News Year 2023: ಗೋವಾಕ್ಕೆ ಟೂರ್ ಪ್ಲ್ಯಾನ್ ಮಾಡಿದ್ರೆ ಈ ಮಿಸ್ಟೇಕ್ಸ್ ಅವೈಯ್ಡ್ ಮಾಡಿ…

Published : Dec 22, 2022, 05:27 PM IST

ಗೋವಾ ಬೀಚ್ ಟೂರ್ ಮಾಡೋದು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅಲ್ಲಿ ನೀವು ತಡರಾತ್ರಿವರೆಗೆ ಸಾಕಷ್ಟು ಎಂಜಾಯ್ ಮಾಡಬಹುದು. ಆದರೆ ಅಲ್ಲಿಗೆ ಹೋದಾಗ ನೀವು ಬೀಚ್ ಸೈಡ್ ಕೆಲವೊಂದು ಆಹಾರಗಳನ್ನು ಅವಾಯ್ಡ್ ಮಾಡಬೇಕು. ಯಾಕೆ ಅನ್ನೋದನ್ನು ತಿಳಿಯಲು ನೀವು ಮುಂದೆ ಓದಬೇಕು. 

PREV
17
News Year 2023: ಗೋವಾಕ್ಕೆ ಟೂರ್ ಪ್ಲ್ಯಾನ್ ಮಾಡಿದ್ರೆ ಈ ಮಿಸ್ಟೇಕ್ಸ್ ಅವೈಯ್ಡ್ ಮಾಡಿ…

ಗೋವಾಕ್ಕೆ ಭೇಟಿ ನೀಡಲು ಇಷ್ಟಪಡುವವರು ಇಲ್ಲಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು, ಉದಾಹರಣೆಗೆ ಇಲ್ಲಿ ಯಾವ ಕಡಲ ತೀರಗಳು ವಿದೇಶಿಯರಿಗೆ ಮಾತ್ರ ಎಂಟ್ರಿ ನೀಡುತ್ತೆ, ಎಲ್ಲಿ ಮತ್ತು ಯಾವ ಸ್ಥಳ ಹೆಚ್ಚು ಜನಸಂದಣಿಯನ್ನು ಹೊಂದಿರುತ್ತೆ. ಇಲ್ಲಿ ಯಾವೆಲ್ಲಾ ಆಹಾರ ಸೇವಿಸಬಹುದು ಅನ್ನೋ ಮಾಹಿತಿಗಳನ್ನು. ಗೋವಾಕ್ಕೆ ಹೋಗುವ ಮೊದಲು ತಿಳಿದಿದ್ದರೆ ಉತ್ತಮ. ಆದರೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾದ ಮತ್ತೊಂದು ವಿಷಯವೆಂದರೆ ಇಲ್ಲಿನ ಆಹಾರ. ಬೀಚ್ ಬಳಿ ಈ ಆಹಾರ ತಿಂದರೆ ನೀವು ಅನಾರೋಗ್ಯಕ್ಕೆ (unhealthy foods) ಒಳಗಾಗುವ ಸಾಧ್ಯತೆ ಇದೆ. 

27

ಗೋವಾ ಎಂದಾಗ ನಿಮಗೆ ಏನು ನೆನಪಾಗುತ್ತೆ, ಹಲವಾರು ಬೀಚ್ ಗಳು, ಬಿಸಿಲು ಇದ್ದೇ ಇರುತ್ತೆ, ಹಳೆಯ ಚರ್ಚ್ ಗಳು, ಡ್ರಿಂಕ್ಸ್ ಹೀಗೆ ಏನೇನೋ ನೆನಪಾಗುತ್ತೆ ಅಲ್ವಾ? ಆದರೆ ಬೀಚ್ ಗೆ ಹೋದ ಟೈಮ್ ಲ್ಲಿ ನೀವು ಏನೇನೋ ತಿಂದ್ರೆ ಸುಮ್ನೆ ಖರ್ಚಾಗೋದ್ರ ಜೊತೆಗೆ, ಹೊಟ್ಟೆಯೂ ಹಾಳಾಗುತ್ತೆ. ಇದರಿಂದ ನಿಮ್ಮ ಟ್ರಿಪ್ ನಿಮಗೆ ಬೇಸರ ತರಬಹುದು. ಹಾಗಿದ್ರೆ ಬೀಚ್ ಹೋದಾಗ ಯಾವ ಆಹಾರ ಸೇವಿಸಬಾರದು ನೋಡೋಣ. 

37
ಮಾಂಸ (meat)

ಬೇಸಿಗೆಯಲ್ಲಿ ನಾನ್-ವೆಜ್ ತಿನ್ನಬಾರದು ಎಂದು ಹಿರಿಯರು ಪದೇ ಪದೇ ಹೇಳಿರೋದನ್ನು ನೀವು ಕೇಳಿರಬಹುದು. ಏಕೆಂದರೆ ಈ ಆಹಾರಗಳು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತವೆ. ಬೀಚ್ ಸೈಡ್ ಲ್ಲೂ ಹೆಚ್ಚಿನ ಶಾಖವಿರುತ್ತೆ, ಆದ್ದರಿಂದ ಈ ಸ್ಥಳಗಳಲ್ಲಿ ಮಾಂಸವನ್ನು ತಿನ್ನುವುದನ್ನು ತಪ್ಪಿಸಿ.

47
ಸೋಡಾ (soda)

ಕಡಲತೀರದಲ್ಲಿ ನೇರವಾಗಿ ಸನ್ ಬಾತ್ ಆನಂದಿಸುವುದರಿಂದ ದೇಹವು ಡಿಹೈಡ್ರೇಟ್ ಆಗುತ್ತೆ, ಆದ್ದರಿಂದ ಸೋಡಾ ಬದಲಿಗೆ ನೀರು ಅಥವಾ ಜ್ಯೂಸ್ ಕುಡಿಯಿರಿ, ಏಕೆಂದರೆ ಸೋಡಾವು ಮೂತ್ರವರ್ಧಕ ಅಂಶವನ್ನು ಹೊಂದಿರುತ್ತದೆ, ಇದು ನಿಮ್ಮ ದೇಹದಲ್ಲಿನ ನೀರನ್ನು ಕಡಿಮೆ ಮಾಡುತ್ತದೆ.

57
ಸಲಾಡ್’ಗಳು (salad)

ಹಾಗೇ ದನೋಡಿದ್ರೆ ಸಲಾಡ್ ತಿನ್ನೋದ್ರಿಂದ ಹೆಚ್ಚಿನ ಸಮಸ್ಯೆ ಏನೂ ಉಂಟಾಗಲ್ಲ. ಆದರೆ ಬೀಚ್‌ನಲ್ಲಿ ಅತಿಯಾದ ಗಾಳಿಯಿಂದಾಗಿ, ಸಲಾಡ್ ಹಾಳಾಗಬಹುದು, ನೀವು ಅದನ್ನು ಮುಚ್ಚಿದ ಸ್ಥಳದಲ್ಲಿ ತಿನ್ನುವುದು ಉತ್ತಮ. ಅದನ್ನು ತೆರೆದಿಟ್ಟಿದ್ದರೆ, ಅದು ಬೇಗನೆ ಹಾಳಾಗುವ ಸಾಧ್ಯತೆ ಇದೆ. ಆದುದರಿಂದ ಇಂತಹ ಆಹಾರಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

67
ಆಲ್ಕೋಹಾಲ್ (alcohol)

ಬೀಚಿನಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ದೇಹ ಡಿಹೈಡ್ರೇಟ್ ಆಗುತ್ತೆ. ಆಲ್ಕೋಹಾಲ್ ದೇಹದಲ್ಲಿ ನೀರಿನ ಕೊರತೆಯನ್ನು ಉಂಟು ಮಾಡುತ್ತದೆ, ಹಾಗೆಯೇ ಕಡಲ ತೀರದಲ್ಲಿ ನೇರ ಸೂರ್ಯನನ್ನು ಬಿಸಿಲು ಬೀಳೋದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತೆ. ಆದ್ದರಿಂದ ಇಲ್ಲಿ ಆಲ್ಕೋಹಾಲ್ ಸೇವಿಸಬೇಡಿ.

77
ಚಹಾ (tea)

ಚಹಾದಲ್ಲಿರುವ ಕೆಫೀನ್ ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಆದ್ದರಿಂದ ಬೀಚ್ ನಲ್ಲಿ ಚಹಾ ಸೇವಿಸಬೇಡಿ. ಇದರ ಬದಲಾಗಿ ನೀವು ಜ್ಯೂಸ್ ಸೇವನೆ ಮಾಡಬಹುದು. ಇದು ನಿಮ್ಮ ದೇಹವನ್ನು ದೀರ್ಘಕಾಲ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತೆ. 

Read more Photos on
click me!

Recommended Stories