ಸ್ವಿಡ್ಜರ್‌ಲ್ಯಾಂಡ್ ಅಂದ್ಕೊಂಡ್ರಾ… ಖಂಡಿತಾ ಅಲ್ಲ ಈ ಸುಂದರ ತಾಣ ಭಾರತದಲ್ಲೇ ಇದೆ

First Published | Mar 2, 2023, 4:59 PM IST

ಈ ಬೆರಗುಗೊಳಿಸುವ ಹಿಮದಿಂದ ಆವೃತವಾದ ರೈಲ್ವೆ ನಿಲ್ದಾಣ ನೋಡಿದ್ರೆ 'ಭೂಮಿಯ ಮೇಲಿನ ಸ್ವರ್ಗ'ದಂತೆ ಕಾಣುತ್ತೆ ಅಲ್ವಾ? ಈ ತಾಣ ಬೇರೆಲ್ಲೂ ಇಲ್ಲ ಭಾರತದಲ್ಲೇ ಇದೆ ಅಂದ್ರೆ ಶಾಖ್ ಆಗೋದು ಖಂಡಿತಾ ಬನ್ನಿ ಈ ತಾಣದ ಬಗ್ಗೆ ತಿಳಿಯೋಣ. 

ಇಲ್ಲಿರೋ ಫೋಟೋ ನೋಡಿದ್ರೆ ನಿಮಗೆ ಏನು ಅನ್ಸತ್ತೆ. ಸ್ವಿಡ್ಜರ್’ಲ್ಯಾಂಡ್ (Switzerland) ಫೋಟೋ ಇರಬಹುದು ಅಂತಾ ಅಂದ್ಕೊಂಡಿರಬಹುದು ಅಲ್ವಾ? ಆದ್ರೆ ಈ ಸುಂದರ ಪ್ರದೇಶ ಭಾರತದಲ್ಲೇ ಇದೆ ಅಂದ್ರೆ ನಂಬ್ತೀರಾ? ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಈ ಮೋಡಿ ಮಾಡುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಜನರು ಈ ಸುಂದರ ತಾಣದ ಬಗ್ಗೆ ಸರ್ಚ್ ಮಾಡಿದ್ದಂತೂ ನಿಜಾ. 

ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ (heaven on earth) ಎಂದು ಸರಿಯಾಗಿ ಕರೆಯಲಾಗುತ್ತದೆ. ನೀವು ಅದನ್ನು ನಂಬುತ್ತೀರಿ ಅಲ್ವಾ? ರಮಣೀಯ ಪರ್ವತಗಳ ನಡುವೆ ಹಿಮದಿಂದ ಆವೃತವಾದ ರೈಲ್ವೆ ನಿಲ್ದಾಣದ ಈ ಬೆರಗುಗೊಳಿಸುವ ಚಿತ್ರಗಳು ಸಹ ಕಾಶ್ಮೀರದ ಒಂದು ರೈಲ್ವೆ ನಿಲ್ದಾಣದ ಫೋಟೋ. ಜನವರಿ - ಫೆಬ್ರವರಿ ತಿಂಗಳಲ್ಲಿ ಚಳಿ ಹೆಚ್ಚಾದಾಗ ಈ ತಾಣ ಕಂಡು ಬಂದಿದ್ದು ಹೀಗೆ. 

Tap to resize

ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ವೈಷ್ಣವ್, ತಮ್ಮ ಶೀರ್ಷಿಕೆಯನ್ನು ರಸಪ್ರಶ್ನೆಯಾಗಿ ಪರಿವರ್ತಿಸಿ, "ನಿಲ್ದಾಣವನ್ನು ಊಹಿಸಿ! ಸುಳಿವು: ಭೂಮಿಯ ಮೇಲಿನ ಸ್ವರ್ಗ ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ 11.5M ವೀಕ್ಷಣೆಗಳು ಮತ್ತು 110.9K. ಲೈಕ್ಗಳೊಂದಿಗೆ, ಈ ಸುಂದರವಾದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (viral in social media) ಆಗುತ್ತಿವೆ. 

ಭೂಮಿಯ ಮೇಲೆ ಒಂದೇ ಒಂದು ಸ್ವರ್ಗವಿದೆ ಮತ್ತು ಅದು ನಮ್ಮ ಕಾಶ್ಮೀರ, ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು 2023 ರಲ್ಲಿ ವಿಸ್ಟಾಡೋಮ್ ಟ್ರೈನ್ ಗಳೊಂದಿಗೆ ಕಾಶ್ಮೀರದ ಸೌಂದರ್ಯವನ್ನು ನೋಡುವ ಭರವಸೆ ಇದೆ ಎಂದಿದ್ದಾರೆ. 
 

ಚಿತ್ರಗಳನ್ನು ನೋಡಿದ್ರೆ ಅದನ್ನು ಸ್ವಿಟ್ಜರ್ಲ್ಯಾಂಡ್‌ನ ಜಂಗ್ಫ್ರೌ ಪರ್ವತಗಳ ಮೂಲಕ ಪ್ರಯಾಣಿಸುವ ರೈಲು ಎಂದು ತಪ್ಪಾಗಿ ಭಾವಿಸಬಹುದು.. ಹಳಿಗಳು ಹಿಮದ ಹೊದಿಕೆಯಿಂದ ಆವೃತವಾಗಿವೆ. ಪ್ರಕಾಶಮಾನವಾದ ಕೆಂಪು ಮತ್ತು ನೀಲಿ ರೈಲು ಹಿಮದಿಂದ ಆವೃತವಾದ ಶಿಖರಗಳಿಂದ ಸುತ್ತುವರೆದಿದೆ. ಇದನ್ನು ನೋಡಿದ್ರೆ ಫೇರಿ ಟೇಲ್ ನಂತೆ ಕಾಣಿಸುತ್ತಿದೆ. ಈ ರೈಲ್ವೆ ಸ್ಟೇಷನ್ ಬೇರೆ ಯಾವುದೂ ಅಲ್ಲ ಕಾಶ್ಮೀರದ ಖಾಝಿಗುಂಡ್ ರೈಲ್ವೆ ನಿಲ್ದಾಣ (Qazigund railway station). 

ಚಳಿಗಾಲದ ಈ ಅದ್ಭುತ ದೃಶ್ಯಗಳನ್ನು ನೋಡಿದ್ರೇನೆ ಮೈ ಜುಮ್ ಎನಿಸುತ್ತೆ. ಕಾಶ್ಮೀರ ಹೇಳಿ ಕೇಳಿ ಭೂಲೋಕದ ಸ್ವರ್ಗ. ನಮ್ಮದೇ ಸ್ವಂತ ಸ್ವಿಡ್ಜರ್ ಲ್ಯಾಂಡ್ ಎಂದರೆ ತಪ್ಪಾಗಲಾರದು. ಅದರಲ್ಲೂ ಚಳಿಗಾಲದಲ್ಲಿ ಈ ಪ್ರದೇಶದ ಸೌಂದರ್ಯ ದುಪ್ಪಟ್ಟಾಗುತ್ತದೆ. ಅದನ್ನೇ ನಾವು ಖಾಝಿಗುಂಡ್ ನಲ್ಲೂ ಕಾಣಬಹುದು. 

ಹಿಂಬದಿಯಲ್ಲಿ ಹಿಮದಿಂದ ಆವೃತವಾದ ಎತ್ತರದ ಪರ್ವತ, ಶಿಖರಗಳು, ಸುತ್ತಲೂ ಮಂಜು ಮುಸುಕಿತ ವಾತಾವರಣ, ಮತ್ತೊಂದೆಡೆ ಸ್ನೋ ಫಾಲ್, ಮಂಜಿನಿಂದಲೇ ಆವೃತವಾದ ರೈಲ್ವೇ ಟ್ರಾಕ್ ಗಳು, ಅವುಗಳನ್ನೆಲ್ಲಾ ಸೀಳಿಕೊಂಡು ಹಿಮದ ಹೊದಿಕೆ ಹೊದ್ದು ರೈಲು ಬರುತ್ತಿದ್ದರೆ, ಅದನ್ನು ನೋಡುವುದೇ ಒಂದು ಅದ್ಭುತ ಅಲ್ವಾ?
 

Latest Videos

click me!