ಭಾರತೀಯ ರೈಲುಗಳ ಎಲ್ಲಾ ಬೋಗಿಗಳು ಒಂದೇ ರೀತಿ ಇರಲ್ಲ. ಅವುಗಳಲ್ಲಿರುವ ಸೌಲಭ್ಯಗಳಿಗೆ ಅನುಗುಣವಾಗಿ, ವಿಭಿನ್ನ ಕೋಡ್‌ಗಳನ್ನು ನೀಡಲಾಗಿದೆ. ಆ ಪ್ರಕಾರ ರೈಲುಗಳಲ್ಲಿ M1 ಕೋಡ್ ಇರುವ ಬೋಗಿಗಳು ಇತರ ಬೋಗಿಗಳಿಗಿಂತ ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿದುಕೊಳ್ಳೋಣ.
ಸೀಟ್ ನಂಬರ್‌ನಲ್ಲಿ S ಇದ್ದರೆ ಅದು ಸ್ಲೀಪರ್ ಕೋಚ್ ಎಂದು ಅರ್ಥ. ಅದೇ ರೀತಿ, ಟಿಕೆಟ್‌ನಲ್ಲಿ B1 ಅಥವಾ B2 ಎಂದು ಬರೆದಿದ್ದರೆ, ನಿಮ್ಮ ಟಿಕೆಟ್ ಮೂರನೇ AC ಬೋಗಿಯಲ್ಲಿದೆ ಎಂದು ಅರ್ಥ.
M ಕೋಡ್ 3 ಟೈರ್ ಎಕಾನಮಿ AC ಬೋಗಿಯನ್ನು (AC-3) ಸೂಚಿಸುತ್ತದೆ. M1 ಬೋಗಿಯಲ್ಲಿರುವ ಸೌಲಭ್ಯಗಳೆಲ್ಲವೂ ಹೆಚ್ಚಾಗಿ 3 ಟೈರ್ AC ಬೋಗಿಯಲ್ಲಿರುವಂತೆಯೇ ಇರುತ್ತವೆ.
3 ಟೈರ್ AC ಕೋಚ್‌ಗೆ ಹೋಲಿಸಿದರೆ, M ಕೋಡ್ ಇರುವ ಕೋಚ್‌ನ ಸೌಲಭ್ಯ ಮತ್ತು ದರ ಕಡಿಮೆ ಇರುತ್ತದೆ. ಈ ಬೋಗಿಗಳನ್ನು ಕೆಲವು ರೈಲುಗಳಲ್ಲಿ ಮಾತ್ರ ಸೇರಿಸಲಾಗುತ್ತದೆ.
3 ಟೈರ್ ಎಕಾನಮಿ AC ಕೋಚ್‌ನಲ್ಲಿ 72 ಸೀಟುಗಳಿರುತ್ತವೆ. ಆದರೆ M1 ಬೋಗಿಯಲ್ಲಿ 83 ಸೀಟುಗಳಿರುವುದು ಇದರ ವಿಶೇಷ. ಮೇಲಿನ ಬರ್ತ್‌ಗೆ ಹತ್ತಲು ಅನುಕೂಲಕರವಾದ ಮೆಟ್ಟಿಲುಗಳೂ ಇರುತ್ತವೆ.
ಎರಡು ಲೋವರ್ ಬರ್ತ್, ಎರಡು ಮಿಡ್ಲ್ ಬರ್ತ್, ಎರಡು ಅಪ್ಪರ್ ಬರ್ತ್, ಎರಡು ಸೈಡ್ ಬರ್ತ್ (ಲೋವರ್, ಅಪ್ಪರ್) ಹೀಗೆ 3 ಟೈರ್ AC ಕೋಚ್‌ನಲ್ಲಿರುವಂತೆ ಬರ್ತ್ ವ್ಯವಸ್ಥೆ M1 ಕೋಚ್‌ನಲ್ಲೂ ಇರುತ್ತದೆ.
ಅದೇ ರೀತಿ A ಕೋಚ್ ಎಂದರೆ ಎರಡನೇ AC ಕ್ಲಾಸ್‌ನಲ್ಲಿರುವುದನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, D ಎಂದು ಉಲ್ಲೇಖಿಸಿದ್ದರೆ ಎರಡನೇ ಸೀಟಿಂಗ್ ಕ್ಲಾಸ್ ಕೋಚ್‌ನ ಟಿಕೆಟ್ ಎಂದು ಅರ್ಥ.