ಪ್ರಪಂಚದ ಅತ್ಯಂತ ಉದ್ದವಾದ ರೈಲ್ವೆ ಮಾರ್ಗ ಅಂದ್ರೆ ಅದು ಟ್ರಾನ್ಸ್ - ಸೈಬೀರಿಯನ್ ರೈಲ್ವೆ ಮಾರ್ಗ (Russia). ಈ ಮಾರ್ಗ 7 ದಿನದಲ್ಲಿ 9,289 ಕಿಮೀ ದೂರ ಕ್ರಮಿಸುತ್ತದೆ.
ಈ ರೈಲ್ವೆ ಮಾರ್ಗ ಸುಮಾರು 7 ಟೈಮ್ ಝೋನ್ (time zone) ಕವರ್ ಮಾಡುತ್ತೆ. ಅಷ್ಟೇ ಅಲ್ಲ ಸೈಬೀರಿಯಾದ ಸುಂದರವಾದ ಪ್ರಕೃತಿಗಳನ್ನು ಕವರ್ ಮಾಡುತ್ತೆ ಈ ದಾರಿ. ಯೂರಲ್ ಪರ್ವತ, ಬೈಕಲ್ ಸರೋವರ ಎಲ್ಲವನ್ನು ಸಹ ನೀವು ಎಂಜಾಯ್ ಮಾಡಬಹುದು.
ಇನ್ನು ಬೀಜಿಂಗ್ ನಿಂದ ಮಾಸ್ಕೋವರೆಗಿನ ರೈಲ್ವೆ ಜರ್ನಿ ಎರಡನೇ ಅತ್ಯಂತ ಉದ್ದವಾದ ರೈಲ್ವೆ ಮಾರ್ಗದೆ. ಈ ದಾರಿಯು ಆರು ದಿನಗಳು ಮತ್ತು 5 ರಾತ್ರಿಗಳನ್ನು ತೆಗೆದುಕೊಳ್ಳುತ್ತದೆ.
ಈ ದಾರಿಯು ಸರಿಸುಮಾರು ಚೀನಾ, ರಷ್ಯಾ, ಮಂಗೋಲಿಯಾ, ಕಝಕಿಸ್ತಾನ ಹೀಗೆ ನಾಲ್ಕು ದೇಶಗಳನ್ನು ಕವರ್ ಮಾಡುತ್ತೆ. ಈ ದಾರಿಯಲ್ಲಿ ಟ್ರಾವೆಲ್ ಮಾಡಿದ್ರೆ ಗೋಬಿ ಡೆಸರ್ಟ್, ದ ಗ್ರೇಟ್ ವಾಲ್ ಆಫ್ ಚೈನಾದ ಸೌಂದರ್ಯವನ್ನು ಸಹ ನೀವು ಸವಿಯಬಹುದು.
ಕೆನಡಾದ ಟೊರಂಟೋದಿಂದ ವಾಂಕವರ್ ನಡುವೆ ಹಾದು ಹೋಗುವ ರೈಲ್ವೆ ಮಾರ್ಗ ಮೂರನೇ ಅತಿ ದೊಡ್ಡ ರೈಲ್ವೆ ಮಾರ್ಗದೆ. ಇದು 4 ದಿನದಲ್ಲಿ 4460 ಕಿಮೀ ಮಾರ್ಗವನ್ನು ಕ್ರಮಿಸುತ್ತದೆ.
ಈ ಸುಂದರ ರೈಲ್ವೆ ಮಾರ್ಗದಲ್ಲಿ ಕ್ರಮಿಸುವಾಗ ಮಂಜು ಆವರಿಸಿರುವ ಬೆಟ್ಟಗಳನ್ನು ಕಾಣಬಹುದು. ಅಷ್ಟೇ ಅಲ್ಲ ಕೆನಡಿಯನ್ ಕಾಡುಗಳನ್ನು ಕಾಣಬಹುದು, ಇಲ್ಲಿ ಕರಡಿಗಳು ಮತ್ತು ಜಿಂಕೆಗಳನ್ನು ಸಹ ನೀವು ನೋಡಬಹುದು.
ಆಸ್ಟ್ರೇಲಿಯಾದಲ್ಲಿನ ಇಂಡಿಯನ್ ಫೆಸಿಫಿಕ್ ರೈಲ್ವೆ ಜರ್ನಿ ಸಿಡ್ನಿಯಿಂದ ಪೆರ್ತಿಗೆ ಸಾಗುತ್ತದೆ. ಈ ಪ್ರಯಾಣ ನಾಲ್ಕು ದಿನಗಳು ಮತ್ತು ಮೂರು ರಾತ್ರಿಗಳ ಜರ್ನಿಯನ್ನು ಹೊಂದಿದೆ.
ಈ ಸುಂದರ ರೈಲ್ವೆ ಪ್ರಯಾಣವು (train journey) ಸುಂದರವಾದ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಅಷ್ಟೆ ಅಲ್ಲದೇ ಇಲ್ಲಿ ನೀಲಿ ಪರ್ವತಗಳು ಜರ್ನಿಯ ಪ್ರಮುಖ ಆಕರ್ಷಣೆಯಾಗಿ ಉಳಿಯಲಿದೆ.
ದಿಬ್ರುಗರ್ಹ್ ಮತ್ತು ಕನ್ಯಾಕುಮಾರಿ ವಿವೇಕ್ ಎಕ್ಸ್ ಪ್ರೆಸ್ ಭಾರತದ ಅತ್ಯಂತ ಉದ್ದವಾದ (longest Indian railway route) ರೈಲ್ವೆ ಮಾರ್ಗ. ಈ ರೈಲ್ವೆ ಮಾರ್ಗವು 3 ದಿನಗಳ ಜರ್ನಿಯಾಗಿ 4218 ಕಿಮೀ ಮಾರ್ಗವನ್ನು ಕ್ರಮಿಸುತ್ತೆ.
ಈ ದಾರಿಯಲ್ಲಿ ಸಾಗುವಾಗ ರೈಲು ಸುಮಾರು 9 ರಾಜ್ಯಗಳನ್ನು ದಾಟಿಕೊಂಡು ಸಾಗುತ್ತೆ, ಅಷ್ಟೆ ಅಲ್ಲ ಇಲ್ಲಿ ನೀವು ಸುಂದರವಾಗ ತಾಣಗಳನ್ನು ಸಹ ನೋಡಬಹುದು. ಸುಮಾರು 59 ಸ್ಟಾಪ್ ಗಳನ್ನು ಮಾತ್ರ ಈ ರೈಲ್ವೆ ಮಾರ್ಗ ಹೊಂದಿದೆ.