ಒಂದು ಜನಪ್ರಿಯ ದಂತಕಥೆಯ ಪ್ರಕಾರ, "ಸತಿ ಮಾತೆಯ" ದೇಹವನ್ನು ಭಗವಾನ್ ವಿಷ್ಣುವು 51 ತುಂಡುಗಳಾಗಿ ವಿಂಗಡಿಸಿದನು, ಭೂಮಿಯ ಮೇಲೆ ವಿವಿದೆಡೆಗಳಲ್ಲಿ ಸತಿಯ ದೇಹದ ಭಾಗಗಳು ಬಿದ್ದವು, ಆ ದೇವಾಲಯಗಳನ್ನು ಶಕ್ತಿಪೀಠಗಳು ಎಂದು ಕರೆಯಲಾಗುತ್ತೆ. ಕಾಮಾಕ್ಯ ದೇವಾಲಯವು ಅಂತಹ ಒಂದು ಶಕ್ತಿಪೀಠ ದೇವಾಲಯವಾಗಿದೆ, ಇಲ್ಲಿ ಮಾತಾ ಸತಿಯ ಯೋನಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಇದಕ್ಕೆ ಮಾತ್ರವಲ್ಲದೆ ಬ್ಲ್ಯಾಕ್ ಮ್ಯಾಜಿಕ್ ತೆಗೆದುಹಾಕಲು ಸಹ ಹೆಸರುವಾಸಿಯಾಗಿದೆ. ಹೌದು, ಇದು ದೇಶದ ಏಕೈಕ ಪ್ರಸಿದ್ಧ ದೇವಾಲಯವಾಗಿದೆ, ಇಲ್ಲಿ ಜನರು ಬ್ಲ್ಯಾಕ್ ಮ್ಯಾಜಿಕ್ (black magic) ತೆಗೆದುಹಾಕಲು ಬರುತ್ತಾರೆ.