ಕ್ರಿಸ್ಮಸ್ ಇತಿಹಾಸದಿಂದ ಕ್ರಿಸ್ಮಸ್ ಟ್ರೀ ಮಹತ್ವವರೆಗೆ… ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

First Published | Dec 20, 2022, 4:44 PM IST

ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು, ಕ್ರಿಸ್ಮಸ್ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸುತ್ತಾರೆ. ಈ ದಿನದಂದು, ಕ್ರಿಶ್ಚಿಯಾನಿಟಿಯ ಸ್ಥಾಪಕ, ಯೇಸು ಕ್ರಿಸ್ತನು ಜನಿಸಿದನು ಎಂದು ನಂಬಲಾಗಿದೆ. ಈ ಹಬ್ಬದ ಮಹತ್ವ ಮತ್ತು ಈ ಹಬ್ಬಕ್ಕೆ ಸಂಬಂಧಿಸಿದ ಇತಿಹಾಸವನ್ನು ತಿಳಿದುಕೊಳ್ಳೋಣ.

ಕ್ರಿಸ್‌ಮಸ್ ಹಬ್ಬವನ್ನು (Christmas Celebration) ಪ್ರತಿ ವರ್ಷವಬ ಡಿಸೆಂಬರ್ 25ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು, ಜನರು ಚರ್ಚ್‌ನಲ್ಲಿ ಒಟ್ಟುಗೂಡಿ, ಪ್ರಾರ್ಥನೆಗಳನ್ನು ಹಾಡುವ ಮೂಲಕ ಕ್ರೈಸ್ತ ಧರ್ಮದ ಸ್ಥಾಪಕರಾದ ಯೇಸುಕ್ರಿಸ್ತನ (Jesus Christ) ಜನ್ಮದಿನವನ್ನು ಆಚರಿಸುತ್ತಾರೆ. ಅಲ್ಲದೆ, ಈ ದಿನದಂದು, ಮನೆಗಳಲ್ಲಿರುವ ಕ್ರಿಸ್‌ಮಸ್ ಟ್ರೀಯನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈಗ ಕ್ರಿಸ್ ಮಸ್ ಹಬ್ಬಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿರುವುದರಿಂದ, ಈ ವಿಶೇಷ ಹಬ್ಬಕ್ಕೆ ಸಂಬಂಧಿಸಿದ ಹೆಚ್ಚಿನ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ ಕ್ರಿಸ್ ಮಸ್ ನ ಇತಿಹಾಸವೇನು ಮತ್ತು ಕ್ರಿಶ್ಚಿಯಾನಿಟಿಯಲ್ಲಿ ಈ ಹಬ್ಬದ ಮಹತ್ವವೇನು ಎಂದು ನಿಮಗೆ ತಿಳಿದಿದೆಯೇ? ತಿಳಿದುಕೊಳ್ಳೋಣ -

ಕ್ರಿಸ್ ಮಸ್ ಹಬ್ಬದ ಮಹತ್ವ (importance of Christmas)

ಕ್ರಿಸ್ ಮಸ್ ಅನ್ನು ಪ್ರಪಂಚದಾದ್ಯಂತ ಮತ್ತು ವಿಶೇಷವಾಗಿ ಕ್ರಿಶ್ಚಿಯನ್-ಬಹುಸಂಖ್ಯಾತ ದೇಶಗಳಲ್ಲಿ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನು ಈ ದಿನದಂದು ಜನಿಸಿದನೆಂದು ನಂಬಲಾಗಿದೆ. ಜನರನ್ನು ಪಾಪಗಳಿಂದ ಮುಕ್ತಗೊಳಿಸಲು ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಲು ದೇವರು ಅವರನ್ನು ಭೂಮಿಗೆ ಕಳುಹಿಸಿದನು ಎನ್ನಲಾಗಿದೆ.
 

Tap to resize

ಕ್ರಿಸ್ ಮಸ್ ಹಬ್ಬದ ಇತಿಹಾಸ (history of Christmas)

ಕ್ರಿಸ್ ಮಸ್ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಕತೆಗಳನ್ನು ಹೇಳಲಾಗುತ್ತದೆ. ಆದರೆ ಮೊದಲ ಕ್ರಿಸ್ಮಸ್ ಹಬ್ಬವನ್ನು ರೋಮ್‌ನಲ್ಲಿ ಆಚರಿಸಲಾಯಿತು ಎಂದು ನಂಬಲಾಗಿದೆ. ಆದರೆ ಇಲ್ಲಿ ಈ ದಿನವನ್ನು ಸೂರ್ಯ ದೇವರ ಜನ್ಮದಿನವೆಂದು ಆಚರಿಸಲಾಗುತ್ತದೆ. ಕ್ರಿ.ಶ. 330ರ ಹೊತ್ತಿಗೆ, ರೋಮ್‌ನಲ್ಲಿ ಕ್ರಿಶ್ಚಿಯಾನಿಟಿಯ ಪ್ರಭಾವ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸಿತು ಮತ್ತು ಈ ಧರ್ಮದ ಅನುಯಾಯಿಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಾ ಹೋಯಿತು. ಅದೇ ಸಮಯದಲ್ಲಿ, ಕೆಲವು ವರ್ಷಗಳ ನಂತರ, ರೋಮ್‌ನಲ್ಲಿ ಕ್ರಿಶ್ಚಿಯಾನಿಟಿಯ ಅನುಯಾಯಿಗಳು ಯೇಸು ಕ್ರಿಸ್ತನನ್ನು ಸೂರ್ಯ ದೇವರೆಂದು ಪರಿಗಣಿಸಿದರು ಮತ್ತು ಅಂದಿನಿಂದ ಕ್ರಿಸ್ಮಸ್ ಹಬ್ಬವನ್ನು ಡಿಸೆಂಬರ್ 25 ರಂದು ಆಚರಿಸಲು ಪ್ರಾರಂಭಿಸಿದರು ಎನ್ನಲಾಗಿದೆ.

ಯೇಸು ಕ್ರಿಸ್ತನ ಜನನದ ಇತಿಹಾಸ (Birth of Jesus Christ)

ಯೇಸು ಕ್ರಿಸ್ತನು ಕ್ರಿ.ಪೂ. 4ರಲ್ಲಿ ಬೆಥ್ಲೆಹೆಮ್ ನಲ್ಲಿ ಮೇರಿ ಮತ್ತು ಯೋಸೇಫರಿಗೆ ಜನಿಸಿದನೆಂದು ನಂಬಲಾಗಿದೆ. ಅವರು ಲಾಯದಲ್ಲಿ ಜನಿಸಿದರು. ಅವನ ತಂದೆ ಮತ್ತು ಯೇಸು ಬಡಗಿಗಳಾಗಿದ್ದರು ಮತ್ತು 30ನೇ ವಯಸ್ಸಿನಲ್ಲಿ, ಅವನು ಸಾರ್ವಜನಿಕ ಜಾಗೃತಿ ಕೆಲಸ ಪ್ರಾರಂಭಿಸಿದನು ಎಂದು ಸಹ ಹೇಳಲಾಗುತ್ತದೆ. ಇವರು ಹುಟ್ಟಿದ ದಿನವನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ.

ಕ್ರಿಸ್ಮಸ್ ಟ್ರೀ ಕುರಿತಾದ ವಿಶೇಷ ಮಾಹಿತಿ (Interesting facts about Christmas tree):

ಕ್ರಿಸ್ಮಸ್ ಕೆಲವೇ ದಿನಗಳಲ್ಲಿ ಬರಲಿದೆ. ಕ್ರಿಸ್‌ಮಸ್ ಹಬ್ಬದಂದು, ಲಾರ್ಡ್ ಯೇಸುವಿನ ಜನ್ಮದಿನವನ್ನು ಪ್ರಪಂಚದಾದ್ಯಂತ ಸಾಮರಸ್ಯ ಮತ್ತು ಪ್ರೀತಿಯಿಂದ ಆಚರಿಸಲಾಗುತ್ತದೆ. ಇದು ಕ್ರಿಶ್ಚಿಯನ್ನರ ಪ್ರಮುಖ ಹಬ್ಬವಾಗಿದ್ದರೂ, ಕಾಲಾನಂತರದಲ್ಲಿ, ಪ್ರತಿಯೊಂದು ಧರ್ಮ ಮತ್ತು ವರ್ಗದ ಜನರು ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಕ್ರಿಸ್‌ಮಸ್ ದಿನದಂದು, ಜನರು ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಕೇಕ್ ಕತ್ತರಿಸುವ ಮೂಲಕ ಕ್ರಿಸ್‌ಮಸ್ ಅನ್ನು ಆನಂದಿಸುತ್ತಾರೆ. 

ಕ್ರಿಸ್ಮಸ್ ಹಬ್ಬದಲ್ಲಿ ಕೇಕ್ಸ್ ಮತ್ತು ಉಡುಗೊರೆಗಳನ್ನು ಹೊರತುಪಡಿಸಿ, ಮತ್ತೊಂದು ವಿಷಯ ವಿಶೇಷ ಮಹತ್ವ ಹೊಂದಿದೆ, ಅದು ಕ್ರಿಸ್‌ಮಸ್ ಟ್ರೀ. ಪ್ರತಿ ವರ್ಷ ಕ್ರಿಸ್ ಮಸ್ ಹಬ್ಬದಂದು, ಜನರು ಮನೆಯಲ್ಲಿ ಕ್ರಿಸ್‌ಮಸ್ ಮರಗಳನ್ನು ನೆಡುತ್ತಾರೆ. ಇದನ್ನು ವರ್ಣರಂಜಿತ ದೀಪಗಳು ಮತ್ತು ಆಟಿಕೆಗಳಿಂದ ಅಲಂಕರಿಸಲಾಗುತ್ತದೆ.  ಆದರೆ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಕ್ರಿಸ್‌ಮಸ್ ಮರವು ಏಕೆ ತುಂಬಾ ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಅದರ ಬಗ್ಗೆ ತಿಳಿದುಕೊಳ್ಳೋಣ... 

ಕ್ರಿಸ್ ಮಸ್ ಟ್ರೀ ಇತಿಹಾಸ (history of Christmas tree)

ಕ್ರಿಸ್ಮಸ್ ವೃಕ್ಷದ ಬಗ್ಗೆ ಅನೇಕ ರೀತಿಯ ನಂಬಿಕೆಗಳಿವೆ. ಒಂದು ನಂಬಿಕೆಯ ಪ್ರಕಾರ, ಇದನ್ನು 16ನೇ ಶತಮಾನದ ಕ್ರಿಶ್ಚಿಯಾನಿಟಿಯ ಸುಧಾರಕ ಮಾರ್ಟಿನ್ ಲೂಥರ್ ಪ್ರಾರಂಭಿಸಿದನು. ಮಾರ್ಟಿನ್ ಲೂಥರ್ ಡಿಸೆಂಬರ್ 24ರ ಸಂಜೆ ಹಿಮಾವೃತ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅವನು ಹಸಿರು ಮರವನ್ನು ನೋಡಿದನು. ಮರದ ಕೊಂಬೆಗಳು ಚಂದ್ರನ ಬೆಳಕಿನಿಂದ ಹೊಳೆಯುತ್ತಿದ್ದವು. ಇದರ ನಂತರ, ಮಾರ್ಟಿನ್ ಲೂಥರ್ ತನ್ನ ಮನೆಯಲ್ಲಿ ಈ ಮರ ನೆಟ್ಟನು. ಅದನ್ನು ಸಣ್ಣ ಮೇಣದ ಬತ್ತಿಗಳಿಂದ ಅಲಂಕರಿಸಿದನು. ಇದರ ನಂತರ, ಅವರು ಯೇಸುಕ್ರಿಸ್ತನ ಜನ್ಮದಿನದ ಗೌರವಾರ್ಥವಾಗಿ ಈ ಮರವನ್ನು ಅಲಂಕರಿಸಿದರು ಎನ್ನಲಾಗುತ್ತದೆ. ಅದನ್ನೆ ಮುಂದೆ ಜನರು ಅನುಸರಿಸಿಕೊಂಡು ಬಂದರು ಎನ್ನಾಲಾಗಿದೆ.

ಕ್ರಿಸ್ ಮಸ್ ಟ್ರೀಯ ಮಹತ್ವ (importance of Christmas tree)

ಪ್ರಾಚೀನ ಕಾಲದಿಂದಲೂ, ಕ್ರಿಸ್ ಮಸ್ ಮರವನ್ನು ಜೀವನದ ಅಭಿವೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ದೇವರು ನೀಡಿದ ದೀರ್ಘಾಯುಷ್ಯದ ಆಶೀರ್ವಾದವಾಗಿ ಪರಿಗಣಿಸಲಾಗಿದೆ. ಇದನ್ನು ಅಲಂಕರಿಸುವುದರಿಂದ ಮನೆಯ ಮಕ್ಕಳ ಆಯಸ್ಸು ಹೆಚ್ಚಿಸುತ್ತದೆ ಎಂದು ನಂಬಲಾಗಿತ್ತು. ಈ ಕಾರಣಕ್ಕಾಗಿ, ಕ್ರಿಸ್ ಮಸ್ ಮರವನ್ನು ಪ್ರತಿ ವರ್ಷ ಕ್ರಿಸ್ ಮಸ್ ದಿನದಂದು ಅಲಂಕರಿಸಲು ಪ್ರಾರಂಭಿಸಲಾಯಿತು.

Latest Videos

click me!