ಹೊಸ ದಾಖಲೆ ಬರೆದ ಭಾರತೀಯ ರೈಲ್ವೆ; ಒಂದೇ ದಿನ ನ್ಯೂಜಿಲ್ಯಾಂಡ್ ಜನಸಂಖ್ಯೆಗಿಂತಲೂ ಅಧಿಕ ಜನರ ಪ್ರಯಾಣ

First Published | Nov 7, 2024, 1:29 PM IST

ಭಾರತೀಯ ರೈಲ್ವೆ ಹೊಸ ದಾಖಲೆ ಬರೆದಿದೆ. ಒಂದೇ ದಿನ ರೈಲ್ವೆಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಜನಸಂಖ್ಯೆಗಿಂತಲೂ ಅಧಿಕ ಜನರು ಪ್ರಯಾಣಿಸಿದ್ದಾರೆ.

ಈ ವರ್ಷ ಅಕ್ಟೋಬರ್ ಕೊನೆ ಮತ್ತು ನವೆಂಬರ್ ಮೊದಲ ವಾರ ಹಬ್ಬದ ಸೀಸನ್‌ ಆಗಿತ್ತು. ಈ ಸಂದರ್ಭದಲ್ಲಿ ಕುಟುಂಬದ ಜೊತೆ ಆಚರಣೆಗೆ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಿರುತ್ತಾರೆ. ಇದೀಗ ಈ ಹಬ್ಬದ ಸಂದರ್ಭದಲ್ಲಿ ಭಾರತೀಯ ರೈಲ್ವೆ ಹೊಸ ದಾಖಲೆಯನ್ನು ಬರೆದಿದೆ.

ಈ ವರ್ಷದ ಅಕ್ಟೋಬರ್ 1ರಿಂದ 5ನೇ ನವೆಂಬರ್ ಅವಧಿ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ 7,724 ಸ್ಪೆಷಲ್ ರೈಲುಗಳು ಚಲಿಸಿವೆ. ಹಾಲಿ ರೈಲುಗಳಿಗೆ ಹೆಚ್ಚುವರಿ ಬೋಗಗಳನ್ನು ಅಳವಡಿಕೆ ಮಾಡಲಾಗಿತ್ತು. ಇದೇ ಹಬ್ಬದ ಸಂದರ್ಭದಲ್ಲಿ ಕಳೆದ ವರ್ಷ 4,500 ವಿಶೇಷ ರೈಲುಗಳು ಚಲಿಸಿದ್ದವು. ಕಳದ ಬಾರಿಗಿಂತ ಈ ವರ್ಷ ಶೇ.73ರಷ್ಟು ಅಧಿಕ ರೈಲುಗಳು ಸಂಚರಿಸಿವೆ.

Tap to resize

2024 ನವೆಂಬರ್ 4ರಂದು ಭಾರತೀಯ ರೈಲ್ವೆಯಲ್ಲಿ 120 ಲಕ್ಷ (1.20 ಕೋಟಿ) ಪ್ರಯಾಣಿಕರು ಪ್ರಯಾಣಿಸಿದ್ದಾರೆ. 20 ಲಕ್ಷ ಪ್ರಯಾಣಿಕರು ರಿಸರ್ವ್ಡ್ ಮತ್ತು 1 ಕೋಟಿ ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್ ಪಡೆದು ಜನರಲ್ ಬೋಗಿಗಳಲ್ಲಿ ಪ್ರಯಾಣಿಸಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಒಂದು ದಿನ ಪ್ರಯಾಣಿಸಿದವರ ಸಂಖ್ಯೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಜನಸಂಖ್ಯೆಗಿಂತಲೂ ಅಧಿಕವಾಗಿದೆ.

ಈ ವರ್ಷದಲ್ಲಿ ಒಂದು ದಿನದಲ್ಲಿ ಪ್ರಯಾಣಿಸಿದ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆ ಇದಾಗಿದೆ. ಇಲ್ಲಿಯವರೆಗೆ ಭಾರತೀಯ ರೈಲ್ವೆಯು ಅಕ್ಟೋಬರ್ 1 ರಿಂದ ನವೆಂಬರ್ 5, 2024 ರವರೆಗೆ ವಿಶೇಷ ರೈಲುಗಳಲ್ಲಿ 65 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ನವೆಂಬರ್ 4ರಂದು ಮಾತ್ರ ಪ್ರಯಾಣಿಕರ ಸಂಖ್ಯೆ ಅತ್ಯಧಿಕವಾಗಿತ್ತು.

ನವೆಂಬರ್ 8ರಂದು ಸಹ ವಿಶೇಷ ರೈಲುಗಳು ಚಲಿಸಲಿವೆ ಎಂದು ಮಾಹಿತಿ ನೀಡಲಾಗಿದೆ. ದೀಪಾವಳಿ ಸಂಭ್ರಮ ಭಾರತೀಯ ರೈಲ್ವೆ ಇಲಾಖೆಗೆ ದೊಡ್ಡಮಟ್ಟದ ಆದಾಯವನ್ನು ತಂದುಕೊಟ್ಟಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ನಿಯಂತ್ರಿಸಲು ಆರ್‌ಪಿಎಫ್‌ ಪೊಲೀಸರು ಹರಸಹಾಸಪಟ್ಟಿದ್ದಾರೆ.

Indian Railway

ನವೆಂಬರ್ 8ರಂದು 164 ವಿಶೇಷ ರೈಲುಗಳು ಚಲಿಸಲಿದ್ದು, ಹಂತ ಹಂತವಾಗಿ ಸ್ಪೆಷನ್ ಟ್ರೈನ್ ಸಂಖ್ಯೆ ಇಳಿಕೆಯಾಗಲಿದೆ. ನವೆಂಬರ್ 9ರಂದು 160, ನವೆಂಬರ್ 10ರಂದು 161, ನವೆಂಬರ್ 11ರಂದು 155 ಸ್ಪೆಷಲ್ ಟ್ರೈನ್‌ಗಳನ್ನು ಚಲಿಸುವ ಉದ್ದೇಶವನ್ನು ಭಾರತೀಯ ರೈಲ್ವೆ ಹೊಂದಿದೆ.

Latest Videos

click me!