ಸೌಂದರ್ಯವೇ ಧರೆಗಿಳಿದಂತೆ: ಹಿಮದ ಹೊದಿಕೆ ಹೊದ್ದ ಹಿಮಾಚಲ!

First Published | Nov 27, 2019, 1:45 PM IST

ಮಳೆಗಾಲ ನಿಂತು ಚಳಿಗಾಲ ಎಂಟ್ರಿ ನೀಡಿದೆ. ಹೀಗಿರುವಾಗ ಜನರೆಲ್ಲರೂ ಕೋಟ್, ಶಾಲು ಎಂದು ಬೆಚ್ಚಗಿನ ಬಟ್ಟೆಗಳನ್ನು ಹೊರ ತೆಗೆಲಾರಂಭಿಸಿದ್ದಾರೆ. ಇನ್ನು ಚಳಿಗಾಲದ ಬ್ಯೂಟಿಗೆ ಪ್ರಸಿದ್ಧವಾಗಿರುವ ಹಿಮಾಚಲದಲ್ಲೂ ಮೈ ನಡುಗಿಸುವ ಚಳಿ ಆರಂಭವಾಗಿದ್ದು, ಎಲ್ಲೆಲ್ಲೂ ಹಿಮ ಬೀಳಲಾರಂಭಿಸಿದೆ. ಬೆಟ್ಟ, ಗುಡ್ಡಗಳು ಹಿಮದಿಂದಾವೃತಗೊಳ್ಳುತ್ತಿದ್ದು, ಝರಿ- ತೊರೆಯಲ್ಲಿ ಹರಿಯುತ್ತಿರುವ ನೀರು ಮಂಜುಗಡ್ಡೆಯಾಗಿದೆ. ಹಿಮಾಚಲ ಪ್ರದೇಶದ ಕೆಲ ಫೋಟೋಗಳು ನಿಮಗಾಗಿ.

ಹಿಮಾಚಲ ಪ್ರದೇಶದಲ್ಲಿ ಹಿಮ ಬೀಳಲಾರಂಭಿಸಿದ್ದು, ಕೊರೆಯುವ ಚಳಿ ಆರಂಭವಾಗಿದೆ.
ಹಿಮದಿಂದ ಆವರಿಸಿಕೊಳ್ಳುತ್ತಿರುವ ಹಿಮಾಚಲ ಪ್ರದೆಶದ ಮನಾಲಿ ಹಾಗೂ ಕಿನೌರ್‌ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿವೆ.
Tap to resize

ಹಿಮದ ಹೊದಿಕೆ ಹೊದ್ದುಕೊಳ್ಳಲಾರಂಭಿಸಿರುವ ಹಿಮಾಚಲದ ಮನಾಲಿ ಹಾಗೂ ಕಿನೌರ್‌ ಪ್ರವಾಸಿಗರನ್ನು ಕೈಬೀಸಿ ಕರೆಯಲಾರಂಭಿಸಿದೆ.
ಮಂಜುಗಡ್ಡೆಯಿಂದ ಆವರಿಸುತ್ತಿರುವ ಹಿಮಾಚಲದಲ್ಲಿ ಹವಾಮಾನ -5 ಡಿಗ್ರಿಯಾಗಿದ್ದು, ಜನರು ಚಳಿಯಿಂದ ನಡುಗುವಂತೆ ಮಾಡಿದೆ.
ಇಲ್ಲಿನ ಆಡಳಿತ ವರ್ಗ ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದು, ಮನೆಯಿಂದ ಹೊರ ಬರದಂತೆ ಸೂಚಿಸಿದೆ.
ಈ ಕೊರೆಯುವ ಚಳಿಯ ನಡುವೆ ಕೆಲವೆಡೆ ಮಳೆಯೂ ಸುರಿಯುತ್ತಿದ್ದು, ಹೊರಹೋಗಲು ಜನರಿಗೆ ಮತ್ತಷ್ಟು ಕಷ್ಟವಾಗಿದೆ.
ಬೆಟ್ಟ, ಗುಡ್ಡಗಳು ಹಿಮದಿಂದ ಆವೃತವಾಗತೊಡಗಿದ್ದು ಪ್ರವಾಸಿಗರು ಈ ಸೌಂದರ್ಯಕ್ಕೆ ಮನ ಸೋತಿದ್ದಾರೆ.
ಮನೆಗಳೆಲ ಮೇಲೆಲ್ಲಾ ಹಿಮದ ಹೊದಿಕೆ
ಇಲ್ಲಿಗಾಗಮಿಸುತ್ತಿರುವ ಪ್ರವಾಸಿಗರಿಗೂ ಆಡಳಿತ ವರ್ಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಹಿಮಾಚಲ ಪ್ರದೆಶದ ಕಲ್ಪ ಎಂಬ ರೆಸಾರ್ಟ್‌ನ ದೃಶ್ಯ
ಬೆಟ್ಟ ಗುಡ್ಡಗಳೆಲ್ಲಾ ಮಂಜುಗಡ್ಡೆಯಿಂದ ಆವೃತವಾಗುತ್ತಿದ್ದರೂ ಟ್ರೆಕ್ಕಿಂಗ್ ಮಾತ್ರ ನಿಂತಿಲ್ಲ
ಹಿಮಾಚಲ ಪ್ರದೇಶದ ಮನಾಲಿಯ ಮನಮೋಹಕ ದೃಶ್ಯ
ಇನ್ನೇನು ಕೆಲವೇ ದಿನಗಳಲ್ಲಿ ಮರ ಗಿಡಗಳೆಲ್ಲವೂ ಹಿಮದಿಂದ ಆವೃತವಾಗುತ್ತದೆ
ಕೊರೆಯುವ ಚಳಿ, ಹಿಮದ ಹೊದಿಕೆ... ಜನರ ಉತ್ಸಾಹ ಮಾತ್ರ ಕಳೆಗುಂದಿಲ್ಲ: ಹೆಜ್ಜೆ ಇಡುತ್ತಾ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿರುವ ಪ್ರವಾಸಿಗರು
ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು

Latest Videos

click me!