ಜಾರ್ಜಿಯಾ (Georgia) :
10600 ಜನರು ನಿರ್ಗತಿಕರಾಗಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರೋದೆ ನಿರ್ಗತಿಕರಾಗೋದಕ್ಕೆ ಕಾರಣ ಅಂತ ವರದಿ ಹೇಳಿದೆ. ಗಂಟೆಗೆ 14.24 ಡಾಲರ್ ಪಡೆದರೆ ಮಾತ್ರ ಜಾರ್ಜಿಯಾ ಸಿಟಿ ಹೊರಗಡೆ ಎರಡು ಬೆಡ್ ರೂಮ್ ಅಪಾರ್ಟ್ ಮೆಂಟ್ ಖರೀದಿಸಬಹುದು. ಆದರೆ ಜಾರ್ಜಿಯಾದಲ್ಲಿ ಸಿಗುವ ಕನಿಷ್ಠ ವೇತನ ಗಂಟೆಗೆ 7 ಡಾಲರ್.
ಪೆನ್ಸಿಲ್ವೇನಿಯಾ (Pennsylvania) :
ಈ ರಾಜ್ಯದ ಪ್ರಮುಖ ನಗರಗಳಲ್ಲಿ ಸರಿಸುಮಾರು 12,691 ಜನ ನಿರ್ಗತಿಕರಿದ್ದಾರೆ. ಇಲ್ಲಿ ಜನರಿಗೆ ಮನೆ, ಖರ್ಚುಗಳನ್ನು ಬ್ಯಾಲೆನ್ಸ್ ಮಾಡೋದೇ ದೊಡ್ಡ ಸಮಸ್ಯೆ. ಹಾಗಾಗಿ ಇಲ್ಲಿನ ನಿರ್ಗತಿಕರ ಸಂಖ್ಯೆಯೂ ಹೆಚ್ಚು.
ಅರಿಜೋನಾ (Arizona):
ಈ ರಾಜ್ಯದಲ್ಲಿ ಸುಮಾರು 14000 ಜನ ನಿರ್ಗತಿಕರಿದ್ದಾರೆ. ಕೋವಿಡ್ 19ರ ಬಳಿಕ ಹಲವು ಜನ ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಮ್ಯಾಸಚೂಸೆಟ್ಸ್ (Massachusetts):
15,507 ಜನರು ನಿರ್ಗತಿಕರಿದ್ದಾರೆ, ಅದರಲ್ಲೂ 1000 ಮಂದಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳುತ್ತಿದೆ. ಕೈಗೆಟುವ ದರದಲ್ಲಿ ಮನೆಗಳನ್ನು ಪಡೆಯಲು ಸಾಧ್ಯವಾಗದೇ ಇರೋದೆ ಇದಕ್ಕೆ ಕಾರಣ.
ಒರೆಗಾನ್ (Oregon):
ಅಮೇರಿಕದ ಒರೆಗಾನ್ ರಾಜ್ಯದಲ್ಲಿ 17,959 ನಿರ್ಗತಿಕರಿದ್ದಾರೆ. ಇವರಿಗೆ ಸರಿಯಾಗಿ ವಾಸಿಸಲು ಸ್ಥಳವೇ ಇಲ್ಲ. ಹಾಗಾಗಿ ಇದರಲ್ಲಿ ಹೆಚ್ಚಿನ ಜನರು ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಕೆಲವರು ಡ್ರಗ್ ಅಡಿಕ್ಟ್ ಕೂಡ ಆಗಿದ್ದಾರೆ.
ಟೆಕ್ಸಾಸ್ (Texas) :
ಯುನೈಟೆಡ್ ಸ್ಟೇಟ್‌ನಲ್ಲಿ ಅತಿ ಹೆಚ್ಚು ನಿರ್ಗತಿಕರಿರುವ 5ನೇ ಅತಿದೊಡ್ಡ ನಗರ ಅಥವಾ ರಾಜ್ಯ ಎಂದರೆ ಟೆಕ್ಸಾಸ್. ಇಲ್ಲಿ ಸುಮಾರು 24,432 ನಿರ್ಗತಿಕರಿದ್ದಾರೆ. ದುಬಾರಿ ಮನೆಗಳು ಮತ್ತು ಕಡಿಮೆ ವೇತನ ಈ ಪರಿಸ್ಥಿತಿಗೆ ಕಾರಣ.
ವಾಷಿಂಗ್ಟನ್ (Washington) :
2016ರಿಂದ ವಾಷಿಂಗ್ಟನ್‌ನಲ್ಲೂ ಸಹ ನಿರ್ಗತಿಕರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಅಲ್ಲಿ 25,211 ನಿರ್ಗತಿಕರಿದ್ದಾರೆ. ಇದರಲ್ಲಿ ಸ್ಟೂಡೆಂಟ್ಸ್ ಸೇರಿದ್ದಾರೆ. ಆದಾಯ ಕಡಿಮೆ ಇರೋದೆ ಇದಕ್ಕೆ ಮುಖ್ಯ ಕಾರಣ.
ಫ್ಲೋರಿಡಾ (Florida):
ಫ್ಲೋರಿಡಾದಲ್ಲಿ ಸುಮಾರು 28ಸಾವಿರಕ್ಕೂ ಹೆಚ್ಚು ಜನ ಮನೆಮಠ ಇಲ್ಲದವರಿದ್ದಾರೆ. ಅವರಲ್ಲಿ ಹೆಚ್ಚಿನವರು ನಗರದಲ್ಲೇ ವಾಸಿಸುತ್ತಾರೆ. ಪ್ರಾಕೃತಿಕ ವಿಕೋಪಗಳು, ಕೈಗೆಟುಕದ ದರಗಳ ವಸತಿಗಳೇ ಇದಕ್ಕೆ ಕಾರಣ.
ನ್ಯೂಯಾರ್ಕ್ (New York) :
ನ್ಯೂಯಾರ್ಕ್ ಎಂದರೆ ನೆನಪಾಗೋದು ಅಲ್ಲಿನ ಲಕ್ಸುರಿ ಜೀವನ, ಹೈಫೈ ಜನರು ಇತ್ಯಾದಿ ಅಲ್ವಾ? ಆದರೆ ನಿಜ ಏನಂದ್ರೆ ಅಮೇರಿಕದ ಅತಿ ಹೆಚ್ಚು ನಿರ್ಗತಿಕರನ್ನು ಹೊಂದಿರೋ ರಾಜ್ಯಗಳಲ್ಲಿ ನ್ಯೂಯಾರ್ಕ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 74,178 ಜನ ನಿರ್ಗತಿಕರಿದ್ದಾರೆ. ಇಲ್ಲಿನ ದುಬಾರಿ ಜೀವನಶೈಲಿಯೇ ಇದಕ್ಕೆ ಕಾರಣ. ಹಾಗಾಗಿ ಈ ನಿರ್ಗತಿಕರು ಕಳ್ಳತನ, ದರೋಡೆ, ಕೊಲೆ ಮೊದಲಾದ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ.
ಕ್ಯಾಲಿಫೋರ್ನಿಯಾ (California) :
ಇಲ್ಲಿ ಸರಿ ಸುಮಾರು 171,521 ನಿರ್ಗತಿಕರಿದ್ದಾರೆ. ಇದು ಅಮೆರಿಕದ ಅತಿ ಹೆಚ್ಚು ನಿರ್ಗತಿಕರನ್ನು ಹೊಂದಿರುವ ರಾಜ್ಯ. ಕಳೆದ 10 ವರ್ಷಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ 30% ದಷ್ಟು ನಿರ್ಗತಿಕರ ಸಂಖ್ಯೆ ಹೆಚ್ಚಾಗಿದೆ.