ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ಈ 8 ವಿಷ್ಯಗಳು ತಿಳಿದಿರಲೇಬೇಕು

Published : Jan 22, 2025, 06:40 PM ISTUpdated : Jan 23, 2025, 10:23 AM IST

ಕುಂಭಮೇಳಕ್ಕೆ ಹೋಗೋ ಪ್ಲ್ಯಾನ್ ಇದೆಯಾ? ಹಾಗಿದ್ರೆ ಅಲ್ಲಿಗೆ ಹೋಗುವ ಮುನ್ನ ಒಂದಷ್ಟು ವಿಷಯಗಳನ್ನು ತಿಳಿದುಕೊಂಡರೆ, ನೀವು ಉತ್ತಮ ರೀತಿಯಲ್ಲಿ ಕುಂಭಮೇಳವನ್ನು ಎಂಜಾಯ್ ಮಾಡಲು ಸಾಧ್ಯವಾಗುತ್ತೆ.   

PREV
110
ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ಈ 8 ವಿಷ್ಯಗಳು ತಿಳಿದಿರಲೇಬೇಕು

ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ (Kumbha Mela 2025)ನಡೆಯಲಿದೆ.  ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭ ಮೇಳವನ್ನು ನಡೆಸಲಾಗುತ್ತದೆ. ಸಂಗಮದಲ್ಲಿ ಸ್ನಾನ ಮಾಡಲು ಕೋಟ್ಯಂತರ ಜನರು ಪ್ರಯಾಗ್ ರಾಜ್ ತಲುಪಲಿದ್ದಾರೆ. ಆದ್ದರಿಂದ, ಕುಂಭ ಮೇಳಕ್ಕೆ ಹೋಗುವ ಮೊದಲು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಅವುಗಳನ್ನು ನೀವು ತಿಳಿದುಕೊಂಡ್ರೆ ಉತ್ತಮ. 

210

ನೆನಪಿನಲ್ಲಿಡಬೇಕಾದ ವಿಷಯಗಳು
ನೀವು ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದರೆ, ಮೇಳದ ಸಮಯದಲ್ಲಿ ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ, ಇದು ನಿಮ್ಮ ಕುಂಭಮೇಳ ಪ್ರಯಾಣವನ್ನು ಉತ್ತಮ ರೀತಿಯಲ್ಲಿ ಎಂಜಾಯ್ ಮಾಡಲು ಹಾಗೂ ನೀವು ಆರೋಗ್ಯವಾಗಿರಲು ಸಹಾಯ ಮಾಡುತ್ತೆ. 

310

ಬೆಚ್ಚಗಿನ ಬಟ್ಟೆಗಳು (woolen clothes)
ಕುಂಭಮೇಳದ ಸಮಯದಲ್ಲಿ, ವಿಶೇಷವಾಗಿ ರಾತ್ರಿಯಲ್ಲಿ ಸಂಗಮ್ ಪ್ರದೇಶವು ತಂಪಾಗಬಹುದು. ಆದ್ದರಿಂದ, ಸ್ವೆಟರ್, ಮಫ್ಲರ್, ಹ್ಯಾಂಡ್ ಗ್ಲೌಸ್, ಟೋಪಿಗಳು ಮತ್ತು ಭಾರವಾದ ಕೋಟ್ ಗಳಂತಹ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ.

410

ಪ್ರಥಮ ಚಿಕಿತ್ಸಾ ಕಿಟ್ (first aid kit)
ಕುಂಭಮೇಳವು ಭಾರಿ ಜನಸಂದಣಿಯಿಂದ ಕೂಡಿರುತ್ತದೆ . ಕೆಲವೊಮ್ಮೆ ಸಣ್ಣ ಗಾಯಗಳು ಅಥವಾ ವೈರಲ್ ಜ್ವರಕ್ಕೆ ಕಾರಣವಾಗಬಹುದು. ಆದ್ದರಿಂದ, ಜ್ವರ, ತಲೆನೋವು, ಹೊಟ್ಟೆ ನೋವಿಗೆ ಔಷಧಿಗಳನ್ನು ಇರಿಸಿಕೊಳ್ಳಿ.

510

ಪಾದರಕ್ಷೆಗಳು (comfortable shoes)
ಕುಂಭಮೇಳದ ಸಮಯದಲ್ಲಿ ನೀವು ಬಹಳ ದೂರ ನಡೆಯಬೇಕು ಮತ್ತು ಮಾರ್ಗಗಳು ತುಂಬಾ ಏರುಪೇರಿರುತ್ತೆ. ಆದ್ದರಿಂದ ಆರಾಮದಾಯಕ ಮತ್ತು ಬಾಳಿಕೆ ಬರುವ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸಿ. 

610

ಪೇಪರ್ ಸೋಪ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ (paper soap and hand sanitizer)
ಜನದಟ್ಟಣೆಯ ಸ್ಥಳಗಳಲ್ಲಿ ಕೈ ನೈರ್ಮಲ್ಯ ಬಹಳ ಮುಖ್ಯ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಪೇಪರ್ ಸೋಪ್, ಸಾಬೂನು ಮತ್ತು ಹ್ಯಾಂಡ್ ಸ್ಯಾನಿಟೈಜರ್ ಇದ್ರೆ ಉತ್ತಮ.

710

ನೀರಿನ ಬಾಟಲಿ (water bottle)
ಕುಂಭ ಮೇಳದ ಸಮಯದಲ್ಲಿ ಯಾವಾಗಲೂ ನಿಮ್ಮ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಒಯ್ಯಿರಿ, ಇದರಿಂದ ಹೈಡ್ರೇಟ್ ಆಗಿ ಉಳಿಯಲು ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. 
 

810

ಗುರುತಿನ ಚೀಟಿ (identity card)
ಕುಂಭಮೇಳದಲ್ಲಿ ಭದ್ರತೆಗಾಗಿ, ಯಾವಾಗಲೂ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಉದಾಹರಣೆಗೆ ಆಧಾರ್ ಕಾರ್ಡ್, ಮತದಾರರ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಇತ್ಯಾದಿ.

910

ಸನ್ ಸ್ಕ್ರೀನ್ (sunscreen)
ಕುಂಭಮೇಳದಲ್ಲಿ ದೀರ್ಘಕಾಲ ಹೊರಗೆ ಇರಬೇಕಾಗುತ್ತದೆ, ಮತ್ತು ಸೂರ್ಯನ ಕಿರಣಗಳು ಚರ್ಮವನ್ನು ಹಾನಿಗೊಳಿಸಬಹುದು, ಆದ್ದರಿಂದ ಸನ್ಸ್ಕ್ರೀನ್ ಬಳಸಿ, ಇದರಿಂದ ನಿಮ್ಮ ಸ್ಕಿನ್ ಹಾನಿಯಾಗದಂತೆ ರಕ್ಷಿಸಬಹುದು. 

1010

ಮಾಸ್ಕ್ (mask)
ಕುಂಭಮೇಳದಲ್ಲಿ ಮಾಲಿನ್ಯ ಮತ್ತು ಸೋಂಕನ್ನು ತಪ್ಪಿಸಲು ಮಾಸ್ಕ್ ಧರಿಸಲು ಮರೆಯಬೇಡಿ, ಇದರಿಂದ ನೀವು ಧೂಳು, ಮಾಲಿನ್ಯ ಮತ್ತು ಬ್ಯಾಕ್ಟೀರಿಯಾದಿಂದ ಸುರಕ್ಷಿತವಾಗಿರುತ್ತೀರಿ. 

click me!

Recommended Stories