ಬೈಕ್, ಕಾರ್ ರೀತಿ ರೈಲಿನಲ್ಲಿ ಗೋವುಗಳನ್ನು ಟ್ರಾನ್ಸ್‌ಪೋರ್ಟ್ ಮಾಡಬಹುದಾ?

Published : Feb 09, 2025, 10:17 AM IST

Transporting cows by train: ಭಾರತೀಯ ರೈಲ್ವೆಯಲ್ಲಿ ಜಾನುವಾರುಗಳಾದ ಹಸು, ಎಮ್ಮೆಗಳನ್ನು ಸಾಗಿಸಲು ನಿರ್ದಿಷ್ಟ ನಿಯಮಗಳಿವೆ. ಕ್ಯಾಟಲ್ ವ್ಯಾನ್ ಅಥವಾ ಪಾರ್ಸೆಲ್ ವ್ಯಾನ್‌ಗಳಲ್ಲಿ ಮಾತ್ರ ಸಾಗಣೆಗೆ ಅವಕಾಶವಿದ್ದು, ಪಶುವೈದ್ಯಕೀಯ ಪ್ರಮಾಣಪತ್ರ, ಆಹಾರ, ನೀರು ಮತ್ತು ಜೊತೆಗಾರರ ವ್ಯವಸ್ಥೆ ಕಡ್ಡಾಯ.

PREV
17
ಬೈಕ್, ಕಾರ್ ರೀತಿ ರೈಲಿನಲ್ಲಿ ಗೋವುಗಳನ್ನು ಟ್ರಾನ್ಸ್‌ಪೋರ್ಟ್ ಮಾಡಬಹುದಾ?

ಭಾರತೀಯ ರೈಲು ಸರಕುಗಳನ್ನು ಸಹ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸುವ ಕೆಲಸವನ್ನು ಮಾಡುತ್ತವೆ. ಜನರು ರೈಲಿನಲ್ಲಿ ತಮ್ಮ ಕಾರ್‌, ಬೈಕ್‌ ಅಂತಹ ವಾಹನಗಳನ್ನು ಕಳುಹಿಸಬಹುದಾಗಿದೆ. ಅದೇ ರೀತಿ ಹಸು, ಎಮ್ಮೆ ಸೇರಿದಂತೆ ಜಾನುವಾರುಗಳನ್ನು ಸಹ  ರೈಲಿನಲ್ಲಿ ಕಳುಹಿಸಬಹುದಾ? 

27

ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ನಾಲ್ಕನೇ ಸಾರಿಗೆ ವ್ಯವಸ್ಥೆಯಾಗಿದೆ. ಭಾರತೀಯ ರೈಲುಗಳಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರಿಗಾಗಿ ಪ್ರತಿನಿತ್ಯ ಸಾವಿರಾರು ರೈಲುಗಳು ಚಲಿಸುತ್ತಿವೆ. ಇದರ ಜೊತೆಯಲ್ಲಿಯೇ ಗೂಡ್ಸ್ ರೈಲುಗಳು ಚಲಿಸುತ್ತವೆ. 

37

ನೀವು ಒಂದು ನಗರದಿಂದ ಮತ್ತೊಂದು ನಗರಕ್ಕೆ ಶಿಫ್ಟ್ ಆಗುತ್ತಿದ್ರೆ ರೈಲಿನಲ್ಲಿ ನಿಮ್ಮ ವಾಹನಗಳನ್ನು ತೆಗೆದುಕೊಂಡು  ಹೋಗಬಹುದು. ಇದಕ್ಕಾಗಿ ಕೆಲ ಶುಲ್ಕ ಪಾವತಿಸಬೇಕಾಗುತ್ತದೆ. ವಾಹನಗಳಿಗೆ ಯಾವುದೇ ಹಾನಿಯಾಗದಂತೆ ನಿಮ್ಮ ಸ್ಥಳಕ್ಕೆ ತಲುಪಿಸಲಾಗುತ್ತದೆ.  ಇದೇ ರೀತಿಯಲ್ಲಿ ಜಾನುವಾರುಗಳನ್ನು ಕಳುಹಿಸಬಹುದಾ ಎಂಬ ಪ್ರಶ್ನೆ ಮೂಡುತ್ತದೆ.

47

ರೈಲುಗಳಲ್ಲಿ ಜಾನುವಾರುಗಳನ್ನು ತೆಗೆದುಕೊಂಡು ಹೋಗಬಹುದಾ? ಇದಕ್ಕಾಗಿ ಭಾರತೀಯ ರೈಲಿನ ನಿಯಮಗಳೇನು? ಇವುಗಳಿಗೆ ಯಾವ ರೀತಿಯ ಬುಕ್ಕಿಂಗ್ ಮಾಡಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

57

ನೀವು ರೈಲಿನಲ್ಲಿ ಎಮ್ಮೆ ಅಥವಾ ಗೋವು ರೈಲು ಮೂಲಕ ಸಾಗಿಸಲು ಬಯಸಿದ್ರೆ ಅದಕ್ಕೆ ಪ್ರತ್ಯೇಕವಾಗಿ ಬುಕ್ಕಿಂಗ್ ಮಾಡಬೇಕಾಗುತ್ತದೆ. ನಿಯಮಗಳ ಪ್ರಕಾರ, ಕ್ಯಾಟಲ್ ವ್ಯಾನ್ ಅಥವಾ ವಿಶೇಷ ಪಾರ್ಸೆಲ್ ವ್ಯಾನ್‌ಗಳಲ್ಲಿ ಮಾತ್ರ ಜಾನುವಾರುಗಳನ್ನು ಸಾಗಿಸಲು ಅನುಮತಿಸಲಾಗುತ್ತದೆ. 

67

ಹಸು ಮತ್ತು ಎಮ್ಮೆಗಳನ್ನು ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲು ಅವುಗಳ ಮಾಲೀಕರು ಪಶುವೈದ್ಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಜಾನುವಾರುಗಳ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಲೀಕರೇ ಮಾಡಬೇಕಾಗುತ್ತದೆ. ಹಾಗೆ ಅವುಗಳನ್ನು ನೋಡಿಕೊಳ್ಳಲು ಸಹ ಓರ್ವ ವ್ಯಕ್ತಿಯನ್ನು ಕಳುಹಿಸಬೇಕಾಗುತ್ತದೆ. 

77

ಜಾನುವಾರುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲು ಅವುಗಳ ತೂಕ ಮತ್ತು ದೂರಕ್ಕೆ ಅನುಗುಣವಾಗಿ ವಿವಿಧ ದರಗಳಿವೆ. ಈ ಸಮಯದಲ್ಲಿ ನೀವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ನಿಯಮಗಳನ್ನು ಸಹ ಅನುಸರಿಸಬೇಕು. ಇವುಗಳಲ್ಲಿ ಯಾವುದೇ ನಿಯಮ ಪಾಲನೆ ಮಾಡದೇ ಇದ್ರೆ ದೊಡ್ಡ ದಂಡ ತೆರಬೇಕಾಗುತ್ತದೆ. ಹಾಗಾಗಿ ಭಾರತೀಯ ರೈಲಿನ ನಿಯಮಗಳನ್ನು ತಿಳಿದುಕೊಂಡು ಜಾನುವಾರುಗಳನ್ನು ಕಳುಹಿಸಿ. 

Read more Photos on
click me!

Recommended Stories