ಈ ಗ್ರಾಮದಲ್ಲಿ ಪುರುಷರಿಗೆ ಎಂಟ್ರಿಯೇ ಇಲ್ಲ…. ಕಾರಣ ಏನು ಗೊತ್ತಾ?

Published : Mar 09, 2025, 09:52 AM ISTUpdated : Mar 09, 2025, 10:10 AM IST

ಕೀನ್ಯಾದಲ್ಲಿದೆ ಒಂದು ವಿಶಿಷ್ಟ ಗ್ರಾಮ.  ಅಲ್ಲಿ ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಗ್ರಾಮವನ್ನು 1990 ರಲ್ಲಿ ತಮ್ಮ ಜೀವನದಲ್ಲಿ ಹಿಂಸೆ, ಬಾಲ್ಯ ವಿವಾಹ ಮತ್ತು ದಬ್ಬಾಳಿಕೆಯ ನೋವನ್ನು ಅನುಭವಿಸಿದ ಮಹಿಳೆಯರು ಸ್ಥಾಪಿಸಿದರು.   

PREV
17
ಈ ಗ್ರಾಮದಲ್ಲಿ ಪುರುಷರಿಗೆ ಎಂಟ್ರಿಯೇ ಇಲ್ಲ…. ಕಾರಣ ಏನು ಗೊತ್ತಾ?

ಪ್ರಪಂಚದಾದ್ಯಂತ ಜನರು ತಿಳಿದುಕೊಳ್ಳಲು ತುಂಬಾನೆ ಆಸಕ್ತಿ ಹೊಂದಿರುವ ಅನೇಕ ವಿಚಿತ್ರ ಸ್ಥಳಗಳಿವೆ. ಅವುಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಈ ವಿಶಿಷ್ಟ ಗ್ರಾಮ ಕೂಡ ಒಂದು. ನಿಜ ಹೇಳಬೇಕು ಅಂದ್ರೆ, ಇಡೀ ಹಳ್ಳಿಯಲ್ಲಿ ಒಬ್ಬನೇ ಒಬ್ಬ ಪುರುಷ ವಾಸಿಸುತ್ತಿಲ್ಲ, ಮಹಿಳೆಯರು ಮಾತ್ರ ಇಲ್ಲಿ ವಾಸಿಸುತ್ತಿದ್ದಾರೆ.

27

ಈ ಗ್ರಾಮದ ಹೆಸರೇನು? ಇದು ಎಲ್ಲಿದೆ ಅನ್ನೋದನ್ನು ನೋಡೋಣ ಬನ್ನಿ. ಈ ವಿಶಿಷ್ಟ ಸ್ಥಳವನ್ನು ಉಮೋಜಾ (Umoja village) ಎಂದು ಕರೆಯಲಾಗುತ್ತದೆ, ಇದು ಉತ್ತರ ಕೀನ್ಯಾದ ಸಂಬುರು ಪ್ರದೇಶದಲ್ಲಿದೆ, ಅಲ್ಲಿ ನೀವು ಮಹಿಳೆಯರನ್ನು ಮಾತ್ರ ನೋಡುತ್ತೀರಿ.

37

ವರದಿಯ ಪ್ರಕಾರ, ಮಹಿಳೆಯರ ಗಂಡು ಮಕ್ಕಳಿಗೆ 18 ವರ್ಷದವರೆಗೆ ಗ್ರಾಮದಲ್ಲಿ ಉಳಿಯಲು ಅವಕಾಶವಿದೆ, ಆದರೆ 18 ರ ನಂತರ ಅವರು ಗ್ರಾಮವನ್ನು ತೊರೆಯಬೇಕಾಗುತ್ತದೆ. ಒಂದು ವರದಿಯ ಪ್ರಕಾರ, 'ಉಮೋಜಾ' ಎಂಬ ಹಳ್ಳಿಯ ಹೆಸರು ಸ್ವಾಹಿಲಿ ಪದವಾಗಿದ್ದು, ಇದರರ್ಥ 'ಏಕತೆ'  (Unity) ಎನ್ನುವುದಾಗಿದೆ. 
 

47

ಈ ಗ್ರಾಮವನ್ನು 1990 ರಲ್ಲಿ 15 ಮಹಿಳೆಯರ ಗುಂಪು ಸ್ಥಾಪಿಸಿತು. ಈ ಮಹಿಳೆಯರು ಬ್ರಿಟಿಷ್ ಸೈನಿಕರಿಂದ ಅತ್ಯಾಚಾರ ಮತ್ತು ಶೋಷಣೆಗೆ ಒಳಗಾದರು, ನಂತರ ಅವರು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿಯೇ ಈ ಗ್ರಾಮವನ್ನು ಪ್ರಾರಂಭಿಸಲು ನಿರ್ಧರಿಸಿದರು.

57

ಈ ಹಳ್ಳಿಯಲ್ಲಿ, ಎಲ್ಲಾ ನಿರ್ಧಾರಗಳನ್ನು ಮಹಿಳೆಯರು ತೆಗೆದುಕೊಳ್ಳುತ್ತಾರೆ. ಅವರು ಹುಡುಗಿಯರ ಹಕ್ಕುಗಳಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಪುರುಷರ ಅನುಮತಿಯಿಲ್ಲದೆ ತೆಗೆದುಕೊಳ್ಳುತ್ತಾರೆ. ತಮಗೆ ಇಷ್ಟ ಬಂದಂತೆ ಜೀವಿಸುವ ಹಕ್ಕನ್ನು ಸಹ ಈ ಜನ ಹೊಂದಿದ್ದಾರೆ. 

67

ಮಹಿಳೆಯರು ಮನೆಯನ್ನು ಹೇಗೆ ನಡೆಸುತ್ತಾರೆ? ಎನ್ನುವ ಕುತೂಹಲ ನಿಮಗಿರಬಹುದು ಅಲ್ವಾ? ಈ ಹಳ್ಳಿಯಲ್ಲಿ, ಮಹಿಳೆಯರು ಕೃಷಿ, ವ್ಯಾಪಾರ ಮತ್ತು ಹೊಲಿಗೆಯ ಕೆಲಸ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ.

77

ಈ ಹಳ್ಳಿಯಲ್ಲಿ, ಪುರುಷರಿಗೆ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶವಿದೆ, ಆದರೆ ಅವರು ದಿನದ ಅಂತ್ಯದ ವೇಳೆಗೆ ಗ್ರಾಮವನ್ನು ತೊರೆಯಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories