ಜಂಕ್ಷನ್, ಸೆಂಟ್ರಲ್, ಟರ್ಮಿನಲ್, ರೋಡ್ ಹೀಗೆ ವಿವಿಧ ಹೆಸರುಗಳನ್ನು ನಾವೆಲ್ಲರೂ ಓದಿರುತ್ತೇವೆ, ನೋಡಿರುತ್ತೇವೆ. ರೈಲ್ವೆ ನಿಲ್ದಾಣಗಳಿಗೆ ಜಂಕ್ಷನ್, ಸೆಂಟ್ರಲ್, ಟರ್ಮಿನಲ್, ಕಂಟೋನ್ಮೆಂಟ್ ಹೆಸರುಗಳಿರುವುದಕ್ಕೆ ತನ್ನದೇ ಆದ ಕಾರಣಗಳಿವೆ. ಸ್ಥಳೀಯ ಪ್ರಾಮುಖ್ಯತೆ, ರೈಲು ಮಾರ್ಗಗಳ ಆಧಾರದ ಮೇಲೆ ಹೆಸರಿಡಲಾಗುತ್ತದೆ. ಜಂಕ್ಷನ್ ಎಂದರೆ ಎರಡು ಅಥವಾ ಹೆಚ್ಚು ರೈಲು ಮಾರ್ಗಗಳು ಸೇರುವ/ಬೇರ್ಪಡುವ ನಿಲ್ದಾಣ.
ಉದಾ: ಬಳ್ಳಾರಿ ಜಂಕ್ಷನ್