New Year 2023: ಕ್ರಿಸ್‌ಮಸ್‌ನಿಂದ ನ್ಯೂ ಇಯರ್‌ವರೆಗೆ ರಜೆ ಎಂಜಾಯ್ ಮಾಡಲು ಇಲ್ಲಿವೆ ಬೆಸ್ಟ್ ತಾಣಗಳು

First Published Dec 3, 2022, 7:08 PM IST

ನೀವು 2022 ರ ವರ್ಷವನ್ನು ಕೊನೆಗೊಳಿಸಲು ಮತ್ತು ಹೊಸ ವರ್ಷವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಬಯಸಿದರೆ, ಇಲ್ಲಿದೆ ನಿಮಗಾಗಿ ಸುಂದರ ತಾಣಗಳ ಬಗ್ಗೆ ಒಂದಿಷ್ಟು ಮಾಹಿತಿ. ಇಲ್ಲಿ ನೀವು ಕ್ರಿಸ್ಮಸ್, ನ್ಯೂ ಇಯರ್ ವೀಕ್ ನ್ನು ಸಖತ್ತಾಗಿ ಎಂಜಾಯ್ ಮಾಡಬಹುದು.

ಡಿಸೆಂಬರ್ ತಿಂಗಳು ರಜೆಗೆ ಸೂಕ್ತವಾಗಿದೆ. ಈ ತಿಂಗಳಲ್ಲಿ ಕ್ರಿಸ್ ಮಸ್ ಗೆ ದೀರ್ಘ ರಜೆ (long Christmas leave) ಇದೆ. ಹಾಗಾಗಿ ಹೆಚ್ಚಿನ ಜನರು ಇಯರ್ ಎಂಡ್ ಗೆ ಸಖತ್ತಾಗಿರೋ ತಾಣಕ್ಕೆ ಹೋಗಲು ಪ್ಲ್ಯಾನ್ ಹಾಕಿರುತ್ತಾರೆ.. ಅದೇ ಸಮಯದಲ್ಲಿ, ಹೊಸ ವರ್ಷವು ಕ್ರಿಸ್ ಮಸ್ ನ ಮುಂದಿನ ವಾರಾಂತ್ಯದಲ್ಲಿ ಪ್ರಾರಂಭವಾಗೋದರಿಂದ, ಜನರು ದೀರ್ಘ ವಾರಾಂತ್ಯಗಳಲ್ಲಿ ರಜಾದಿನಗಳನ್ನು ಆಚರಿಸಲು ದೂರ ದೂರ ತಾಣಗಳನ್ನು ಆಯ್ಕೆ ಮಾಡುತ್ತಾರೆ. ನೀವು ಸಹ ಕ್ರಿಸ್ ಮಸ್ ನಿಂದ ಹೊಸ ವರ್ಷಕ್ಕೆ ಲಾಂಗ್ ವೀಕ್ ಟೂರ್ ಮಾಡಲು ಬಯಸಿದರೆ, ಜೊತೆಗೆ ಕ್ರಿಸ್ಮಸ್, ನ್ಯೂ ಇಯರ್ ಎಂಜಾಯ್ ಮಾಡಲು ಬಯಸಿದರೆ ನೀವು ಖಂಡಿತವಾಗಿಯೂ ಇಲ್ಲಿ ಹೇಳೀರೋ ತಾಣಗಳಿಗೆ ಭೇಟಿ ನೀಡಬಹುದು. 

ಬಸ್ತಾರ್: ನೀವು 2022 ರ ವರ್ಷವನ್ನು ಕೊನೆಗೊಳಿಸಲು ಮತ್ತು ಹೊಸ ವರ್ಷವನ್ನು (New Year) ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಬಯಸಿದರೆ, ಛತ್ತೀಸ್ಗಢದ ಬಸ್ತಾರ್ ಗೆ ಹೋಗಬಹುದು. ಇದು ಛತ್ತೀಸ್ ಗಢ ರಾಜ್ಯದ ಒಂದು ಜಿಲ್ಲೆಯಾಗಿದೆ. ಒಂದು ಕಾಲದಲ್ಲಿ ಬಸ್ತಾರ್ ಪ್ರಪಂಚದ ಅನೇಕ ದೇಶಗಳಿಗಿಂತ ವಿಸ್ತೀರ್ಣದ ದೃಷ್ಟಿಯಿಂದ ದೊಡ್ಡದಾಗಿತ್ತು. ಆದಾಗ್ಯೂ, 1998 ರಲ್ಲಿ, ಕಂಕೇರ್ ಮತ್ತು ದಾಂತೇವಾಡ ಜಿಲ್ಲೆಗಳನ್ನು ಬಸ್ತಾರ್ ನಿಂದ ರಚಿಸಲಾಯಿತು. ಇದು ರಾಜ್ಯ ರಾಜಧಾನಿ ರಾಯ್ಪುರದಿಂದ 300 ಕಿ.ಮೀ ದೂರದಲ್ಲಿದೆ. ಬಸ್ತಾರ್ ಗೆ ಭೇಟಿ ನೀಡಿದರೆ ನೀವು ತಿರತ್ ಗಢ ಜಲಪಾತ, ದಲ್ಪತ್ ಸಾಗರ್, ಬಸ್ತಾರ್ ಅರಮನೆ ಮತ್ತು ಗುಹೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು.

ಲ್ಯಾನ್ಸ್ ಡೌನ್ (Lancedowne): ಉತ್ತರಾಖಂಡವನ್ನು ದೇವತೆಗಳ ನಾಡು ಎಂದು ಕರೆಯಲಾಗುತ್ತದೆ. ಚಾರ್ ಧಾಮ್ ಹೊರತುಪಡಿಸಿ, ಈ ರಾಜ್ಯದಲ್ಲಿ ಅನೇಕ ಧಾರ್ಮಿಕ ಸ್ಥಳಗಳಿವೆ. ಇದಕ್ಕಾಗಿ, ಉತ್ತರಾಖಂಡವನ್ನು ಧರ್ಮದ ನಗರ ಎಂದೂ ಕರೆಯಲಾಗುತ್ತದೆ. ಇದಲ್ಲದೆ, ಉತ್ತರಾಖಂಡದಲ್ಲಿ ಪ್ರವಾಸೋದ್ಯಮ ಮತ್ತು ಪಿಕ್ನಿಕ್ಗಳಿಗೆ ಅನೇಕ ಅತ್ಯುತ್ತಮ ಸ್ಥಳಗಳಿವೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಈ ಪಿಕ್ನಿಕ್ ತಾಣಗಳಿಗೆ ಭೇಟಿ ನೀಡಬಹುದು. ಆ ಮೂಲಕ ನಿಮ್ಮ ಹೊಸ ವರ್ಷವನ್ನು ಎಂಜಾಯ್ ಮಾಡಬಹುದು.
 

ಐಜ್ವಾಲ್ (Aizawl): ಮಿಜೋರಾಂ ಭಾರತದ ಪೂರ್ವದಲ್ಲಿದೆ. ಮಿಜೋರಾಂ ತನ್ನ ಪರ್ವತ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ಮಟ್ಟದಿಂದ ಐಜ್ವಾಲ್ ನ ಎತ್ತರವು 1123 ಮೀಟರ್ ಆಗಿದೆ. ಐಜ್ವಾಲ್ ನಲ್ಲಿ, ನೀವು ರಜಾದಿನವನ್ನು ಎಂಜಾಯ್ ಮಾಡಬಹುದು. ಸೊಲೊಮನ್ ದೇವಾಲಯ, ರುಂಗ್ಡಿಲ್ ಸರೋವರ, ಬಾರಾ ಬಜಾರ್, ರಿಕ್ ಇತ್ಯಾದಿಗಳು ಈ ನಗರದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳಾಗಿವೆ. ಅಲ್ಲದೆ, ನೀವು ಸ್ಥಳೀಯ ಮಿಜೋ ಪಾಕಪದ್ಧತಿಯನ್ನು ಎಂಜಾಯ್ ಮಾಡಬಹುದು. 

ಮೌಂಟ್ ಅಬು (Mount Abu Rajasthan): ಮೌಂಟ್ ಅಬು ಮರುಭೂಮಿಯ ಏಕೈಕ ಗಿರಿಧಾಮವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧವಾಗಿದೆ. ನೀವು ಸಾಹಸವನ್ನು ಇಷ್ಟಪಡುತ್ತಿದ್ದರೆ, ಈ ರಜಾದಿನಗಳಲ್ಲಿ ನೀವು ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಲು ಪ್ಲ್ಯಾನ್ ಮಾಡಿ. ಉದಯಪುರದಿಂದ ಸುಮಾರು 2 ಗಂಟೆಗಳ ದೂರದಲ್ಲಿರುವ ಈ ಗಿರಿಧಾಮವು ಅನೇಕ ಹಿಂದೂ ದೇವರುಗಳು ಮತ್ತು ದೇವತೆಗಳ ಪ್ರಸಿದ್ಧ ದೇವಾಲಯಗಳನ್ನು ಹೊಂದಿದೆ. ಇದಲ್ಲದೆ, ಈ ಸ್ಥಳವನ್ನು ವನ್ಯಜೀವಿ ಛಾಯಾಗ್ರಾಹಕರಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.  
 

ವ್ಯಾಲಿ ಆಫ್ ಫ್ಲವರ್ಸ್ (Valley of Flower, Uttarakhand): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಹೂವುಗಳ ಕಣಿವೆಗೆ ನೀವು ಭೇಟಿ ನೀಡದಿದ್ದರೆ, ಹೇಗೆ ಹೇಳಿ? ಈ ಸ್ಥಳವನ್ನು ನೀವು ನೋಡಿದಾಗಲೇ ಅದರ ಅದ್ಭುತ ಏನೆಂದು ಗೊತ್ತಾಗುತ್ತೆ. ಅಲ್ಲದೇ ಇದನ್ನು ಬಣ್ಣಿಸಲು ಸಾಧ್ಯವಿಲ್ಲ.. ಇದು ನ್ಯೂ ಇಯರ್ ಎಂಜಾಯ್ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿಗೆ ಹೋಗುವುದರಿಂದ, ನೀವು ತಾಜಾತನ ಅನುಭವಿಸುತ್ತೀರಿ ಮತ್ತು ಪಾಸಿಟಿವ್ ಎನರ್ಜಿ ಬರೋದು ಗ್ಯಾರಂಟಿ. ಇಲ್ಲಿ ನೀವು ಎಲ್ಲಾ ರೀತಿಯ ಹೂವುಗಳನ್ನು ಕಾಣಬಹುದು. ವೈಲ್ಡ್ ರೋಸ್, ಡೆಲಿಯಾ, ಸ್ಯಾಕ್ಸಿಫೇಜ್, ಮಾರಿಗೋಲ್ಡ್ ನಂತಹ ಅನೇಕ ಹೂವುಗಳು ಇಲ್ಲಿ ಕಂಡುಬರುತ್ತವೆ.  

ಶಿಲ್ಲಾಂಗ್ (Shillong, Meghalaya): ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಶಿಲ್ಲಾಂಗ್ ಬಹಳ ಸುಂದರವಾಗಿದೆ. ಈ ಸ್ಥಳವು ಪ್ರಕೃತಿ ಪ್ರಿಯರಿಗೆ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಪರ್ವತದ ಜೊತೆಗೆ ಹಸಿರು ಕಾಡುಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಲ್ಲಿನ ಸೌಂದರ್ಯ ಮತ್ತು ಈ ಚಳಿಗಾಲವನ್ನು ಎಂಜಾಯ್ ಮಾಡಲು ನೀವು ಶಿಲ್ಲಾಂಗ್ ಪ್ರಯಾಣ ಬೆಳೆಸಬಹುದು.

ಡಾಲ್ ಹೌಸಿ (ಹಿಮಾಚಲ ಪ್ರದೇಶ): (Mini Switzerland): ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಡಾಲ್ ಹೌಸಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದನ್ನು ಭಾರತದ ಮಿನಿ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಚಳಿಗಾಲದಲ್ಲಿ, ಇಲ್ಲಿನ ಪರ್ವತಗಳ ಮೇಲಿನ ಹಿಮ ರಾಶಿ ಮತ್ತು ಹಸಿರನ್ನು ನೋಡಲು ಜನರು ದೂರ ದೂರದಿಂದ ಬರುತ್ತಾರೆ. ಇದು ಭಾರತದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.  

click me!