ವಿಶ್ವದಲ್ಲಿ ಒಟ್ಟು ಏಳು ಖಂಡಗಳಿವೆ. ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ. ವಿಶ್ವದ ಚಿಕ್ಕ ದೇಶ ಯುರೋಪ್‌ನ ವ್ಯಾಟಿಕನ್ ಸಿಟಿ.
27
ಆದ್ರೆ ಏಷ್ಯಾದ ಚಿಕ್ಕ ದೇಶ ಯಾವುದು ಗೊತ್ತಾ? ಯುಪಿಎಸ್‌ಸಿ, ಎಸ್‌ಎಸ್‌ಸಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಥ ಪ್ರಶ್ನೆಗಳನ್ನು ಕೇಳ್ತಾರೆ. ಏಷ್ಯಾದ ಆ ಚಿಕ್ಕ ದೇಶದ ಬಗ್ಗೆ ಈಗ ತಿಳಿದುಕೊಳ್ಳೋಣ.
37
ಮಾಲ್ಡೀವ್ಸ್
ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಏಷ್ಯಾ ವಿಶ್ವದಲ್ಲೇ ದೊಡ್ಡ ಖಂಡ. ಇದು ಪೂರ್ವದಲ್ಲಿ ಪೆಸಿಫಿಕ್ ಸಾಗರ, ಉತ್ತರದಲ್ಲಿ ಆರ್ಕ್ಟಿಕ್ ಸಾಗರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಮತ್ತು ಪಶ್ಚಿಮದಲ್ಲಿ ಯುರೋಪ್‌ನಿಂದ ಸುತ್ತುವರಿದಿದೆ.
47
ಮಾಲ್ಡೀವ್ಸ್ ಪ್ರವಾಸೋದ್ಯಮ
ವಿಶ್ವದ ಅತಿ ದೊಡ್ಡ ಖಂಡವಾದ ಏಷ್ಯಾದಲ್ಲಿ 48 ದೇಶಗಳಿವೆ. ವಿಶ್ವದ ಜನಸಂಖ್ಯೆಯ 80% ಜನರು ಏಷ್ಯಾದಲ್ಲಿದ್ದಾರೆ. ಏಷ್ಯಾದ ಚಿಕ್ಕ ದೇಶ ಮಾಲ್ಡೀವ್ಸ್. ಇದರ ವಿಸ್ತೀರ್ಣ ಕೇವಲ 298 ಚದರ ಕಿ.ಮೀ.
57
ಮಾಲ್ಡೀವ್ಸ್ ಆರ್ಥಿಕತೆ
ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿದೆ. ಇದು ಹಲವು ಸಣ್ಣ ದ್ವೀಪಗಳ ದೇಶ. ಈ ದೇಶದ ರಾಜಧಾನಿ ಮಾಲೆ. ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ದೇಶ. ಪ್ರವಾಸೋದ್ಯಮದಿಂದ ಬರುವ ಆದಾಯ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸ್ತಿದೆ. ಮೀನುಗಾರಿಕೆ ಮತ್ತು ಸಮುದ್ರ ಸಂಬಂಧಿತ ಉದ್ಯಮಗಳು ಸಹ ಮುಖ್ಯ.
67
ಮಾಲ್ಡೀವ್ಸ್ ಜನಸಂಖ್ಯಾಶಾಸ್ತ್ರ
2016ರ ಜನಗಣತಿಯ ಪ್ರಕಾರ, ಮಾಲ್ಡೀವ್ಸ್‌ನ ಜನಸಂಖ್ಯೆ ಸುಮಾರು 4.28 ಲಕ್ಷ. ಇಸ್ಲಾಂ ಧರ್ಮದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
77
ಮಾಲ್ಡೀವ್ಸ್ ಆಹಾರ
ಮಾಲ್ಡೀವ್ಸ್‌ನ "ಬೋದುಬೆರು" ಸಂಗೀತ ಶೈಲಿ ಬಹಳ ಪ್ರಸಿದ್ಧ. 11ನೇ ಶತಮಾನದಲ್ಲಿ ಈ ಸಂಗೀತ ಆರಂಭವಾಯಿತು ಎಂದು ನಂಬಲಾಗಿದೆ. ಪೂರ್ವ ಆಫ್ರಿಕಾದ ಸಂಗೀತದ ಪ್ರಭಾವ ಇದೆ. ಗುಂಪಾಗಿ ನೃತ್ಯ ಮಾಡುತ್ತಾ ಸಂಗೀತ ನುಡಿಸುತ್ತಾರೆ. ಮಾಲ್ಡೀವ್ಸ್ ದ್ವೀಪ ರಾಷ್ಟ್ರವಾಗಿರುವುದರಿಂದ ವಿವಿಧ ರೀತಿಯ ಸಮುದ್ರ ಆಹಾರಗಳಿಗೆ ಹೆಸರುವಾಸಿ.