ಮನೆಯಲ್ಲಿ ಸಾಕುಪ್ರಾಣಿ ಇದ್ದರೆ, ಜೀವನ ತುಂಬಾ ಸಂತೋಷವಾಗಿರುತ್ತೆ. ಮನೆಯಲ್ಲಿ ನಾಯಿ (pet dog) ಇದ್ದರೆ, ಇಡೀ ದಿನ ಅದರೊಂದಿಗೆ ಆಟವಾಡುವುದರಲ್ಲಿ ಕಳೆಯುತ್ತದೆ. ನೀವು ಆಫೀಸಿನಿಂದ ಹಿಂದಿರುಗಿದಾಗ, ನಾಯಿ ನಿಮ್ಮ ಕುಟುಂಬ ಸದಸ್ಯರಿಗಿಂತ ಹೆಚ್ಚು ಸಂತೋಷ ಪಡುತ್ತೆ. ಅದು ಯಾವ ತಳಿಯ ನಾಯಿಯಾಗಿದ್ದರೂ, ಅದರ ಕೆಲವು ಅಭ್ಯಾಸಗಳು ಒಂದೇ ಆಗಿರುತ್ತವೆ. ನಾಯಿ ನಿಮ್ಮೊಂದಿಗೆ ಆಡಲು ಇಷ್ಟಪಡುತ್ತೆ, ಜೊತೆಗೆ ನಿಮ್ಮ ಗಮನ ಸೆಳೆಯಲು ಇಷ್ಟಪಡುತ್ತೆ, ನೀವು ಹೊರಟಾಗ ಅದಕ್ಕೂ ಬೇಸರವಾಗುತ್ತದೆ. ಆದರೆ ಕೆಲವು ನಾಯಿಗಳು ವಿಭಿನ್ನ ಗುಣವನ್ನು ಹೊಂದಿರುತ್ತೆ. ಅವುಗಳ ಬಗ್ಗೆ ತಿಳಿಯೋಣ.