದಲ್ಲಿ ವಿಶೇಷ ಹಾಡನ್ನು ನುಡಿಸಲಾಗುತ್ತದೆ, ಅದರ ಜೊತೆಗೆ ಎಲ್ಲರೂ ಅಳುತ್ತಾರೆ. ಇದನ್ನು ಅಳುವ ಮದುವೆ ಹಾಡು ಎಂದು ಕರೆಯಲಾಗುತ್ತದೆ.
ಶತಮಾನಗಳಷ್ಟು ಹಳೆಯದಾದ ಈ ಸಂಪ್ರದಾಯದಲ್ಲಿ ವಧು ಅಳದಿದ್ದರೆ, ಹಳ್ಳಿಯಲ್ಲಿ ತಮಾಷೆ ಮಾಡಲಾಗುತ್ತದೆ. ಜನರು ಆ ಕುಟುಂಬವನ್ನು ಕೆಟ್ಟ ಪೀಳಿಗೆಗೆ ಸೇರಿದವರೆಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲ ಹುಡುಗಿಗೆ ಅಳುವುದು ಹೇಗೆಂದು ತಿಳಿದಿಲ್ಲದಿದ್ದಾಗ, ಅವಳ ತಾಯಿ ಅವಳನ್ನು ಹೊಡೆಯುತ್ತಾಳೆ ಮತ್ತು ಅವಳನ್ನು ಅಳುವಂತೆ ಮಾಡುತ್ತಾಳೆ.