ದೇಶದ ಈ ಗ್ರಾಮದಲ್ಲಿ ಗಡಿಯಾರ ಮುಳ್ಳು ತಿರುಗೋದು ಉಲ್ಟಾ, ಸಪ್ತಪದಿಯೂ ಉಲ್ಟಾ

Published : Nov 11, 2022, 04:07 PM IST

ಈ ಗ್ರಾಮದಲ್ಲಿ ಎಲ್ಲವೂ ಉಲ್ಟಾ, ನಮ್ಮಲ್ಲಿ ಗಡಿಯಾರ ಒಂದು, ಎರಡು, ಮೂರು ಎಂದು ಗಂಟೆಗಳಾನ್ನು ತೋರಿಸಿದರೆ, ಇಲ್ಲಿ 12 ಗಂಟೆಯಾದ ಮೇಲೆ 11 ಗಂಟೆಯಾಗುತ್ತೆ, ಎಲ್ಲವೂ ಹಿಂದಕ್ಕೆ ಹೋಗುತ್ತೆ. ಅಷ್ಟೇ ಅಲ್ಲ ಇಲ್ಲಿನ ಜನರು ಮದುವೆಯಲ್ಲಿ ಉಲ್ಟಾ ಸುತ್ತುಗಳನ್ನು ಸುತ್ತುತ್ತಾರೆ. ಇಂತಹ ಒಂದು ಪ್ರದೇಶ ಬೇರೆಲ್ಲೂ ಇಲ್ಲಿ, ನಮ್ಮ ದೇಶದಲ್ಲೇ ಇದೆ. ಹೌದು ಛತ್ತೀಸಗಡದಲ್ಲಿರುವ ಈ ಗ್ರಾಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.  

PREV
17
ದೇಶದ ಈ ಗ್ರಾಮದಲ್ಲಿ ಗಡಿಯಾರ ಮುಳ್ಳು ತಿರುಗೋದು ಉಲ್ಟಾ, ಸಪ್ತಪದಿಯೂ ಉಲ್ಟಾ

ನೀವು ಪ್ರಪಂಚದಾದ್ಯಂತ ಸಾಕಷ್ಟು ಗಡಿಯಾರಗಳನ್ನು ನೋಡಿರಬಹುದು, ಆದರೆ ಛತ್ತೀಸ್ ಗಢದ ಈ ಹಳ್ಳಿಯ ಗಡಿಯಾರಗಳು (clock) ಬಹುಶಃ ನಿಮ್ಮನ್ನು ಕನ್ ಫ್ಯೂಸ್ ಮಾದಬಹುದು. ಗಡಿಯಾರ ಮಾತ್ರವಲ್ಲ, ಈ ಹಳ್ಳಿಯಲ್ಲಿರುವ ಎಲ್ಲವೂ ನಿಮಗೆ ವಿಚಿತ್ರ ಎನಿಸಬಹುದು. ಈ ಹಳ್ಳಿಯ ಅಭ್ಯಾಸದ ಪ್ರಕಾರ, ಗಡಿಯಾರ ಮುಳ್ಳುಗಳು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. 

27

12 ಗಂಟೆಯ ನಂತರ, ನಮ್ಮಲ್ಲಿ ಗಂಟೆ 1 ಆದರೆ, ಈ ಪ್ರದೇಶದಲ್ಲಿ 12 ಗಂಟೆ ಬಳಿಕ 11 ಗಂಟೆ ಆಗುತ್ತದೆ. ಆಶ್ಚರ್ಯಪಡಬೇಡಿ, ಈ ಹಳ್ಳಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ನಿಮಗೆ ಹೇಳೋಣ. ಯಾಕೆ ಇಲ್ಲಿ ಹೀಗೆ ನಡೆಯುತ್ತೆ? ಈ ಪ್ರದೇಶ ಎಲ್ಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

37

ಇಲ್ಲಿರುವ ಗಡಿಯಾರಗಳು ಅಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ -
ಈ ಹಳ್ಳಿಯಲ್ಲಿ, ಗಡಿಯಾರಗಳು ಸಾಮಾನ್ಯ ಗಡಿಯಾರಗಳಂತೆ ಎಡದಿಂದ ಬಲಕ್ಕೆ ಚಲಿಸುವುದಿಲ್ಲ. ಇದರರ್ಥ ಇಲ್ಲಿನ ಗಡಿಯಾರಗಳು ಅಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ (clock runs backward). ಈ ಪದ್ಧತಿಯನ್ನು ಅನುಸರಿಸುವವರು ಗೊಂಡ ಆದಿವಾಸಿ ಸಮುದಾಯದ ಜನರು. ಈ ರೀತಿಯಾಗಿ  ಚಲಿಸುವ ಗಡಿಯಾರವು ಪರಿಪೂರ್ಣವಾಗಿ ಚಲಿಸುತ್ತದೆ ಮತ್ತು ಸರಿಯಾದ ಸಮಯವನ್ನು ನೀಡುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ.

47

ಕಾರಣ ಏನು?
ಈ ಸಮುದಾಯವು ತನ್ನ ಗಡಿಯಾರಕ್ಕೆ ಹೆಸರಿಟ್ಟಿದೆ. ಈ ಗಡಿಯಾರವನ್ನು ಗೊಂಡ್ವಾನ ಸಮಯ ಎಂದು ಕರೆಯಲಾಗುತ್ತದೆ. ಭೂಮಿಯು ಬಲದಿಂದ ಎಡಕ್ಕೆ ತಿರುಗುತ್ತದೆ ಎಂದು ಜನರು ಹೇಳುತ್ತಾರೆ, ಇದನ್ನು ಹೊರತುಪಡಿಸಿ, ಚಂದ್ರ ಅಥವಾ ಸೂರ್ಯ ಅಥವಾ ನಕ್ಷತ್ರಗಳು ಸಹ ಅದೇ ರೀತಿ ಚಲಿಸುವುದನ್ನು ಕಾಣಬಹುದು.
 

57

ಈ ಕಾರಣಕ್ಕಾಗಿ, ಗಡಿಯಾರದ ಈ ದಿಕ್ಕನ್ನು ಇಡಲಾಗುತ್ತದೆ -
ಈ ಕಾರಣಕ್ಕಾಗಿಯೇ ಈ ಸಮುದಾಯದ ಜನರು ತಮ್ಮ ಗಡಿಯಾರದ ದಿಕ್ಕನ್ನು ಸಹ ಅದೇ ರೀತಿಯಾಗಿ ಹೊಂದಿಸಿದೆ. ಆದರೆ ಇವರ ಈ ಅಪ್ರದಕ್ಷಿಣಾಕಾರದ ಗಡಿಯಾರದ ಚಲನೆ ಮಾತ್ರ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡುವಂತೆ ಇದೆ. 

67

ಜನರು ಸಹ ಸಪ್ತಪದಿಯನ್ನು ಹಿಮ್ಮುಖವಾಗಿ ಹೆಜ್ಜೆಹಾಕುತ್ತಾರೆ
ಗೊಂಡ ಸಮುದಾಯದ ಜನರು ಮದುವೆಯಾಗುವ ವಿಧಾನವೂ (marriage rituals) ಸಾಕಷ್ಟು ವಿಭಿನ್ನವಾಗಿದೆ. ಈ ಸಮುದಾಯದಲ್ಲಿ, ವಧು ಮತ್ತು ವರರ ಸುತ್ತುಗಳನ್ನು ಸಹ ಸಾಮಾನ್ಯ ಜನರಂತೆ ತೆಗೆದುಕೊಳ್ಳಲಾಗುವುದಿಲ್ಲ, ಆದರೆ ವಿರುದ್ಧ ದಿಕ್ಕಿನಲ್ಲಿ ತೆಗೆದುಕೊಳ್ಳಲಾಗುತ್ತದೆ.

77

ಇಲ್ಲಿ ಎಷ್ಟು ಜನರು ವಾಸಿಸುತ್ತಿದ್ದಾರೆ -
ಈ ಆಚರಣೆಯನ್ನು ಅನುಸರಿಸುವ ಬುಡಕಟ್ಟು ಸಮುದಾಯವು ಗೊಂಡ ಬುಡಕಟ್ಟು ಸಮುದಾಯವಾಗಿದೆ. ಈ ಸಮುದಾಯವು ಕೊರ್ಬಾ ಜಿಲ್ಲೆಯ ಆದಿವಾಸಿ ಶಕ್ತಿ ಪೀಠದೊಂದಿಗೆ ಸಂಬಂಧ ಹೊಂದಿದೆ ಮತ್ತು ಪ್ರಕೃತಿಯ ನಿಯಮಗಳನ್ನು (law of nature) ಅನುಸರಿಸುವುದರಿಂದ ಅವರ ಗಡಿಯಾರವು ಅತ್ಯಂತ ನೈಸರ್ಗಿಕವಾಗಿದೆ ಎಂದು ಅವರು ನಂಬುತ್ತಾರೆ. ಛತ್ತೀಸ್ ಗಢದ ಈ ಪ್ರದೇಶದಲ್ಲಿ ಸುಮಾರು 10,000 ಕುಟುಂಬಗಳು ವಾಸಿಸುತ್ತಿವೆ.

Read more Photos on
click me!

Recommended Stories