ವಿಶ್ವದ ಅತ್ಯಂತ ಸುಂದರವಾದ ಜೈಲು (Luxury prison) ಯಾವುದು? ಈ ಪ್ರಶ್ನೆ ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಈ ಪ್ರಶ್ನೆ ತುಂಬಾ ಆಸಕ್ತಿದಾಯಕವಾಗಿದೆ. ವಿಶ್ವದ ಅತ್ಯಂತ ಸುಂದರವಾದ ಜೈಲು ನಾರ್ವೆಯಲ್ಲಿದೆ. ಈ ಜೈಲಿನ ವಿಶೇಷವೆಂದರೆ ನೀವು ನಿಮ್ಮ ಕುಟುಂಬದೊಂದಿಗೆ ಇಲ್ಲಿ ಉಳಿಯಬಹುದು. ಅಂದರೆ, ಒಬ್ಬ ಕೈದಿಗೆ ಜೈಲಿನಲ್ಲಿ ಒಂಟಿತನ ಕಾಡಿದರೆ, ಅವನು ತನ್ನ ಕುಟುಂಬವನ್ನು ಕರೆತರಬಹುದು.
ಕೆಲವು ವರ್ಷಗಳ ಹಿಂದೆ, ಬಿಬಿಸಿಯಲ್ಲಿ ಈ ಜೈಲಿನ ಬಗ್ಗೆ ವರದಿಯಾದ ಬಳಿಕ ಈ ಜೈಲು ಬಹಳ ಪ್ರಸಿದ್ಧವಾಯಿತು. ಕೈದಿಗಳು ಯಾವುದೇ ತೊಂದರೆಯಿಲ್ಲದೆ ವಾಸಿಸುವ ಜೈಲು ಜಗತ್ತಿನಲ್ಲಿದೆ ಎಂದು ಆ ವರದಿ ವಿವರಿಸಿತ್ತು. ಈ ಜೈಲಿಗೆ ಒಂದು ಸಲ ಹೋದರೆ ಅಲ್ಲಿಂದ ಹೊರಬರಲು ಸಹ ಮನಸು ಬರೋದಿಲ್ಲವಂತೆ.
ನಾರ್ವೆಯ ಜೈಲು ವ್ಯವಸ್ಥೆ ಎಂದರೇನು?
ನಾರ್ವೆಯಲ್ಲಿ, ಶಿಕ್ಷೆಗಿಂತ ಬದಲಾವಣೆಯತ್ತ ಗಮನ ಹರಿಸಲಾಗಿದೆ. ನಾರ್ವೆಯಲ್ಲಿ ಇಂತಹ ಅನೇಕ ಜೈಲುಗಳಿವೆ, ಅವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ, ಆದರೆ ಅತ್ಯಂತ ಪ್ರಸಿದ್ಧವಾದದ್ದು ಬಾಸ್ಟೋಯ್ ಜೈಲು (Bastoy Prison). ವಾಸ್ತವವಾಗಿ, ಈ ಜೈಲು ತನ್ನದೇ ಆದ ಖಾಸಗಿ ಬೀಚ್ ಮತ್ತು ಸ್ಕೀ ರಿಂಕ್ ಹೊಂದಿರುವ ಪಂಚತಾರಾ ಹೋಟೆಲ್ನಂತಿದೆ.
ಬಾಸ್ಟೋಯ್ ಜೈಲಿನ ವಿಶೇಷತೆ ಏನು?
ಇಲ್ಲಿ ಸುಮಾರು 100 ಕೈದಿಗಳು (100 prisoners) ವಾಸಿಸುತ್ತಿದ್ದಾರೆ, ಅವರಲ್ಲಿ ಕೆಲವರು ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ದ್ವೀಪದಲ್ಲಿ 80 ಕಟ್ಟಡಗಳಿವೆ, ಕೃಷಿಗಾಗಿ ಭೂಮಿ, ಚಾರಣ ಮತ್ತು ಕ್ಯಾಂಪಿಂಗ್‌ಗಾಗಿ ಕಾಡು ಮತ್ತು ಇಲ್ಲಿ ಬೇಲಿ ಇಲ್ಲ. ಅತ್ಯಾಚಾರ, ಮಾದಕವಸ್ತು, ಕಳ್ಳಸಾಗಣೆ, ಕೊಲೆಯಂತಹ ಗಂಭೀರ ಅಪರಾಧಗಳನ್ನು ಮಾಡಿದ ನಂತರವೂ ಕೈದಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ.
ಇಲ್ಲಿ ಅನೇಕ ಅಪರಾಧಿಗಳೊಂದಿಗೆ 70 ಸಿಬ್ಬಂದಿಯೂ ಇದ್ದಾರೆ. ಇಲ್ಲಿನ ಕಾವಲುಗಾರರ ಬಳಿ ಬಂದೂಕುಗಳಿಲ್ಲ. ಕೆಲವು ಗಂಭೀರ ಖೈದಿಗಳನ್ನು ಹೊರತುಪಡಿಸಿ, ಉಳಿದ ಕೈದಿಗಳು ತಮ್ಮ ಕೋಣೆಯ ಬಾಗಿಲನ್ನು ತಾವೇ ಮುಚ್ಚಬಹುದು. ಅಷ್ಟೊಂದು ಸ್ವಾತಂತ್ರ್ಯವನ್ನು ಸಹ ಇಲ್ಲಿನ ಖೈದಿಗಳಿಗೆ ನೀಡಲಾಗಿದೆ.
ಕೈದಿಗಳು ಕೋಣೆಗಳಲ್ಲಿ ಹೇಗೆ ವಾಸಿಸುತ್ತಾರೆ?
ಇಲ್ಲಿನ ಕೈದಿಗಳಿಗೆ ಆರಾಮದಾಯಕ ಮರದ ಕ್ಯಾಬಿನ್ ಗಳನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ನೀವು ಬುಕ್ ಮಾಡಿದ ಹೊಟೇಲ್ ನಂತೆ ಇರುತ್ತೆ. ಇನ್ನು ಕೈದಿಗಳ ಕ್ಯಾಬಿನ್ ನಲ್ಲಿ ಟಿವಿ, ಫ್ರಿಡ್ಜ್, ಎಸಿ ಮುಂತಾದ ಅನೇಕ ಸೌಲಭ್ಯಗಳಿವೆ.
ಕೈದಿಗಳು ತಮ್ಮ ದಿನದ ಹೆಚ್ಚಿನ ಸಮಯವನ್ನು ಕೃಷಿಯಲ್ಲಿ (farming) ಕಳೆಯುತ್ತಾರೆ, ಅವರಿಗೆ ಹೊಸ ಕೌಶಲ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಈ ಜೈಲಿನಲ್ಲಿ ಕೈದಿಗಳನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಗ್ರಂಥಾಲಯ, ಚರ್ಚ್, ಸ್ಕೀ ಪ್ರದೇಶ, ಸಾಕರ್ ಪಿಚ್, ಬೀಚ್ ಇತ್ಯಾದಿಗಳೂ ಈ ಜೈಲಲ್ಲೇ ಇರುತ್ತವೆ.
ಕುಟುಂಬಗಳು ಕೈದಿಗಳೊಂದಿಗೆ ವಾಸಿಸಬಹುದು (prioners can live with family here)
ಕೈದಿಗಳ ಕುಟುಂಬವು ಇಲ್ಲಿ ಅವರೊಂದಿಗೆ ವಾಸಿಸಬಹುದು. ವಾರಾಂತ್ಯದಲ್ಲಿ, ಅವರು ಸಂದರ್ಶಕರ ಅಪಾರ್ಟ್‌ಮೆಂಟ್‌ಗಳಲ್ಲಿ ಉಳಿಯಬಹುದು. ಖೈದಿಗಳ ಮಕ್ಕಳು ಸಹ ಬಂದು ಅವರೊಂದಿಗೆ ವಾಸಿಸುತ್ತಾರೆ. ವಾರಾಂತ್ಯದಲ್ಲಿ ವಾತಾವರಣವು ತುಂಬಾ ಆಹ್ಲಾದಕರವಾಗಿರುತ್ತದೆ. ಕೈದಿಗಳು ಪ್ರತಿಯಾಗಿ ಕೆಲಸ ಮಾಡಬೇಕು ಎಂಬ ಒಂದೇ ಒಂದು ನಿಯಮವಿದೆ. ಇದರಿಂದ ಗಳಿಸಿದ ಹಣವನ್ನು ಜೈಲಿನ ಅಂಗಡಿಯಲ್ಲಿಯೇ ಖರ್ಚು ಮಾಡಲಾಗುತ್ತದೆ.
ಅದೇ ಬಿಬಿಸಿ ವರದಿಯು ಕೆಲವು ಆಘಾತಕಾರಿ ಅಂಕಿಅಂಶಗಳನ್ನು ಸಹ ಬಹಿರಂಗಪಡಿಸುತ್ತದೆ. ವರದಿಯ ಪ್ರಕಾರ, ಇಲ್ಲಿ ಗಂಭೀರ ಅಪರಾಧಗಳನ್ನು ಮಾಡಿದ ನಂತರವೂ, ಇಲ್ಲಿಗೆ ಬರುವ ಕೈದಿಗಳ ಮರು-ಅಪರಾಧದ ಪ್ರಮಾಣವು ಇಡೀ ಯುರೋಪಿನಲ್ಲೇ ಅತ್ಯಂತ ಕಡಿಮೆ. ಸಾಮಾನ್ಯವಾಗಿ, ಸರಾಸರಿ, 70 ಪ್ರತಿಶತದಷ್ಟು ಅಪರಾಧಿಗಳು ಮತ್ತೆ ಅಪರಾಧಗಳನ್ನು ಮಾಡುತ್ತಾರೆ, ಆದರೆ ನಾರ್ವೆಯಲ್ಲಿ ಈ ಸಂಖ್ಯೆ 16% ಕ್ಕೆ ಇಳಿದಿದೆ. ಇಲ್ಲಿನ ಕಾರಾಗೃಹವನ್ನು ವಿಶ್ವದ ಅತ್ಯುತ್ತಮ ಜೈಲು ಎಂದು ಕರೆಯಲಾಗುತ್ತದೆ.