ಈ ತಾಣ ನೋಡಿದ್ರೆ ನೀವು ಮತ್ತೊಂದು ಲೋಕಕ್ಕೆ ಹೊಕ್ಕಂತೆ ಅನಿಸೋದ್ರಲ್ಲಿ ಡೌಟೇ ಇಲ್ಲ

First Published Apr 13, 2024, 5:07 PM IST

ಪ್ರಕೃತಿ ತನ್ನ ಪವಾಡಗಳಿಂದ ಅನೇಕ ವಿಚಿತ್ರ ರಚನೆಗಳನ್ನು ಸೃಷ್ಟಿಸಿದೆ, ಅದನ್ನು ನಾವು ಊಹಿಸಲೂ ಸಾಧ್ಯವಿಲ್ಲ, ಅಂತಹ ವಿಚಿತ್ರ, ವಿಭಿನ್ನ ಸ್ಥಳಗಳಿವೆ. ವಿಶ್ವದ ಇಂತಹ ಅನೇಕ ಸ್ಥಳಗಳು ತಮ್ಮ ರಚನೆ ಮತ್ತು ಅನನ್ಯತೆಯಿಂದಾಗಿ ಪ್ರವಾಸಿಗರ ಗಮನವನ್ನು ಸೆಳೆಯುತ್ತಿವೆ. ನೀವು ಸಹ ಮತ್ತೊಂದು ಜಗತ್ತಿಗೆ ಹೋಗಲು ಬಯಸಿದರೆ, ಈ ಸ್ಥಳಗಳನ್ನು ಎಕ್ಸ್ ಪ್ಲೋರ್ ಮಾಡೋದನ್ನು ಮರೆಯಬೇಡಿ.

ನೀವು ಎಂದಾದರೂ ಸಯನ್ಸ್ ಫಿಕ್ಷನ್ ಸಿನಿಮಾಗಳನ್ನು (science fiction cinema) ನೋಡಿದ್ದೀರಾ? ಅವರು ಇನ್ನೊಂದು ಜಗತ್ತನ್ನು ತೋರಿಸುತ್ತಾರೆ. ಇಂತಹ ಕಾಲ್ಪನಿಕ ಪ್ರದೇಶಗಳನ್ನು ನೋಡಬೇಕೆಂಬ ಬಯಕೆ ನಿಮಗೂ ಇರುತ್ತೆ ಅಲ್ವಾ?  ಪ್ರಪಂಚದಾದ್ಯಂತ ಟ್ರಾವೆಲ್ ಮಾಡಲು ಇಷ್ಟಪಡುವ ಜನರು ಹೆಚ್ಚಾಗಿ ಅಂತಹ ಸ್ಥಳಗಳನ್ನು ಹುಡುಕುತ್ತಿರುತ್ತಾರೆ, ಅಂತಹ ಕೆಲವು ಸ್ಥಳಗಳು ನಮ್ಮ ಭೂಮಿ ಮೇಲಿದೆ. ಇವುಗಳು ನೋಡಲು ಕಾಲ್ಪನಿಕ ಲೋಕದಂತಿದೆ, ಆದರೆ ಅವು ನಿಜವಾಗಿಯೂ ಜಗತ್ತಿಲ್ಲಿದೆ ಅನ್ನೋದು ಸತ್ಯ. ಅಂತಹ ಸ್ಥಳಗಳ ಬಗ್ಗೆ ತಿಳಿಯೋಣ. 
 

ಸಿವ ಓಯಸಿಸ್, ಈಜಿಪ್ಟ್ (Siwa oasis Egypt): ಸಿವ ಓಯಸಿಸ್ ಈಜಿಪ್ಟ್ ನಲ್ಲಿ ಬಹಳ ವಿಚಿತ್ರವಾದ ಸ್ಥಳವಾಗಿದೆ. ನಿಮಗೆ ಈಜಲು ಗೊತ್ತಿಲ್ಲದಿದ್ದರೆ, ಈ ಸ್ಥಳವು ನಿಮಗೆ ಬೆಸ್ಟ್. ಏಕೆಂದರೆ ಈಜಿಪ್ಟಿನ ಪಶ್ಚಿಮ ಮರುಭೂಮಿಯಲ್ಲಿ ಇಂತಹ ನೂರಕ್ಕೂ ಹೆಚ್ಚು ಕೊಳಗಳಿವೆ, ಅಲ್ಲಿ ಜನ ಬಯಸಿದರೂ ಮುಳುಗಲು ಸಾಧ್ಯವಿಲ್ಲ. ಇವುಗಳಲ್ಲಿ ಹೆಚ್ಚು ಉಪ್ಪು ಇರೋದರಿಂದ ಈ ನೀರಲ್ಲಿ ಜನರು ಮುಳುಗೋದಿಲ್ಲ. ಈ ಸರೋವರವು ನಿಗೂಢ ಶಕ್ತಿಗಳನ್ನು ಹೊಂದಿದೆ ಎಂದು ಅನೇಕ ಜನರು ನಂಬುತ್ತಾರೆ. ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ.

ಗಂಗಿ ಟೌನ್, ಸಿಸಿಲಿ(Gangi Town in Sicily): ಇಟಲಿಯಲ್ಲಿ ನಿರ್ಮಿಸಲಾದ ಈ ಪಟ್ಟಣವು ನೈಜವಾಗಿ ಕಾಣುವುದಿಲ್ಲ. ದೂರದಿಂದ ನೋಡಿದಾಗ, ಇದು ತುಂಬಾ ದಟ್ಟವಾಗಿದೆ, ಜನರು ಇಲ್ಲಿ ಹೇಗೆ ವಾಸಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಗಂಗಿ ಟೌನ್ ಕೆಳಗಿನಿಂದ ಮೇಲಕ್ಕೆ ನಿರ್ಮಿಸಲಾದ ಅದ್ಭುತ ಪಟ್ಟಣವಾಗಿದೆ, ಅಲ್ಲಿ ತುಂಬಾ ದಟ್ಟವಾದ ಮನೆಗಳಿವೆ. ಇದರ ಹೊರತಾಗಿಯೂ, ಇದು ತುಂಬಾ ಸುಂದರವಾಗಿದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಗ್ಲಾಸ್ ಪೆಬಲ್ ಬೀಚ್, ಕ್ಯಾಲಿಫೋರ್ನಿಯಾ (GlassPpebble Beach California): ಯುಎಸ್ಎಯ ಈ ಬೀಚ್ ತನ್ನ ವಿಶಿಷ್ಟ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ಕಲ್ಲುಗಳು ಈ ಕಡಲತೀರದಲ್ಲಿ ಕಂಡುಬರುತ್ತವೆ, ಅವು ಬೇರೆ ಪ್ರಪಂಚದಿಂದ ಬಂದಂತೆ ತೋರುತ್ತದೆ. ಇದರ ಸೌಂದರ್ಯದಿಂದಾಗಿ, ಪ್ರತಿವರ್ಷ ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಫಿಂಗಲ್ ಕೇವ್, ಸ್ಕಾಟ್ಲೆಂಡ್ (Fingal's cave Scotland): ಸ್ಕಾಟ್ಲೆಂಡ್ನಲ್ಲಿ ನಿರ್ಮಿಸಲಾದ ಈ ಅದ್ಭುತ ಗುಹೆಯ ರಹಸ್ಯವನ್ನು ಬಿಚ್ಚಿಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಸ್ಕಾಟ್ಲೆಂಡ್ ಸಮುದ್ರದ ದ್ವೀಪದಲ್ಲಿ ಒಂದು ಗುಹೆ ಇದೆ. ಅದರ ಗಾತ್ರದಿಂದ ಆಕಾರದವರೆಗೆ ಎಲ್ಲವೂ ಬಹಳ ವಿಶಿಷ್ಟವಾಗಿದೆ. ಲಾವಾದಿಂದಾಗಿ, ವಿಚಿತ್ರ ಆಕಾರವನ್ನು ರಚಿಸಲಾಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಕುತೂಹಲಕಾರಿಯಾಗಿ, ಅಲೆಗಳು ಇಲ್ಲಿ ಗುಹೆಗೆ ಅಪ್ಪಳಿಸಿದಾಗ, ಸುಂದರವಾದ ಶಬ್ದ ಹೊರಬರುತ್ತದೆ, ಇದು ಹೃದಯಕ್ಕೆ ತುಂಬಾ ಸಮಾಧಾನಕರವಾಗಿದೆ.

ಕ್ರೌಲೆ ಲೇಕ್ ಕಾಲಮ್, ಕ್ಯಾಲಿಫೋರ್ನಿಯಾ (Crowley lake Column, California): ಇಲ್ಲಿ ರಚನೆಯಾದ ಅಂಕಣಗಳನ್ನು ನೋಡಿದರೆ, ಇದು ಮಾನವರು ನಿರ್ಮಿಸಿದ ರಚನೆ ಎಂದು ತೋರುತ್ತದೆ, ಆದರೆ ವಾಸ್ತವದಲ್ಲಿ, ಇದನ್ನು ಮನುಷ್ಯರು ರಚಿಸಿಯೇ ಇಲ್ಲ. ಬದಲಾಗಿ, ಪ್ರಕೃತಿಯೇ ಅಂತಹ ಅದ್ಭುತ ಅಂಕಣಗಳನ್ನು ರಚಿಸಿದೆ. ಕ್ಯಾಲಿಫೋರ್ನಿಯಾದ ಕ್ರೌಲೆ ಸರೋವರದಲ್ಲಿ ಮಾಡಿದ ಈ ಅಂಕಣಗಳು ಅದ್ಭುತವಾಗಿವೆ. ಇವು ಜ್ವಾಲಾಮುಖಿಯ ಬೂದಿಗಿಂತ ಅನೇಕ ವರ್ಷಗಳ ಮೊದಲು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.
 

ಮೆಟಿಯೋರ್, ಗ್ರೀಸ್ (Meteora Greece): ಮೆಟಿಯೋರ್ ಗ್ರೀಸ್ ನಲ್ಲಿ ಬಹಳ ಸುಂದರವಾದ ಸ್ಥಳವಾಗಿದೆ. ಇದು ವಿಶ್ವದ ಪ್ರವಾಸಿಗರನ್ನು ಅಚ್ಚರಿಗೊಳಿಸುತ್ತೆ. ಕಡಿದಾದ ಬೆಟ್ಟದ ಮೇಲೆ ನಿರ್ಮಿಸಲಾದ ಈ ವಸಾಹತುಗಳನ್ನು ನೋಡಿದರೆ, ಅವುಗಳನ್ನು ಹೇಗೆ ನಿರ್ಮಿಸಲಾಗುತ್ತಿತ್ತು ಅನ್ನೋದೆ ಅಚ್ಚರಿಯಾಗುತ್ತೆ. ಗ್ರೀಸ್ ನಲ್ಲಿ ಜನರು ಶತಮಾನಗಳಿಂದ ಈ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಪ್ರಾಚೀನ ಕಾಲದಲ್ಲಿ, ಜನರು ಹಗ್ಗದ ಸಹಾಯದಿಂದ ಮಾತ್ರ ಇಲ್ಲಿಗೆ ಬರುತ್ತಿದ್ದರು, ಆದರೆ ಈಗ ಕ್ರಮೇಣ ಇಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಮತ್ತು ವಿಭಿನ್ನ ಜಗತ್ತನ್ನು ಅನುಭವಿಸುತ್ತಾರೆ.

ಸಿಗಿರಿಯಾ ರಾಕ್, ಶ್ರೀಲಂಕಾ (Sigiriya Rock Sri Lanka): ಸಿಗಿರಿಯಾ ಬಂಡೆಯನ್ನು ನೋಡಲು, ನೀವು ಶ್ರೀಲಂಕಾಕ್ಕೆ ಹೋಗಬೇಕು. ಇಲ್ಲಿ ರಾವಣನ ಕೋಟೆ ಇತ್ತು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಈ ಬಂಡೆಯ ನೋಟವು ನೋಡಲು ತುಂಬಾ ಭಯಾನಕವಾಗಿದೆ ಮತ್ತು ಅರಮನೆಯ ಅವಶೇಷಗಳನ್ನು ಇಂದಿಗೂ ಸಹ ಇಲ್ಲಿ ಕಂಡುಬಂದಿವೆ. ಇಂದು ಈ ಸ್ಥಳವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕಲೋನ್ ಕ್ಯಾಥೆಡ್ರಲ್, ಜರ್ಮನಿ (Cologne Cathedral Germany): ಜರ್ಮನಿಯ ಈ ಕಟ್ಟಡವು ವಿಶ್ವದ ಮೂರನೇ ಅತಿ ಎತ್ತರದ ಚರ್ಚ್ ಆಗಿದೆ. ಇದರ ಎತ್ತರ 515 ಅಡಿಗಳು. ಇದು ವಿಶ್ವದ ಅತ್ಯಂತ ಹಳೆಯ ಚರ್ಚ್ ಎಂದು ಪರಿಗಣಿಸಲಾಗಿದೆ. ಇದರ ನಿರ್ಮಾಣವು 1228 ರಲ್ಲಿ ಪ್ರಾರಂಭವಾಯಿತು. ಈ ಚರ್ಚ್ ನ ವಿಶೇಷತೆಯೆಂದರೆ ಅದರ ನೋಟ. ಚರ್ಚ್ ನಿಜವಾಗಿ ಇರುವಂತೆ ಕಾಣೋದಿಲ್ಲ. ದೂರದಿಂದ, ಇದು ಫೋಟೋಶಾಪ್ ಮಾಡಿದ ಕಟ್ಟಡವೆಂದು ತೋರುತ್ತದೆ, ಆದರೆ  ನಿಜಕ್ಕೂ ಇದೊಂದು ಅದ್ಭುತ ಸೌಂದರ್ಯ ಹೊಂದಿದೆ ಕಟ್ಟಡವಾಗಿದೆ. 

click me!