ಬನಾರಸ್ ನಲ್ಲಿ ಬಣ್ಣಗಳ ಬದಲು ಚಿತಾ ಭಸ್ಮದಿಂದ ಆಚರಿಸ್ತಾರಂತೆ ಹೋಳಿ ಹಬ್ಬ

Published : Mar 02, 2023, 05:12 PM IST

ಹೋಳಿ ಹಬ್ಬ ಎಂದರೆ ನೆನಪಾಗೋದು, ವಿವಿಧ ಬಣ್ಣಗಳಿಂದ ಆಚರಿಸಲಾಗುವ ಹೋಳಿ ಹಬ್ಬ. ಆದರೆ ಬನಾರಸ್ ನಲ್ಲಿ, ವರ್ಣರಂಜಿತ ಹೋಳಿಯೊಂದಿಗೆ ಚಿತೆಯ ಭಸ್ಮದಿಂದ ಹೋಳಿಯನ್ನು ಸಹ ಆಡಲಾಗುತ್ತದೆ. ಈ ಎರಡು ದಿನಗಳ ಉತ್ಸವದಲ್ಲಿ ಆಡಲು ಪ್ರಪಂಚದಾದ್ಯಂತದ ಜನರು ಬರುತ್ತಾರೆ. ಈ ಹೋಳಿ ಬಗ್ಗೆ ತಿಳಿಯಲು ಮುಂದೆ ಓದಿ… 

PREV
17
ಬನಾರಸ್ ನಲ್ಲಿ ಬಣ್ಣಗಳ ಬದಲು ಚಿತಾ ಭಸ್ಮದಿಂದ ಆಚರಿಸ್ತಾರಂತೆ ಹೋಳಿ ಹಬ್ಬ

ಹೋಳಿ ಹಬ್ಬದ (Holi festival) ಸಿದ್ಧತೆಗಳು ಎಲ್ಲೆಡೆ ಕಂಡುಬರುತ್ತಿವೆ, ಎಲ್ಲೋ ಒಂದು ವಾರದ ಹಿಂದೆಯಿಂದ ಹೋಳಿ ಹಬ್ಬದ ಆಚರಣೆ ಆರಂಭವಾಗಿದೆ, ಮತ್ತು ಎಲ್ಲೋ ಸರ್ಕಾರವು ಜನರಿಗಾಗಿ ವಿಶೇಷ ರೈಲುಗಳನ್ನು ಸಹ ಬಿಡುಗಡೆ ಮಾಡಿದೆ. ಆದರೆ ನಿಮಗೆ ತಿಳಿದಿದೆಯೇ, ಬನಾರಸ್ ನಲ್ಲಿ (Banaras) ಹೋಳಿ ಹಬ್ಬವನ್ನು ಬಣ್ಣಗಳೊಂದಿಗೆ ಆಚರಿಸುವುದಿಲ್ಲ, ಆದರೆ ಬೂದಿಯೊಂದಿಗೆ ಆಚರಿಸಲಾಗುತ್ತದೆ.

27

ಅಚ್ಚರಿಯಾಯ್ತಾ? ಹೌದು, ಬನಾರಸ್ ನಲ್ಲಿ ಈ ಹೋಳಿಯನ್ನು ಮಸಾನ್ ಕಿ ಹೋಳಿ (Masan ki Holi) ಅಂದ್ರೆ ಸ್ಮಶಾನದ ಹೋಳಿ ಎಂದು ಕರೆಯಲಾಗುತ್ತದೆ. ಈ ಹೋಳಿಯನ್ನು ಯಾರು ಆಡುತ್ತಾರೆ ಮತ್ತು ಈ ಹಬ್ಬವನ್ನು ಯಾವ ದಿನದಂದು ಆಚರಿಸಲಾಗುತ್ತದೆ? ಇದರ ವಿಶೇಷತೆ ಏನು ಎಂದು ಅನ್ನೋದನ್ನು ತಿಳಿಯೋಣ. 

37

ಬಾಬಾ ವಿಶ್ವನಾಥ್ ಆಡುತ್ತಾರೆ ಹೋಳಿ
ಈ ಹೋಳಿಯನ್ನು ಇಲ್ಲಿ ಎರಡು ದಿನಗಳ ಕಾಲ ಆಡಲಾಗುತ್ತದೆ. ರಂಗಭರಿ ಏಕಾದಶಿಯಂದು, ಬಾಬಾ ವಿಶ್ವನಾಥ್ ತನ್ನ ನಗರದ ಭಕ್ತರು ಮತ್ತು ದೇವರುಗಳು ಮತ್ತು ದೇವತೆಗಳೊಂದಿಗೆ ಅಬೀರ್ ಹೋಳಿ ಆಡುತ್ತಾರೆ ಎಂದು ನಂಬಲಾಗಿದೆ. ಮರುದಿನ, ಬಾಬಾ ಮಣಿಕರ್ಣಿಕಾ ಘಾಟ್ ನಲ್ಲಿ ತಮ್ಮ ಗಣಗಳೊಂದಿಗೆ ಚಿತಾ ಭಸ್ಮದ (ashes of dead body) ಹೋಳಿ ಆಡುತ್ತಾರೆ ಎನ್ನುವ ನಂಬಿಕೆ ಇದೆ.

47

ಬಾಬಾ ವಿಶ್ವನಾಥ್ ಮಧ್ಯಾಹ್ನ ಹೋಳಿ ಆಡುತ್ತಾರೆ
ಬಾಬಾ ವಿಶ್ವನಾಥ್ ಅಂದರೆ ಶಿವನು ಮಧ್ಯಾಹ್ನ ಮಣಿಕರ್ಣಿಕಾ ಘಾಟ್ (Manikarnika Ghat) ನಲ್ಲಿ ಸ್ನಾನ ಮಾಡಲು ಬರುತ್ತಾರೆ ಎಂದು ನಂಬಲಾಗಿದ್ದು, ಬಹಳ ವರ್ಷಗಳಿಂದ, ಈ ಸಂಪ್ರದಾಯವನ್ನು ಪೂರ್ಣ ಉತ್ಸಾಹ ಮತ್ತು ಸಂಭ್ರಮದಿಂದಾ ಆಚರಣೆ ಮಾಡಲಾಗುತ್ತಿದೆ.

57

ಹೋಳಿ ಆಡೋದು ಹೇಗೆ?
ಸಂಪ್ರದಾಯದ ಪ್ರಕಾರ, ಮೊದಲು ಸ್ಮಶಾನನಾಥನ ವಿಗ್ರಹದ ಮೇಲೆ ಗುಲಾಲ್ ಮತ್ತು ಚಿತಾ ಭಸ್ಮವನ್ನು ಹಚ್ಚಿದ ನಂತರ, ತಂಪಾದ ಚಿತೆಗಳ ಭಸ್ಮವನ್ನು ಘಾಟ್ನಲ್ಲಿ ಎತ್ತಿ ಪರಸ್ಪರ ಎಸೆಯಲಾಗುತ್ತದೆ ಮತ್ತು ಸಂಪ್ರದಾಯದ ಪ್ರಕಾರ ಅವರು ಭಸ್ಮದ ಹೋಳಿಯನ್ನು (holi of ash) ಆಡುತ್ತಾರೆ.

67

ದೆವ್ವಗಳು ಮತ್ತು ರಕ್ತಪಿಶಾಚಿಗಳಿಂದ ರಕ್ಷಣೆ 
ಈ ರೀತಿಯಾಗಿ ಚಿತಾ ಭಸ್ಮದಿಂದ ಹೋಳಿಯಾಡಿದರೆ ಬಾಬಾ ವಿಶ್ವನಾಥನ ಪ್ರೀತಿಯ ಜನರು ದೆವ್ವಗಳು, ಭೂತಗಳು, ರಕ್ತಪಿಶಾಚಿಗಳಂತಹ ಶಕ್ತಿಗಳಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಶಿವನು ರಕ್ಷಿಸುತ್ತಾನೆ ಎಂದು ನಂಬಲಾಗುತ್ತೆ. 

77

ಜನರು ಪ್ರಪಂಚದಾದ್ಯಂತದಿಂದ ಬಂದು ಈ ಹಬ್ಬಕ್ಕೆ ಸಾಕ್ಷಿಯಾಗುತ್ತಾರೆ
ವಿವಿಧ ರೀತಿಯ ಬಣ್ಣಗಳನ್ನು ಬಿಟ್ಟು ಚಿತಾ ಭಸ್ಮದಿಂದ ಆಚರಿಸಲಾಗುವ ಈ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ನೋಡಲು ಪ್ರಪಂಚದಾದ್ಯಂತದ ಜನರು ಬರುತ್ತಾರೆ. ನೀವು ಹೋಗಲು ಬಯಸಿದರೆ, ನೀವು ರಂಗ್ಭರಿ ಏಕಾದಶಿಗೆ (ranhbari ekadashi) ಬನಾರಸ್ ಗೆ ಹೋಗಬಹುದು.

Read more Photos on
click me!

Recommended Stories