ಇತ್ತೀಚಿಗೆ ಪ್ರತಿಯೊಬ್ಬರೂ ತಮ್ಮ ಕೈಯಲ್ಲಿ ಸ್ಮಾರ್ಟ್‌ಪೋನ್ ಹೊಂದಿದ್ದಾರೆ. ಸ್ಮಾರ್ಟ್ ಫೋನ್ ಇಲ್ಲದೇ ಇರುವ ಜನರೇ ಇಲ್ಲ. ಹೀಗಿರುವಾಗ ಕೈಯಲ್ಲಿ ಮೊಬೈಲ್ ಇದ್ರೆ ಕೇಳಬೇಕೆ? ಅವಕಾಶ ಸಿಕ್ಕಾಗಲೆಲ್ಲಾ, ಜನರು ತಮ್ಮ ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ತುಂಬಾ ಹೆಚ್ಚಾಗಿದೆ. ಈ ಕ್ರೇಜ್ ಎಷ್ಟಿದೆ ಎಂದರೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ, ಅನೇಕ ಜನರು ಅಪಾಯಗಳನ್ನು ಮೈಮೇಲೆ ಎಳೆದುಕೊಂಡ ಘಟನೆಗಳು, ಸಾವನ್ನಪ್ಪಿದ ಘಟನೆಗಳು ಇವೆ. ಇಂತಹ ಅಪಘಾತಗಳನ್ನು ತಡೆಗಟ್ಟಲು, ವಿಶ್ವದ ಕೆಲವು ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳೋದನ್ನು ನಿಷೇಧಿಸಲಾಗಿದೆ. ಹೌದು, ನೀವು ಸೆಲ್ಫಿಗಳನ್ನು ಇಷ್ಟಪಡುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡುವ ಮೊದಲು ಸ್ವಲ್ಪ ಜಾಗರೂಕರಾಗಿರಿ. ಇಲ್ಲಿ ಸೆಲ್ಫಿ ತೆಗೆದುಕೊಂಡರೆ, ನೀವು ತುಂಬಾ ದೊಡ್ಡ ದಂಡವನ್ನು ಪಾವತಿಸಬೇಕಾಗಬಹುದು. ಸೆಲ್ಫಿ ತೆಗೆಸಿಕೊಳ್ಳುವುದನ್ನು ಎಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಯೋಣವೇ?
ನೀವು ಸೆಲ್ಫಿ ಅಡಿಕ್ಟ್ ಆಗಿದ್ದರೆ, ನೀವು ಈ ತಾಣಗಳಿಗೆ ಪ್ರಯಾಣ ಬೆಳೆಸಲು ಯೋಚನೆ ಮಾಡಿದ್ದರೆ, ನಿಮ್ಮ ಕ್ರೇಜ್ ಗೆ ಸ್ವಲ್ಪ ಕಡಿವಾಣ ಹಾಕಿ. ಯಾಕೆಂದರೆ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಅನೇಕ ಸ್ಥಳಗಳಿವೆ. ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
29
ಡಿಸ್ನಿ
ನೀವು ಡಿಸ್ನಿ ಪಾರ್ಕ್‌ಗಳಿಗೆ (Disney Park) ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ಈ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಬಯಸಿದ್ರೆ ಕೇಳಿ, ನೀವು ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗದಂತಹ ಅನೇಕ ಉದ್ಯಾನವನಗಳು ಡಿಸ್ನಿಯಲ್ಲಿವೆ. ಹೌದು, ಜುಲೈ 1, 2015 ರಂದು, ಡಿಸ್ನಿಯ ಬಹುತೇಕ ಎಲ್ಲಾ ಉದ್ಯಾನವನಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದವು.
39
ಜೋಹಾನ್ಸ್ ಬರ್ಗ್
ನೀವು ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿರುವ ಲಯನ್ ಪಾರ್ಕ್ ಗೆ (Lion Park) ಭೇಟಿ ನೀಡಲು ಹೊರಟಿದ್ದರೆ, ಪ್ರವಾಸಿಗರು ಇಲ್ಲಿ ಸಿಂಹ ಮತ್ತು ಕರಡಿ ಮರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿಂಹಗಳು ಮತ್ತು ಕರಡಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಇಲ್ಲಿನ ಜನರು ಅನೇಕ ಬಾರಿ ಅಪಘಾತಗಳಿಗೆ ಬಲಿಯಾಗಿದ್ದಾರೆ, ಹಾಗಾಗಿ, ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
49
ಫುಕೆಟ್
ಫುಕೆಟ್ ಮೈ ಖಾವೋ ಬೀಚ್ ನಲ್ಲಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವಂತಿಲ್ಲ. ಅಷ್ಟೇ ಅಲ್ಲ, ನೀವು ಇಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದರೆ, ನಿಮಗೆ ಕಠಿಣ ಶಿಕ್ಷೆಯಾಗಬಹುದು. ಆದುದರಿಂದ ಈ ತಪ್ಪು ಮಾಡೋ ಮುನ್ನ ಯೋಚ್ನೆ ಮಾಡೋದು ಉತ್ತಮ.
59
ಮುಂಬೈ
ಮುಂಬೈನ ಅನೇಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷವಾಗಿ ಮರೀನ್ ಡ್ರೈವ್ (Marine Drive) ನಂತಹ ಕೆಲವು ಸ್ಥಳಗಳಲ್ಲಿ, ಸೆಲ್ಫಿ ತೆಗೆದುಕೊಳ್ಳುವುದನ್ನು ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಏಕೆಂದರೆ ಇಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಅನೇಕ ಜನರು ಅಪಘಾತಗಳಿಗೆ ಬಲಿಯಾಗಿದ್ದಾರೆ.
69
ದಕ್ಷಿಣ ಕೊರಿಯಾ
ಸೆಲ್ಫಿ ಸ್ಟಿಕ್‌ಗಳ ಬಳಕೆ ನಿರ್ಬಂಧಿಸಲು ಕೊರಿಯಾ ಗಣರಾಜ್ಯವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿ, ರೇಡಿಯೋ ತರಂಗಗಳನ್ನು (Radio Wave) ಬಳಸುವ ಗ್ಯಾಜೆಟ್ ವೆಲ್ಟರ್‌ಗೆ ಈ ಕಡ್ಡಿಗಳು ಅಡ್ಡಿಪಡಿಸಬಹುದು ಎಂಬ ಭಯ ಹೆಚ್ಚುತ್ತಿದೆ. ಆದುದರಿಂದ ಸೆಲ್ಫಿ ಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅಲ್ಲದೇ ಒಂದು ವೇಳೆ ನೀವು ಪ್ರಮಾಣೀಕರಿಸದ ಸೆಲ್ಫೀ ಸ್ಟಿಕ್ ಬಳಸಿದ್ರೆ ದಂಡ ವಿಧಿಸಬೇಕಾಗುತ್ತೆ.
79
ಯುನೈಟೆಡ್ ಕಿಂಗ್ಡಮ್
ಯುನೈಟೆಡ್ ಕಿಂಗ್ ಡಮ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಬಗ್ಗೆ ಕಠಿಣ ಕ್ರಮ ವಿಧಿಸಲಾಗಿದೆ. ಮತ ಚಲಾಯಿಸುವಾಗ ಅಥವಾ ಮತಪೆಟ್ಟಿಗೆಯ ಪಕ್ಕದಲ್ಲಿ ಸೆಲ್ಫಿ ಕ್ಲಿಕ್ಕಿಸದಂತೆ ಮತದಾರರಿಗೆ ಸಲಹೆ ನೀಡಲಾಗುತ್ತೆ. ಆಜ್ಞೆಯು ಅಧಿಕಾರಿಗಳಿಗೆ ವಿಶೇಷವಾಗಿ ಚುನಾವಣಾಧಿಕಾರಿಗಳಿಗೆ ಸಹ ಅನ್ವಯಿಸುತ್ತದೆ. ಯುನೈಟೆಡ್ ಕಿಂಗ್ ಡಮ್ ಚುನಾವಣಾ ಆಯೋಗದಿಂದ ಬರುವುದರಿಂದ ಈ ಕ್ರಮಗಳು ಕಠಿಣ ಮತ್ತು ಕಡ್ಡಾಯವಾಗಿವೆ.
89
ಸ್ಪೇನ್
ರನ್ನಿಂಗ್ ಆಫ್ ದಿ ಬುಲ್ಸ್ (running of the bull) ಸಮಯದಲ್ಲಿ, ಸ್ಪೇನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ನೀವು ಊಹಿಸಬಹುದಾದುದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ದಂಡವು € 3000 ಯುರೋಗಳವರೆಗೆ ಇರುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಅಧಿಕಾರಿಗಳು ಜನರ ಜೀವಗಳನ್ನು ಉಳಿಸಲು ಬಯಸುವುದರಿಂದ ಈ ಕಠಿಣ ಕ್ರಮ ವಿಧಿಸಲಾಗಿದೆ. ತಮ್ಮ ಮೂರ್ಖತನದಿಂದಾಗಿ ಪಂದ್ಯದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಅನೇಕ ಪ್ರೇಕ್ಷಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ, ಈ ಹಿನ್ನೆಲೆಯಲ್ಲಿ ಸೆಲ್ಫಿ ನಿಷೇಧಿಸಲಾಗಿದೆ.
99
ಗ್ಯಾರುಪ್ ಬೀಚ್, ದಕ್ಷಿಣ ಫ್ರಾನ್ಸ್
ದಕ್ಷಿಣ ಫ್ರಾನ್ಸ್ ನ ಸುಂದರ ಕಡಲತೀರ ಗ್ಯಾರುಪ್ ಬೀಚ್. ಈ ಬೀಚ್ ತುಂಬಾ ಫೇಮಸ್ ಆಗಿದೆ. ಆದರೆ ವ್ಯವಸ್ಥಾಪಕರು ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದ್ದಾರೆ. ಇಲ್ಲಿನ ಜನರು ಸಮುದ್ರದ ಅಲೆಗಳು ಮತ್ತು ನೀರಿನ ಚಟುವಟಿಕೆಗಳನ್ನು ಆನಂದಿಸುವ ಬದಲು ಸೆಲ್ಫಿ ತೆಗೆದುಕೊಳ್ಳಲು ಹೆಚ್ಚು ಗಮನ ಹರಿಸುತ್ತಾರೆ. ಇದರಿಂದಾಗಿ ಹಲವು ಜನ ಸಾವನ್ನಪ್ಪಿದ್ದಾರೆ. ಅದಕ್ಕಾಗಿಯೇ ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.