ಕಡಿಮೆ ದರದಲ್ಲಿ Flight Ticket ಬುಕ್ ಮಾಡ್ಬೇಕಾ? ಹಾಗಿದ್ರೆ ಈ ಹ್ಯಾಕ್ ಟ್ರೈ ಮಾಡಿ

Published : Jun 08, 2022, 02:33 PM IST

ನಾವು ದೂರದ ಊರಿಗೆ ಪ್ರವಾಸವನ್ನು ಯೋಜಿಸಿದಾಗಲೆಲ್ಲಾ, ಟಿಕೆಟ್ ಬೆಲೆ ಮೊದಲು ನಮ್ಮನ್ನು ಕಾಡುತ್ತದೆ. ನೀವು ಮತ್ತೆ ಮತ್ತೆ ಬೇರೆ ಬೇರೆ ಫ್ಲೈಟ್ (Flight0 ಸರ್ಚ್ ಮಾಡುವಾಗ ಫ್ಲೈಟ್ ಬೆಲೆಯೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾದರೆ ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್ ಬುಕ್ (flight ticket book) ಮಾಡೋದು ಹೇಗೆ ಅನ್ನೋದನ್ನು ನೋಡೋಣ… 

PREV
18
ಕಡಿಮೆ ದರದಲ್ಲಿ Flight Ticket ಬುಕ್ ಮಾಡ್ಬೇಕಾ? ಹಾಗಿದ್ರೆ ಈ ಹ್ಯಾಕ್ ಟ್ರೈ ಮಾಡಿ

ನೀವು ದೂರದ ತಾಣಗಳಿಗೆ ಟ್ರಾವೆಲ್ (Travel) ಮಾಡಲು ಯೋಜಿಸುತ್ತಿದ್ದೀರಾ? ಆದರೆ ಹೆಚ್ಚಿನ ವಿಮಾನ ಟಿಕೆಟ್ ಬಗ್ಗೆ ಚಿಂತಿತರಾಗಿದ್ದೀರಾ? ಫ್ಲೈಟ್ ಟಿಕೆಟ್‌ಗಳನ್ನು ಹುಡುಕುವುದು ಮತ್ತು ಅಗ್ಗದ ವಿಮಾನಗಳನ್ನು ಕಂಡುಹಿಡಿಯುವುದು ಒಂದು ಕಷ್ಟದ ಕೆಲಸ. ಆದಾಗ್ಯೂ, ನೀವು ಕೆಲವು ಹ್ಯಾಕ್ ಗಳನ್ನು ಬಳಸಿದರೆ, ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಬಹುದು. ನಿಮಗಿದು ಹೇಗೆ ಅನ್ನೋದು ತಿಳಿಯಬೇಕೆ? ಹಾಗಿದ್ರೆ ಬನ್ನಿ ಚೀಪ್ ಫ್ಲೈಟ್ ಟಿಕೆಟ್ (cheap flight ticket) ಬುಕ್ ಮಾಡೋ ಟ್ರಿಕ್ಸ್ ತಿಳಿಯೋಣ…
 

28
Incognito ಮೋಡ್ ಬಳಸಿ

ನೀವು ಹಲವಾರು ಬಾರಿ ಫ್ಲೈಟ್ ಟಿಕೆಟ್ ಸರ್ಚ್ ಮಾಡಿದ್ರೆ, ಅವು ಬದಲಾಗುತ್ತವೆ ಎಂಬುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣ ನಿಮ್ಮ ಬ್ರೌಸರ್ ಕುಕೀಗಳು. ಏಕೆಂದರೆ ಅದೇ ವಿಷಯವನ್ನು ಮತ್ತೆ ಮತ್ತೆ ಹುಡುಕಿದಾಗ, ಅದರ ಬೆಲೆ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಕನ್ ಫ್ಯೂಸ್ ಆಗಿ ಇನ್ನು ಬೆಲೆ ಹೆಚ್ಚಬಾರದು ಎಂದು ಕೂಡ್ಲೇ ಟಿಕೆಟ್ ಬುಕ್ ಮಾಡ್ತೀರಿ. ಇದರಿಂದ ನಿಮ್ಮ ಹಣ ನಷ್ಟ ಆಗುತ್ತೆ ಅಷ್ಟೇ…. ಇದನ್ನು ತಪ್ಪಿಸಲು, ಯಾವಾಗಲೂ Incognito ಮೋಡ್ ನಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿ.
 

38
ಬ್ರೌಸರ್ ಕುಕೀಗಳನ್ನು ರಿಮೂವ್ ಮಾಡಿ

ನಿಮ್ಮ ಬ್ರೌಸರ್ ನ ಕುಕೀಗಳಿಗೆ (browser cookies) ಹೇಗಿರುತ್ತವೆಯೋ ಹಾಗೇ ಫ್ಲೈಟ್ ಟಿಕೆಟ್ ನ ಬೆಲೆ ಹೆಚ್ಚುತ್ತಲೇ ಇರುತ್ತದೆ. ಕುಕೀಗಳು ನಿಮ್ಮ ಸರ್ಚ್ ಹಿಸ್ಟರಿ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಸಂಗ್ರಹಿಸುತ್ತವೆ, ಇದನ್ನು ಟ್ರಾವೆಲ್ ಸರ್ಚ್ ಇಂಜಿನ್ ಅಥವಾ ಏರ್‌ಲೈನ್ ವೆಬ್‌ಸೈಟ್‌ಗಳು ಬಳಸುತ್ತವೆ, ಮತ್ತು ಅದಕ್ಕೆ ಅನುಗುಣವಾಗಿ ನೀವು ಫ್ಲೈಟ್ ಟಿಕೆಟ್ ಬೆಲೆ ನೋಡುತ್ತೀರಿ. ಸೋ, ನೀವು ಮುಂದಿನ ಬಾರಿ ಟಿಕ್ ಬುಕ್ ಮಾಡುವಾಗ ಮೊದಲಿಗೆ ಎಲ್ಲಾ ಕುಕೀಗಳನ್ನು ರಿಮೂವ್ ಮಾಡಿ.
 

48
ನಾನ್ ರಿಫಂಡೇಬಲ್ ಟಿಕೆಟ್ ಮಾತ್ರ ಬುಕ್ ಮಾಡಿ

ಸಾಮಾನ್ಯವಾಗಿ, ನಾನ್ ರಿಫಂಡೇಬಲ್ ಟಿಕೆಟ್ ಗಳು (non refundable ticket)ರಿಫಂಡೇಬಲ್ ಟಿಕೆಟ್ ಗಳಿಗಿಂತ ಅಗ್ಗವಾಗಿರುತ್ತವೆ. ನೀವು ಟ್ರಾವೆಲ್ ಡೇಟ್ ಫಿಕ್ಸ್ ಮಾಡಿದ್ರೆ, ನಾನ್ ರಿಫಂಡೇಬಲ್ ಟಿಕೆಟ್ ಬುಕ್ ಮಾಡಿ ಮತ್ತು ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಅಷ್ಟೇ ಅಲ್ಲ ನೀವು ಅದೇ ಸಮಯದಲ್ಲಿ, ರಿಟರ್ನ್ ಟಿಕೆಟ್ ಬುಕ್ ಮಾಡಿದ್ರೆ ಮತ್ತಷ್ಟು ಹಣ ಉಳಿಸಬಹುದು.

58
ಟ್ರಾವೆಲ್ ಮಾಡಲು ಕಡಿಮೆ ದರ ಇರೋ ದಿನ ಆಯ್ಕೆ ಮಾಡಿ

 ಸಂಶೋಧನೆ ಮತ್ತು ಬಳಕೆದಾರರ ಅಭಿಪ್ರಾಯದ ಪ್ರಕಾರ, ಸೋಮವಾರದಿಂದ ಗುರುವಾರ ಬೆಳಿಗ್ಗೆ ವರೆಗೆ ವಿಮಾನಗಳ ಬೆಲೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಇದನ್ನು ಆಫ್-ಪೀಕ್ ಟೈಮ್ (off peak time) ಎಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಈ ದಿನಗಳು ನಿಮಗೆ ಸೂಕ್ತವಾಗಿದ್ದರೆ, ಆಗ ಮಾತ್ರ ವಿಮಾನವನ್ನು ಏಕೆ ಬುಕ್ ಮಾಡಬಾರದು.

68
ಕನೆಕ್ಟಿಂಗ್ ಫೈಟ್ ಬುಕ್ ಮಾಡಿ

ನೀವು ದೂರದಲ್ಲಿರುವ ಸ್ಥಳಕ್ಕೆ ಹೋಗಬೇಕಾದರೆ ಮತ್ತು ನಿಮಗೆ ಯಾವುದೇ ಅರ್ಜೆಂಟ್ ಇಲ್ಲದೇ ಇದ್ರೆ ಆವಾಗ ಕನೆಕ್ಟಿಂಗ್ ಫ್ಲೈಟ್ (connecting flight) ಬುಕ್ ಮಾಡಿದ್ರೆ, ಅದು ನಿಮಗೆ ಡೈರೆಕ್ಟ್ ಫ್ಲೈಟ್ ಗಿಂತಲೂ ತುಂಬಾನೆ ಅಗ್ಗವಾಗಿರುತ್ತೆ, ನೀವೆ ಚೆಕ್ ಮಾಡಿ. 

78
ಸೋಷಿಯಲ್ ಮೀಡಿಯಾದಲ್ಲಿ ಏರ್ ಲೈನ್ಸ್ ಫಾಲೋ ಮಾಡಿ

 ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಅನೇಕ ಜನರ ಜೀವನವನ್ನು ಬದಲಾಯಿಸಿವೆ. ಹಾಗಾದ್ರೆ ನೀವು ಅದರ ಪ್ರಯೋಜನ ಏಕೆ ಪಡೆಯಬಾರದು? ಸೋಷಿಯಲ್ ಮೀಡಿಯಾದಲ್ಲಿ ವಿಮಾನಯಾನ ಸಂಸ್ಥೆಗಳನ್ನು ಅನುಸರಿಸಿ ಮತ್ತು ಅವರ ಪ್ರಮೋಶನಲ್ ಡೀಲ್ಸ್ (promotional deals) ಮೇಲೆ ಕಣ್ಣಿಡಿ. ಅನೇಕ ಬಾರಿ ವಿಮಾನಯಾನ ಸಂಸ್ಥೆಗಳು ಕೊನೆಯ ನಿಮಿಷದ ಟಿಕೆಟ್ ಸಹ ನೀಡುತ್ತವೆ. ನೀವು ಅದೃಷ್ಟವಂತರಾಗಿದ್ದರೆ, ಟಿಕೆಟ್ ಬುಕ್ ಮಾಡುವಾಗ ನೀವು ಸಾಕಷ್ಟು ಹಣ ಉಳಿಸಲು ಸಾಧ್ಯವಾಗುತ್ತದೆ.
 

88
ಫ್ರಿಕ್ವೆಂಟ್ ಫ್ಲೈಯರ್ ಪ್ರೋಗ್ರಾಂ

ದೊಡ್ಡ ರಿಯಾಯಿತಿ ಪಡೆಯಲು ನೀವು ಫ್ರೀಕ್ವೆಂಟ್ ಫ್ಲೈಯರ್ (frequent flier) ಕಾರ್ಯಕ್ರಮದ ಭಾಗವಾಗಬಹುದು. ಲಾಯಲ್ಟಿ ಪ್ರೋಗ್ರಾಂ ಹೇಗೆ ಕೆಲಸ ಮಾಡುತ್ತದೆಯೆಂದರೆ, ಪ್ರತಿ ಬಾರಿ ಪ್ರಯಾಣಿ ನಿರ್ದಿಷ್ಟ ವಿಮಾನ ಆಯ್ಕೆ ಮಾಡಿದಾಗ, ಪಾಯಿಂಟ್ ನಿಮ್ಮ ಖಾತೆಗೆ ಸೇರುತ್ತೆ. ನಂತರ, ಆ ಪಾಯಿಂಟ್ಸ್ ಸಲ್ಲಿಸುವ ಮೂಲಕ, ನಿಮಗೆ ಮುಂದಿನ ವಿಮಾನ ಟಿಕೆಟ್ ಬುಕ್ ಮಾಡುವಾಗ ಅಗ್ಗದ ಬೆಲೆಯಲ್ಲಿ ಬುಕ್ ಮಾಡಲು ಸಾಧ್ಯವಾಗುತ್ತೆ. ಇದಲ್ಲದೆ, ನೀವು ಅಂತಹ ಕ್ರೆಡಿಟ್ ಕಾರ್ಡ್‌ಗಳನ್ನೂ ಸಹ ಬಳಸಬಹುದು, ಇದು ವಿಮಾನಯಾನ ಸಂಸ್ಥೆಯೊಂದಿಗೆ ಒಪ್ಪಂದವನ್ನು ಹೊಂದಿದೆ.

Read more Photos on
click me!

Recommended Stories