ಅಕ್ಟೋಬರ್ ತಿಂಗಳು ಹೇಗಿದೆಯೆಂದರೆ ಅದು ತುಂಬಾ ಬಿಸಿಯೂ ಅಲ್ಲ, ಚಳಿಯೂ ಅಲ್ಲ. ಈ ಹವಾಮಾನವು ವಾಕಿಂಗ್ ಗೆ ತುಂಬಾನೆ ಚೆನ್ನಾಗಿರುತ್ತೆ. ಹಾಗಾಗಿ ಈ ಟೈಮ್ ಲ್ಲೀ, ನೀವು ರಾಷ್ಟ್ರೀಯ ಉದ್ಯಾನವನಗಳಿಂದ ಪರ್ವತಗಳವರೆಗೆ ಟ್ರಿಪ್ ಮಾಡಬಹುದು.. ಅಂದರೆ ನೀವು ಎಲ್ಲಿಯಾದರೂ ತಿರುಗಾಡಲು ಪ್ಲ್ಯಾನ್ ಮಾಡಬಹುದು. ಈ ಬಾರಿ ದೀಪಾವಳಿಯ ಹಬ್ಬವು (Deepavali festival) ಅಕ್ಟೋಬರ್ನಲ್ಲಿದ್ದು, ಈ ಟೈಮ್ ನಲ್ಲಿ ನಿಮಗೆ 3 ರಿಂದ 4 ದಿನಗಳ ರಜೆ ಸಿಗೋದಂತೂ ಗ್ಯಾರಂಟಿ. ಆದ್ದರಿಂದ ಕೆಲವು ಸ್ಥಳಗಳನ್ನು ಡಿಸ್ಕವರ್ ಮಾಡಲು ಇದು ಉತ್ತಮ ಅವಕಾಶವಾಗಿದೆ. ಅಕ್ಟೋಬರ್ ತಿಂಗಳಲ್ಲಿ ನೀವು ಯಾವೆಲ್ಲಾ ಸ್ಥಳಗಳನ್ನು ನೋಡಬಹುದು, ಅನ್ನೋದನ್ನು ತಿಳಿಯೋಣ.
ಲಾಚೆನ್ (ಸಿಕ್ಕಿಂ)
ಲಾಚೆನ್ ಸಿಕ್ಕಿಂನ ಒಂದು ಸಣ್ಣ ಸುಂದರವಾದ ಸ್ಥಳವಾಗಿದೆ. ನೀವು ಉತ್ತರಾಖಂಡ್, ಹಿಮಾಚಲ ಹೊರತುಪಡಿಸಿ ಹೊಸ ಮತ್ತು ಸುಂದರವಾದ ಸ್ಥಳವನ್ನು ನೋಡಲು ಬಯಸಿದ್ದರೆ, ನೀವು ಖಂಡಿತವಾಗಿ ಲಾಚೆನ್ ಟ್ರಿಪ್ ಮಾಡಬಹುದು. ಸುತ್ತಲೂ ಹಿಮಾಚ್ಛಾದಿತ ಬೆಟ್ಟಗಳು ಮತ್ತು ಕಣಿವೆಗಳಿಂದ (valley) ಸುತ್ತುವರೆದಿರುವ ಲಾಚೆನ್ ಅಕ್ಟೋಬರ್ ನಲ್ಲಿ ಭೇಟಿ ನೀಡಲು ಅತ್ಯುತ್ತಮವಾಗಿದೆ. ಲಾಚೆನ್ ನ ಥಂಗು ಕಣಿವೆ, ಚೋಪ್ಟಾ ಕಣಿವೆ, ಲಾಚೆನ್ ಮೊನಾಸ್ಟರಿ ಮತ್ತು ಗುರುಡೋಂಗ್ಮಾರ್ ಸರೋವರ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು.
ಕೂನೂರ್ (ತಮಿಳುನಾಡು)
ಹಚ್ಚಹಸುರಿನ ಪರ್ವತಗಳಿಂದ ಕೂಡಿರುವ ತಮಿಳುನಾಡಿನ ಕೂನೂರ್ ಗೆ ಭೇಟಿ ನೀಡುವ ಯೋಜನೆ ಈ ಸೀಸನ್ ನಲ್ಲಿ ಅತ್ಯುತ್ತಮವಾಗಿರುತ್ತೆ. ನೋಡಿದಷ್ಟೂ ಸುತ್ತಲೂ ಹರಡಿರುವ ಹುಲ್ಲು ಮತ್ತು ಚಹಾ ತೋಟಗಳು (tea plantation) ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಸ್ಥಳವು ಪ್ರಕೃತಿ ಪ್ರೇಮಿಗಳಿಗೆ ಅತ್ಯುತ್ತಮವಾಗಿದೆ, ಹಾಗೆಯೇ ಟ್ರೆಕ್ಕಿಂಗ್ ಮಾಡೋರಿಗೂ ಈ ಸ್ಥಳವು ಸ್ವರ್ಗಕ್ಕಿಂತ ಕಡಿಮೆಯಿಲ್ಲ.
ಝಿರೋ ವ್ಯಾಲಿ (ಅರುಣಾಚಲ ಪ್ರದೇಶ)
ಅರುಣಾಚಲ ಪ್ರದೇಶದ ಝಿರೋ ವ್ಯಾಲಿ (zero valley) ಹೆಸರನ್ನು ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಸುಂದರವಾದ ಮತ್ತು ಪ್ರಶಾಂತವಾದ ಸ್ಥಳಕ್ಕೆ ಹೋಗುವ ಮೂಲಕ ನಿಮ್ಮ ರಜಾದಿನಗಳನ್ನು ಆನಂದಿಸಲು ನೀವು ಬಯಸಿದರೆ, ತಡಮಾಡದೆ ಇಲ್ಲಿ ಪ್ಲ್ಯಾನ್ ಮಾಡಿ. ಝೀರೋ ವ್ಯಾಲಿಯನ್ನು ತಲುಪುವ ಮೂಲಕ, ನೀವು ವಿಭಿನ್ನ ಜಗತ್ತಿಗೆ ಹೊಕ್ಕಂತಹ ಅನುಭವ ಪಡೆಯುವಿರಿ.
ಝಿರೋ ವ್ಯಾಲಿ ಹತ್ತಿರದಲ್ಲೇ ಟ್ಯಾಲಿ ವ್ಯಾಲಿ ಫಾರೆಸ್ಟ್ ವೈಲ್ಡ್ ಲೈಫ್, ಮೇಘನಾ ಗುಹಾಂತರ ದೇವಾಲಯ ಮತ್ತು ಸಿದ್ದೇಶ್ವರ ನಾಥ್ ದೇವಾಲಯಗಳಿವೆ. ಇವೆಲ್ಲವೂ ನೀವು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳಗಳು. ಇದಲ್ಲದೆ, ನೀವು ನಿಮ್ಮ ಕ್ಯಾಮೆರಾದಲ್ಲಿ ಸಂಪೂರ್ಣ ಝಿರೋ ವ್ಯಾಲಿಯನ್ನು ಇಲ್ಲಿನ ಪ್ರಸಿದ್ಧ ವ್ಯೂ ಪಾಯಿಂಟ್ ನಿಂದ ಸೆರೆಹಿಡಿಯಬಹುದು.
ಸ್ಪಿಟಿ (ಹಿಮಾಚಲ ಪ್ರದೇಶ)
ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯನ್ನು (Spiti valley) ತಲುಪಿದ್ರೆ ನೀವು ಪ್ರಕೃತಿಯ ಅದ್ಭುತ ಸೌಂದರ್ಯವನ್ನು ನೋಡಬಹುದು. ವರ್ಣರಂಜಿತ ಪರ್ವತಗಳು, ತಲೆಯ ಮೇಲೆ ತೆರೆದ ನೀಲಿ ಆಕಾಶ ಮತ್ತು ಶಬ್ದದಿಂದ ದೂರ ಇವೆಲ್ಲವೂ ನಿಮ್ಮನ್ನು ಅಯಸ್ಕಾಂತದಂತೆ ಸೆಳೆಯುತ್ತದೆ. ಈ ತಾಣಗಳು ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಸೌಂದರ್ಯವನ್ನು ಹೊಂದಿದೆ.
ಉತ್ತರ ಭಾರತದಲ್ಲಿ ಅಕ್ಟೋಬರ್ ನಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಸ್ಪಿತಿ ಕಣಿವೆಯೂ ಒಂದು. ಫಿರೋಜಾ-ಗ್ರೇ ಸ್ಪಿತಿ ನದಿ, ಕಣಿವೆಯ ಇಟ್ಟಿಗೆ ಮತ್ತು ಮಣ್ಣಿನ ಮನೆಗಳು, ಸೊಂಪಾದ ಹಸಿರು ಗದ್ದೆಗಳು ಮತ್ತು ಸ್ಥಳದಲ್ಲಿ ನಿರ್ಮಿಸಲಾದ ಮಠಗಳಲ್ಲಿ ಸಮಯ ಕಳೆಯುವುದು ವಿಭಿನ್ನ ಅನುಭವ ನೀಡುತ್ತದೆ.
ಶಿಲ್ಲಾಂಗ್
ಈ ರಜಾದಿನಗಳಲ್ಲಿ ನೀವು ಶಿಲ್ಲಾಂಗ್ ಗೆ ಟೂರ್ ಮಾಡಲು ಸಹ ಪ್ಲ್ಯಾನ್ ಮಾಡಬಹುದು. ಶಿಲ್ಲಾಂಗ್ ಮೇಘಾಲಯದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಅದರ ಸುಂದರವಾದ ದೃಶ್ಯಗಳು, ಮಳೆಯ ಹಗುರ ಹನಿಗಳು, ಎತ್ತರದ ಪೈನ್ ಮರಗಳು, ಹರಿಯುವ ಕಣಿವೆಗಳು ಎಲ್ಲವೂ ಅದರ ಸೌಂದರ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ.