ಭಾರತದಲ್ಲಿರುವ ಒಂದು ಕಟ್ಟ ಕಡೆಯ ರೈಲ್ವೇ ನಿಲ್ದಾಣದ ಬಗ್ಗೆ ತಿಳಿದರೆ, ನಿಮಗೆ ಅಚ್ಚರಿಯಾಗಬಹುದು. ಇದು ವರ್ಷದಲ್ಲಿ ಎರಡು ಬಾರಿ ಮಾತ್ರ ಓಪನ್ ಆಗಲಿದ್ದು, ಫ್ಲಾಟ್ ಫಾರಂ ಪ್ರವೇಶಕ್ಕೆ ವೀಸಾ ಅಗತ್ಯವಿದೆ ಎಂದರೆ ನಿಮಗೂ ಅಚ್ಚರಿಯಾಗಬಹುದು.
ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ದೇಶಾದ್ಯಂತ ಸಾವಿರಾರು ರೈಲುಗಳು ಓಡುತ್ತಿವೆ. ಭಾರತದ ಕೊನೆಯ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಈ ರೈಲು ನಿಲ್ದಾಣದಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ರೈಲುಗಳು ಓಡುತ್ತವೆ.
27
ಭಾರತದ ಕೊನೆಯ ರೈಲು ನಿಲ್ದಾಣ
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿರುವ ಈ ವಿಶಿಷ್ಟ ರೈಲು ನಿಲ್ದಾಣವು ರೈಲ್ವೆ ಮತ್ತು ರಾಷ್ಟ್ರೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಈ ನಿಲ್ದಾಣ ಪಾಕಿಸ್ತಾನ ಗಡಿಗೆ ಹತ್ತಿರದಲ್ಲಿದೆ ಮತ್ತು ಪಾಕಿಸ್ತಾನದ ಲಾಹೋರ್‌ಗೆ ಪ್ರವೇಶ ದ್ವಾರವೆಂದು ಪರಿಗಣಿಸಲ್ಪಟ್ಟಿದೆ.
37
ಭಾರತದ ಕೊನೆಯ ರೈಲು ನಿಲ್ದಾಣ
1885 ರಲ್ಲಿ ಸ್ಥಾಪನೆಯಾದ ಈ ನಿಲ್ದಾಣವು ಫಿರೋಜ್‌ಪುರವನ್ನು ಈಗ ಪಾಕಿಸ್ತಾನದ ಭಾಗವಾಗಿರುವ ಕಸೂರ್‌ಗೆ ಸಂಪರ್ಕಿಸುವ ರೈಲು ಮಾರ್ಗದ ಆರಂಭವನ್ನು ಸೂಚಿಸುತ್ತದೆ. ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ.
47
ಭಾರತದ ಕೊನೆಯ ರೈಲು ನಿಲ್ದಾಣ
ಪಾಕಿಸ್ತಾನ ಗಡಿಗೆ ಹತ್ತಿರವಿರುವ ಈ ನಿಲ್ದಾಣದಿಂದ ನಿಯಮಿತ ರೈಲು ಸೇವೆಗಳಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಲು ವರ್ಷಕ್ಕೆ ಎರಡು ಬಾರಿ ವಿಶೇಷ ರೈಲು ಓಡುತ್ತದೆ.
57
ಭಾರತದ ಕೊನೆಯ ರೈಲು ನಿಲ್ದಾಣ
ವಿಶೇಷ ರೈಲು ಫಿರೋಜ್‌ಪುರದಿಂದ ಹುಸೈನಿವಾಲಾ ಗಡಿಗೆ 10 ಕಿ.ಮೀ. ಮೊದಲು ಲಾಹೋರ್‌ವರೆಗೆ ಈ ಮಾರ್ಗ ವಿಸ್ತರಿಸಿತ್ತು. ಆದರೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಸಟ್ಲೆಜ್ ನದಿ ಸೇತುವೆ ಒಡೆದು ಮುಚ್ಚಲಾಯಿತು.
67
ಭಾರತದ ಕೊನೆಯ ರೈಲು ನಿಲ್ದಾಣ
ಪಾಕಿಸ್ತಾನ ಗಡಿಗೆ ಹತ್ತಿರವಿರುವ ಭಾರತದ ಕೊನೆಯ ರೈಲು ನಿಲ್ದಾಣ ಅತ್ತಾರಿ ಶ್ಯಾಮ್ ಸಿಂಗ್ ರೈಲು ನಿಲ್ದಾಣ. ಇದನ್ನು ವಾಘಾ ನಿಲ್ದಾಣ ಎಂದೂ ಕರೆಯುತ್ತಾರೆ. ಇನ್ನು ಈ ನಿಲ್ದಾಣಕ್ಕೆ ಭೇಟಿ ನೀಡಲು ನಿಮಗೆ ವೀಸಾ ಪಡೆಯುವ ಅಗತ್ಯವಿದೆ.
77
ಭಾರತದ ಕೊನೆಯ ರೈಲು ನಿಲ್ದಾಣ
ಪಶ್ಚಿಮ ಬಂಗಾಳದಲ್ಲಿರುವ ಸಿಂಗಾಬಾದ್ ರೈಲು ನಿಲ್ದಾಣ ಬಾಂಗ್ಲಾದೇಶದ ಬಳಿ ಇದೆ. ಈ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. ಈ ನಿಲ್ದಾಣವನ್ನು ಸರಕು ಸಾಗಣೆಗೆ ಬಳಸಲಾಗುತ್ತದೆ.